ಇಪೋಹ್: ಸುಲ್ತಾನ್ ಅಜ್ಲಾನ್ ಶಾ ಕಪ್ ಹಾಕಿ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾರತ ಅತಿಥೇಯ ಮಲೇಷ್ಯಾ ವಿರುದ್ಧ 4-2 ಗೋಲುಗಳಲ್ಲಿ ಜಯ ಸಾಧಿಸಿ ಟೂರ್ನಿಯನ್ನು ಶುಭಾರಂಭ ಮಾಡಿದೆ.
ಕಳೆದ ವರ್ಷ ಪ್ರಶಸ್ತಿಯ ಐದನೇ ಸ್ಥಾನ ಪಡೆದಿದ್ದ ಭಾರತ ಈ ಬಾರಿ ಪ್ರಶಸ್ತಿ ಗೆಲ್ಲಬೇಕೆಂಬ ಅಭಿಲಾಷೆಯೊಂದಿಗೆ ಕಣಕ್ಕಿಳಿದಿದೆ. ತಂಡಕ್ಕೆ 17ನೇ ನಿಮಿಷದಲ್ಲಿ ಸುಮಿತ್ ಗೋಲು ಗಳಿಸಿ 1-0ಯಲ್ಲಿ ಮುನ್ನಡೆ ದೊರಕಿಸಿಕೊಟ್ಟರು. ಆದರೆ ನಂತರದ 4 ನಿಮಿಷದಲ್ಲಿ ತಿರುಗೇಟು ನೀಡಿದ ಮಲೇಷ್ಯಾದ ರಜೈ ರಹೀಮ್ ಗೋಲು ಗಳಿಸಿ ಸಮಬಲಕ್ಕೆ ತಂದರು.
The 28th Sultan Azlan Shah Cup 2019 witnessed another set of swashbuckling fixtures on 26th March 2019 with the following scorelines.
— Hockey India (@TheHockeyIndia) March 26, 2019 " class="align-text-top noRightClick twitterSection" data="
Did your favorite team make it through today? 😉#IndiaKaGame #SultanAzlanShahCup2019 pic.twitter.com/AgZYOWZrCZ
">The 28th Sultan Azlan Shah Cup 2019 witnessed another set of swashbuckling fixtures on 26th March 2019 with the following scorelines.
— Hockey India (@TheHockeyIndia) March 26, 2019
Did your favorite team make it through today? 😉#IndiaKaGame #SultanAzlanShahCup2019 pic.twitter.com/AgZYOWZrCZThe 28th Sultan Azlan Shah Cup 2019 witnessed another set of swashbuckling fixtures on 26th March 2019 with the following scorelines.
— Hockey India (@TheHockeyIndia) March 26, 2019
Did your favorite team make it through today? 😉#IndiaKaGame #SultanAzlanShahCup2019 pic.twitter.com/AgZYOWZrCZ
27ನೇ ನಿಮಿಷದಲ್ಲಿ ಭಾರತದ ಸುಮಿತ್ ಕುಮಾರ್ ಗೋಲು ದಾಖಲಿಸಿ 2-1ರಲ್ಲಿ ಮುನ್ನಡೆ ದೊರಕಿಸಿಕೊಟ್ಟರು. ಮತ್ತೆ ವಿನೋದ್ ಕುಮಾರ್ 36ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆಯನ್ನು 3-1ಕ್ಕೇರಿಸಿದರು.
FT: 🇲🇾 2-4 🇮🇳
— Hockey India (@TheHockeyIndia) March 26, 2019 " class="align-text-top noRightClick twitterSection" data="
India beat Malaysia 4-2 in their third match of the tournament to continue to remain a contender for the 🔝 spot! #IndiaKaGame #SultanAzlanShahCup2019 pic.twitter.com/qczj7qJ55S
">FT: 🇲🇾 2-4 🇮🇳
— Hockey India (@TheHockeyIndia) March 26, 2019
India beat Malaysia 4-2 in their third match of the tournament to continue to remain a contender for the 🔝 spot! #IndiaKaGame #SultanAzlanShahCup2019 pic.twitter.com/qczj7qJ55SFT: 🇲🇾 2-4 🇮🇳
— Hockey India (@TheHockeyIndia) March 26, 2019
India beat Malaysia 4-2 in their third match of the tournament to continue to remain a contender for the 🔝 spot! #IndiaKaGame #SultanAzlanShahCup2019 pic.twitter.com/qczj7qJ55S
ಮುನ್ನಡೆಯನ್ನುಳಿಸಿಕೊಂಡ ನಂತರ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದ ಭಾರತ, ಮಲೇಷ್ಯಾ ಆಟಗಾರರಿಗೆ ಗೋಲು ಗಳಿಸಿಲು ಅವಕಾಶ ನೀಡಲಿಲ್ಲ. ಆದರೂ 57ನೇ ನಿಮಿಷದಲ್ಲಿ ತೆಂಗ್ಕು ತಾಜುದ್ದೀನ್ ಗೋಲು ಗಳಿಸಿದರು. ಆದರೆ ಮರು ನಿಮಿಷಕ್ಕೆ ಭಾರತದ ಮಂದೀಪ್ ಸಿಂಗ್ ಗೋಲು ಗಳಿಸಿ 4-2 ರಲ್ಲಿ ಗೆಲುವು ದಾಖಲಿಸಲು ನೆರವಾದರು.
ಈ ಗೆಲುವಿನೊಂದಿಗೆ 7 ಅಂಕ ಪಡೆದಿರುವ ಭಾರತ, ಕೊರಿಯಾ ಹಾಗೂ ಮಲೇಷ್ಯಾವನ್ನು ಹಿಂದಿಕ್ಕಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.