ETV Bharat / sports

ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಂಡಿರುವ ಬಿಲ್ಲುಗಾರ್ತಿ ಹಿಮಾನಿ ಮಲಿಕ್​ಗೆ ಕೊರೊನಾ

ದಕ್ಷಿಣ ಏಷ್ಯಾ ಚಾಂಪಿಯನ್‌ಶಿಪ್​ ಚಿನ್ನದ ಪದಕ ವಿಜೇತೆ ಬಿಲ್ಲುಗಾರ್ತಿ ಹಿಮಾನಿ ಮಲಿಕ್​ಗೆ​ ಕೊರೊನಾ ಸೋಂಕು ತಗುಲಿದೆ.

Archer Himani Malik
ಬಿಲ್ಲುಗಾರ್ತಿ ಹಿಮಾನಿ ಮಲಿಕ್
author img

By

Published : Nov 6, 2020, 1:16 PM IST

ಪುಣೆ: ಮಹಾರಾಷ್ಟ್ರದ ಪುಣೆಯ ಆರ್ಮಿ ಸ್ಫೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಿಬಿರದಲ್ಲಿ ಭಾಗವಹಿಸಿರುವ ಬಿಲ್ಲುಗಾರ್ತಿ ಹಿಮಾನಿ ಮಲಿಕ್​ಗೆ ಕೋವಿಡ್ ಸೋಂಕು​ ತಗುಲಿರುವುದು ದೃಢಪಟ್ಟಿದೆ.

ಕೋವಿಡ್​ ಮಾರ್ಗಸೂಚಿ ಪ್ರಕಾರ ರಾಷ್ಟ್ರೀಯ ಬಿಲ್ಲುಗಾರಿಕೆ ಶಿಬಿರದಲ್ಲಿ ಪಾಲ್ಗೊಂಡಿರುವ ಎಲ್ಲ ಶಿಬಿರಾರ್ಥಿಗಳನ್ನು ಆರ್‌ಟಿ - ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದೆ. ಪರೀಕ್ಷೆಗೆ ಒಳಗಾದ 23 ಶಿಬಿರಾರ್ಥಿಗಳಲ್ಲಿ ಹಿಮಾನಿ ಮಲಿಕ್ ವರದಿ ಪಾಸಿಟಿವ್​​ ಬಂದಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ ತಿಳಿಸಿದೆ.

ದಕ್ಷಿಣ ಏಷ್ಯಾ ಚಾಂಪಿಯನ್‌ಶಿಪ್​ನಲ್ಲಿ ಚಿನ್ನದ ಪದಕ ಪಡೆದಿರುವ ಹಿಮಾನಿ ಮಲಿಕ್​ಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಪುಣೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಶಿಬಿರವನ್ನು ಸುರಕ್ಷಿತ ಕ್ರಮಗಳೊಂದಿಗೆ ಮುಂದುವರಿಸಲಾಗುವುದು ಎಂದು ಪ್ರಾಧಿಕಾರ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.