ETV Bharat / sports

ಭಾರತ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್​ ಸೇರಿ 7 ಆಟಗಾರ್ತಿಯರಿಗೆ ಕೊರೊನಾ ದೃಢ

ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ರಾಂಪಾಲ್ ಸೇರಿದಂತೆ ಸವಿತಾ ಪೂನಿಯಾ, ಶರ್ಮಿಳಾ ದೇವಿ, ರಜನಿ, ನವಜೋತ್ ಕೌರ್‌, ನವನೀತ್ ಕೌರ್‌ ಹಾಗೂ ಸುಶೀಲಾ ಅವರಿಗೆ ಕೊರೊನಾ ಸೋಂಕು ತಗುಲಿದೆ.

ರಾಣಿ ರಾಂಪಾಲ್​ ಸೇರಿದಂತೆ 7 ಆಟಗಾರ್ತಿಯರಿಗೆ ಕೊರೊನಾ ದೃಢ

author img

By

Published : Apr 26, 2021, 8:51 PM IST

ನವದೆಹಲಿ: ಭಾರತ ಹಾಕಿ ತಂಡ ನಾಯಕಿ ರಾಣಿ ರಾಂಪಾಲ್ ಸೇರಿದಂತೆ ತಂಡದ ಏಳು ಆಟಗಾರ್ತಿಯರಿಗೆ ಕೋವಿಡ್ 19 ದೃಢಪಟ್ಟಿದೆ.

ಬೆಂಗಳೂರಿನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರದಲ್ಲಿ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವ ಮುನ್ನ ನಡೆಸಿದ ಪರೀಕ್ಷೆಯಲ್ಲಿ 7 ಮಂದಿ ಆಟಗಾರ್ತಿಯರ ವರದಿಗಳು ಪಾಸಿಟಿವ್ ಬಂದಿವೆ.

ಎಲ್ಲಾ ಆಟಗಾರ್ತಿಯರು ಹಾಗೂ ಸಹಾಯಕ ಸಿಬ್ಬಂದಿಯಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲವಾದರೂ ಸಾಯ್‌(SAI) ಕೇಂದ್ರದಲ್ಲಿ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ ಎಂದು ತಿಳಿದುಬಂದಿದೆ.

ತಂಡದ ಎಲ್ಲಾ ಆಟಗಾರ್ತಿಯರು ಮತ್ತು ಸಿಬ್ಬಂದಿ ಅವರವರ ತವರಿನ ನಗರಗಳಿಂದ ತಮ್ಮ ತರಬೇತಿ ಸ್ಥಳವಾದ ಬೆಂಗಳೂರಿನ ಸಾಯ್​ ಕೇಂದ್ರಕ್ಕೆ ಆಗಮಿಸಿದ್ದರು. ಅವರು ಕ್ವಾರಂಟೈನ್ ಮುಗಿಸಿದ ನಂತರ ಏಪ್ರಿಲ್ 24ರಂದು ಪರೀಕ್ಷಿಸಲಾಗಿತ್ತು ಎಂದು ಸಾಯ್‌ ತಿಳಿಸಿದೆ.

ರಾಂಪಾಲ್ ಜೊತೆಗೆ ಸವಿತಾ ಪೂನಿಯಾ, ಶರ್ಮಿಳಾ ದೇವಿ, ರಜನಿ, ನವಜೋತ್ ಕೌರ್‌, ನವನೀತ್ ಕೌರ್‌ ಹಾಗೂ ಸುಶೀಲಾ ಅವರಿಗೆ ಸೋಂಕು ತಗುಲಿದೆ. ಇವರ ಜೊತೆಗೆ ಇಬ್ಬರು ಸಹಾಯಕ ಸಿಬ್ಬಂದಿಯಾದ ವಿಡಿಯೋ ಅನಾಲಿಸ್ಟ್‌ ಅಮೃತಾ ಪ್ರಕಾಶ್‌ ಮತ್ತು ವೈಜ್ಞಾನಿಕ ಸಲಹೆಗಾರ್ತಿ ವೇಯ್ನ್‌ ಲೊಂಬಾರ್ಡ್‌ ಅವರಿಗೂ ಕೋವಿಡ್​ ಸೋಂಕು ದೃಢಪಟ್ಟಿದೆ.

ಇದನ್ನು ಓದಿ:ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುವುದಕ್ಕಿಂತ ಐಪಿಎಲ್ ಬಯೋ ಬಬಲ್​ನಲ್ಲಿರುವುದು ತುಂಬಾ ಸುರಕ್ಷಿತ : ಕೌಲ್ಟರ್​ ನೈಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.