ETV Bharat / sports

4ನೇ ಏಷ್ಯನ್ ಖೋ ಖೋ ಚಾಂಪಿಯನ್‌ಶಿಪ್: ಭಾರತದ ಪುರುಷ, ಮಹಿಳಾ ತಂಡಕ್ಕೆ ಪ್ರಶಸ್ತಿ - ETV Bharath Kannada news

4ನೇ ಏಷ್ಯನ್ ಖೋ ಖೋ ಚಾಂಪಿಯನ್‌ಶಿಪ್​ನಲ್ಲಿ ಭಾರತದ ಮಹಿಳಾ ಮತ್ತು ಪುರುಷರ ತಂಡ ಪ್ರಶಸ್ತಿ ಬಾಚಿಕೊಂಡಿದೆ.

4th Asian Kho Kho Championship
4ನೇ ಏಷ್ಯನ್ ಖೋ ಖೋ ಚಾಂಪಿಯನ್‌ಶಿಪ್
author img

By

Published : Mar 24, 2023, 2:05 PM IST

ತಮುಲ್‌ಪುರ್ (ಅಸ್ಸೋಂ): ಅಸ್ಸೋಂನಲ್ಲಿ ಗುರುವಾರ ಮುಕ್ತಾಯಗೊಂಡ 4ನೇ ಏಷ್ಯನ್ ಖೋ ಖೋ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಚಾಂಪಿಯನ್​ ಆಗಿ ಹೊರಹೊಮ್ಮಿವೆ.

ಫೈನಲ್‌ನಲ್ಲಿ ಭಾರತೀಯ ಪುರುಷರು ನೇಪಾಳವನ್ನು 6 ಅಂಕ ಮತ್ತು ಇನ್ನಿಂಗ್ಸ್‌ನಿಂದ ಸೋಲಿಸಿದರೆ, ಭಾರತೀಯ ಮಹಿಳೆಯರು ಅದೇ ಎದುರಾಳಿಯನ್ನು 33 ಪಾಯಿಂಟ್‌ ಮತ್ತು ಇನ್ನಿಂಗ್ಸ್‌ನಿಂದ ಸೋಲಿಸಿದರು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ನಲ್ಲಿ ಭಾರತ ಪುರುಷರು ಶ್ರೀಲಂಕಾ ವಿರುದ್ಧ 45 ಅಂಕಗಳಿಂದ ಜಯ ಸಾಧಿಸಿದ್ದರು. ಮತ್ತೊಂದೆಡೆ, ನೇಪಾಳವು ಬಾಂಗ್ಲಾದೇಶವನ್ನು 1.5 ನಿಮಿಷಗಳ ಅಂತರದಲ್ಲಿ 12 ಅಂಕಗಳಿಂದ ಮಣಿಸಿದೆ.

ಮಹಿಳೆಯರ ವಿಭಾಗದ ಸೆಮಿಫೈನಲ್‌ನಲ್ಲಿ ಭಾರತವು ಬಾಂಗ್ಲಾದೇಶವನ್ನು 49 ಅಂಕ ಮತ್ತು ಇನ್ನಿಂಗ್ಸ್‌ನಿಂದ ಪರಾಭವಗೊಳಿಸಿದೆ. ಎರಡನೇ ಸೆಮಿಫೈನಲ್‌ನಲ್ಲಿ, ನೇಪಾಳವು ಶ್ರೀಲಂಕಾವನ್ನು 59 ಪಾಯಿಂಟ್‌ ಮತ್ತು ಇನಿಂಗ್ಸ್‌ನಿಂದ ಸೋಲಿಸಿ ಫೈನಲ್​ಗೆ ಬಂದಿತ್ತು. ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಕ್ರಮವಾಗಿ ಶ್ರೀಲಂಕಾ, ಬಾಂಗ್ಲಾದೇಶ 3ನೇ ಸ್ಥಾನ ಹಂಚಿಕೊಂಡಿವೆ.

ಚಾಂಪಿಯನ್‌ಶಿಪ್ ಗೆದ್ದಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ಟೀಂ ಇಂಡಿಯಾ ನಾಯಕ ಅಕ್ಷಯ್ ಭಂಗ್ರೆ ಹೇಳಿದ್ದಾರೆ. "ಭಾರತೀಯನಾಗಿ, ಭಾರತ ನೆಲದಲ್ಲಿ ಪಂದ್ಯ ಗೆದ್ದಿರುವುದಕ್ಕೆ ಖುಷಿ ಇದೆ. ಭಾಗವಹಿಸಿದ ದೇಶಗಳು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರ ಪಂದ್ಯಗಳನ್ನು ನೋಡುವುದು ಅಷ್ಟೇ ರೋಮಾಂಚನಕಾರಿಯಾಗಿತ್ತು. ಇಲ್ಲಿ ಆಡಲು ಉತ್ತಮ ವಾತಾವರಣ ಇತ್ತು. ಪ್ರೇಕ್ಷಕರ ಬೆಂಬಲ ಯಾವಾಗಲೂ ಮುಖ್ಯ. ಇದು ಆಟಗಾರರನ್ನು ಅತ್ಯುತ್ತಮ ಪ್ರದರ್ಶನ ನೀಡಲು ಪ್ರೇರೇಪಿಸುತ್ತದೆ" ಎಂದು ಅಕ್ಷಯ್ ಹೇಳಿದ್ದಾರೆ.

ಇದನ್ನೂ ಓದಿ: ಬುರ್ಖಾ ಧರಿಸಿರುವ ಫೋಟೋ ಹಂಚಿಕೊಂಡ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ

ಪಂದ್ಯಾವಳಿಯಲ್ಲಿ ಭಾರತ ಮಹಿಳಾ ತಂಡವನ್ನು ಪ್ರತಿನಿಧಿಸಿದ ರಂಜನಾ ಸರನಿಯಾ ಅವರನ್ನು ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಈ ಸ್ಪರ್ಧೆಯಲ್ಲಿ ಪುರುಷ ಮತ್ತು ಮಹಿಳಾ ಒಟ್ಟು 16 ತಂಡಗಳು ಭಾಗವಹಿಸಿದ್ದವು. ಭಾಗವಹಿಸಿದ ಇತರೆ ದೇಶಗಳೆಂದರೆ - ಬಾಂಗ್ಲಾದೇಶ, ಭೂತಾನ್, ಇಂಡೋನೇಷ್ಯಾ, ಇರಾನ್, ಮಲೇಷ್ಯಾ, ನೇಪಾಳ, ಸಿಂಗಾಪುರ್, ದಕ್ಷಿಣ ಕೊರಿಯಾ, ಶ್ರೀಲಂಕಾ ಮತ್ತು ಆತಿಥೇಯ ಭಾರತ. ಪಂದ್ಯಗಳನ್ನು ಖೋ ಖೋ ಫೆಡರೇಶನ್ ಆಫ್ ಇಂಡಿಯಾ (ಕೆಕೆಎಫ್‌ಐ) ಆಯೋಜಿಸಿದೆ. ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶ ಸರ್ಕಾರ ಮತ್ತು ಅಸ್ಸೋಂ ಖೋ ಖೋ ಅಸೋಸಿಯೇಷನ್ (ಎಕೆಕೆಎ) ಸಹಯೋಗ ನೀಡಿದೆ.

ಕ್ರೀಡಾಕೂಟದಲ್ಲಿ ಸುಮಾರು 500 ಆಟಗಾರರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರೆ, ಏಷ್ಯನ್ ಖೋ ಖೋ ಚಾಂಪಿಯನ್‌ಶಿಪ್​ಗಾಗಿ 7000 ಜನರಿಗೆ ವೀಕ್ಷಣೆ ಸಾಮರ್ಥ್ಯದ ತಾತ್ಕಾಲಿಕ ಒಳಾಂಗಣ ಕ್ರೀಡಾಂಗಣವನ್ನು ತಾಮುಲ್‌ಪುರ ಹೈಯರ್ ಸೆಕೆಂಡರಿ ಶಾಲೆಯ ನಿರ್ಮಾಣ ಮಾಡಲಾಗಿತ್ತು. ಈ ಪಂದ್ಯಗಳು ಮ್ಯಾಟ್​ ಮೇಲೆ ನಡೆದಿವೆ.

ಇದನ್ನೂ ಓದಿ: ಕ್ರಿಕೆಟ್ ಆಡಿದ ಬ್ರಿಟನ್​ ಪ್ರಧಾನಿ ರಿಷಿ ಸುನಕ್, ವಿಕೆಟ್​ ಪಡೆದು ಸಂಭ್ರಮಿಸಿದ ಜೋರ್ಡನ್​​: ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.