ETV Bharat / sports

ಸೆಪ್ಟೆಂಬರ್​ನಲ್ಲಿ ಅಥ್ಲೆಟಿಕ್ಸ್​ ಸ್ಪರ್ಧೆಗಳನ್ನು ಆರಂಭಿಸುವ ಪ್ರಯತ್ನದಲ್ಲಿ ಎಎಫ್​ಐ - Athletics Federation of India

ಒಲಿಂಪಿಕ್ಸ್​ ಮುಂದೂಡಿರುವುದರಿಂದ ಹಲವಾರು ಯುವ ಕ್ರೀಡಾಪಟುಗಳು ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು 2021ರ ಒಲಿಂಪಿಕ್ಸ್​ಗೆ ಅವಕಾಶಗಿಟ್ಟಿಸಿಕೊಳ್ಳಲು ಪ್ರಯತ್ನಿಸಬೇಕು. ಸೀನಿಯರ್ ಅಥ್ಲೀಟ್​ಗಳು ಫಿಟ್​ನೆಸ್​ ಕಡೆ ಗಮನ ನೀಡಬೇಕು ಎಂದು ಎಎಫ್​ಐ ತಿಳಿಸಿದೆ.

ಅಥ್ಲೆಟಿಕ್ಸ್​ ಸ್ಪರ್ಧೆ
ಅಥ್ಲೆಟಿಕ್ಸ್​ ಸ್ಪರ್ಧೆ
author img

By

Published : Apr 14, 2020, 1:22 PM IST

ನವದೆಹಲಿ: ದೇಶವ್ಯಾಪಿ ಆವರಿಸಿಕೊಂಡಿರುವ ಕೊರೊನಾ ಸಾಂಕ್ರಾಮಿಕ ರೋಗ ಕಡಿಮೆಯಾದರೆ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ದೇಶಿ ಸ್ಪರ್ಧೆಗಳನ್ನು ಆಯೋಜಿಸಲು ಅಥ್ಲೆಟಿಕ್ಸ್​ ಫೆಡರೇಷನ್​ ಆಫ್​ ಇಂಡಿಯಾ ನಿರ್ಧರಿಸಿದೆ.

ನಾವು 2020 ಸೆಪ್ಟೆಂಬರ್​-ಆಕ್ಟೋಬರ್​ನಲ್ಲಿ ಡೊಮೆಸ್ಟಿಕ್​ ಅಥ್ಲೆಟಿಕ್ಸ್​ ಸ್ಪರ್ಧೆಗಳನ್ನು ಆಯೋಜಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಎಎಫ್​ಐ ಅಧ್ಯಕ್ಷ ಆದಿಲ್ಲೆ ಜೆ. ಸುಮರಿವಾಲ್ಲಾ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಲಿಂಪಿಕ್ಸ್​ ಕ್ರೀಡಾಕೂಟ ಮುಂದೂಡಿರುವುದರಿಂದ ಹಲವಾರು ಯುವ ಕ್ರೀಡಾಪಟುಗಳು ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು 2021ರ ಒಲಿಂಪಿಕ್ಸ್​ಗೆ ಅವಕಾಶಗಿಟ್ಟಿಸಿಕೊಳ್ಳಲು ಪ್ರಯತ್ನಿಸಬೇಕು. ಸೀನಿಯರ್ ಅಥ್ಲೀಟ್​ಗಳು ಫಿಟ್​ನೆಸ್​ ಕಡೆ ಗಮನ ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ನಾವು ವಿದೇಶಿ ತರಬೇತಿ ಕ್ಯಾಂಪ್​ಗಳನ್ನು ಏರ್ಪಡಿಸುವುದರ ಬಗ್ಗೆ ಏನು ಹೇಳಲು ಸಾಧ್ಯವಿಲ್ಲ. ಆದರೆ 2021ಕ್ಕೆ ಅಂತರರಾಷ್ಟ್ರೀಯ ಕ್ಯಾಂಪ್​ ಹಾಗೂ ಸ್ಪರ್ಧೆಗಳಿಗೆ ಅವಕಾಶ ಕಲ್ಪಿಸುತ್ತೇವೆ ಎಂದು ಖಚಿತಪಡಿಸಿದರು.

ಎಎಫ್​ಐ ಸಮಿತಿ ಸೋಮವಾರ ನಡೆಸಿದ ಆನ್​ಲೈನ್​ ಸಭೆಯಲ್ಲಿ ರಾಷ್ಟ್ರೀಯ ತರಬೇತುದಾರರು, ಕೋಚ್​ಗಳು, ಅಥ್ಲೀಟ್​ಗಳು ಹಾಗೂ ಸಹಾಯಕ ಸಿಬ್ಬಂದಿ ಪಾಲ್ಗೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.