ದುಬೈ: ಇಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತದ ಸ್ಟಾರ್ ಬಾಕ್ಸರ್ ಅಮಿತ್ ಪಂಘಲ್(52 ಕೆಜಿ) ಮಂಗೋಲಿಯಾದ ಖಾರ್ಖು ಎಂಖ್ಮಂಡಖ್ ಅವರನ್ನು ಮಣಿಸಿ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.
ಇಂದು ನಡೆದ ಕ್ವಾರ್ಟರ್ ಫೈನಲ್ನಲ್ಲಿ ಒಲಿಂಪಿಕ್ ಬೌಂಡ್ ಪಂಘಲ್ ಆರಂಭದಲ್ಲಿ ಮೊಂಗೋಲಿಯನ್ ಆಕ್ರಮಣ ಆಟದೆದುರು ರಕ್ಷಣಾ ತಂತ್ರಕ್ಕೆ ಹೊತ್ತಕೊಟ್ಟರು. ನಂತರ ಗೇರ್ ಬದಲಿಸಿಕೊಂಡು ಸಮಯೋಚಿತ ಮತ್ತು ನಿಖರವಾದ ಹೊಡೆತಗಳ ಮೂಲಕ 3-2ರಲ್ಲಿ ಗೆಲುವು ಸಾಧಿಸಿದರು.
ಈ ಜಯದೊಂದಿಗೆ ಪಂಘಲ್ ಭಾರತ ಮತ್ತೊಂದು ಪದಕವನ್ನು ಖಚಿತಪಡಿಸಿದರು. ಜೊತೆಗೆ ಪಂಘಲ್ ಅವರ ಏಷ್ಯನ್ ಚಾಂಪಿಯನ್ಶಿಪ್ನ ಸತತ 3ನೇ ಪದ ಕೂಡ ಆಗಿದೆ. 2019ರಲ್ಲಿ ಚಿನ್ನ ಮತ್ತು 2017ರಲ್ಲಿ ಕಂಚಿನ ಪದಕ ಪಡೆದಿದ್ದರು. ಸೆಮಿಫೈನಲ್ ಪಂದ್ಯದಲ್ಲಿ ಕಜಕಸ್ತಾನದ ಸಕೇನ್ ಬಿಬಾಸಿನೋವ್ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆಯಿದೆ. ಇವರನ್ನು ಪಂಘಲ್ 2019ರ ಸೆಮಿಫೈನಲ್ನಲ್ಲಿ ಮಣಿಸಿದ್ದರು.
ಮತ್ತೊಂದು ಪಂದ್ಯದಲ್ಲಿ ವರೀಂದರ್ ಸಿಂಗ್ 60 ಕೆಜಿ ವಿಭಾಗದಲ್ಲಿ 5-0 ಅಂತರದಿಂದ ಫಿಲಿಪಿನೋದ ಜೆರೆ ಸ್ಯಾಮ್ಯುಯೆಲ್ ಡೆಲಾ ಕ್ರೂಜ್ ಅವರನ್ನು ಸೋಲಿಸಿದರು. ಇದರೊಂದಿಗೆ ಭಾರತ ಟೂರ್ನಿಯಲ್ಲಿ 14ನೇ ಪದಕ ಖಚಿತಪಡಿಸಿಕೊಂಡಿತು. ಭಾರತ 2019 ರಲ್ಲಿ 13 ಪದಕ ಪಡೆದಿದ್ದದ್ದು ಈ ಹಿಂದಿನ ಪ್ರಮುಖ ಸಾಧನೆಯಾಗಿತ್ತು.
ಮಹಿಳೆಯರ ವಿಭಾಗದಲ್ಲಿ ಸಾಕ್ಷಿ ( 54 ಕೆಜಿ ), ಜೈಸ್ಮಿನ್ (57 ಕೆಜಿ) ಹಾಗೂ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಸಿಮ್ರನ್‌ಜೀತ್ ಕೌರ್ (60 ಕೆಜಿ) ಹಾಗೂ ಸಂಜೀತ್ (ಪುರುಷರ 91 ಕೆಜಿ ವಿಭಾಗ) ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಇದನ್ನು ಓದಿ:ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಪದಕ ತಂದುಕೊಡಬಲ್ಲ ಟಾಪ್ 5 ಕ್ರೀಡಾಪಟುಗಳು