ETV Bharat / sports

4ನೇ ಸ್ಥಾನಕ್ಕೇರಿ ದಾಖಲೆ ಬರೆದ ಭಾರತದ ಪುರುಷರ ಹಾಕಿ ತಂಡ - ಎಫ್‌ಐಎಚ್‌ ವಿಶ್ವ ಕ್ರಮಾಂಕ ಪಟ್ಟಿ

2003ರಲ್ಲಿ ಶ್ರೇಯಾಂಕ ಪಟ್ಟಿ ಜಾರಿಗೆ ಬಂದ ನಂತರ ಮೊದಲ ಬಾರಿಗೆ ಭಾರತದ ಪುರುಷರ ಹಾಕಿ ತಂಡ 4ನೇ ಸ್ಥಾನಕ್ಕೇರಿ ದಾಖಲೆ ಬರೆದಿದೆ. ಮೊದಲ ಸ್ಥಾನದಲ್ಲಿ ಬೆಲ್ಜಿಯಂ ಇದ್ದರೆ, ಆಸ್ಟ್ರೇಲಿಯಾ ಮತ್ತು ನೆದರ್ಲೆಂಡ್ಸ್‌ ತಂಡಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

Men's hockey team finish decade with highest-ever ranking
ಭಾರತದ ಪುರುಷರ ಹಾಕಿ ತಂಡ
author img

By

Published : Dec 30, 2020, 10:20 PM IST

ಹೈದರಾಬಾದ್: ಬುಧವಾರ ಬಿಡುಗಡೆಯಾಗಿರುವ ಎಫ್‌ಐಎಚ್‌ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಭಾರತದ ಪುರುಷರ ಹಾಕಿ ತಂಡವು 4ನೇ ಸ್ಥಾನಕ್ಕೇರಿ ದಾಖಲೆ ಬರೆದಿದೆ. 2003ರಲ್ಲಿ ರ‍್ಯಾಂಕಿಂಗ್‌ ಪದ್ಧತಿ ಜಾರಿಯಾದ ನಂತರ ಮೊದಲ ಸಲ ಭಾರತ ತಂಡ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಎಫ್‌ಐಎಚ್‌ ಪ್ರೊ ಲೀಗ್‌ನ ಆರಂಭದ ಮೂರು ಪಂದ್ಯಗಳಲ್ಲಿ ಮನಪ್ರೀತ್‌ ಸಿಂಗ್‌ ಬಳಗ ಅಪೂರ್ವ ಸಾಮರ್ಥ್ಯ ತೋರಿತ್ತು. ಹೀಗಾಗಿ ಒಂದು ಸ್ಥಾನ ಪ್ರಗತಿ ಕಂಡಿದೆ. ರಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿರುವ ಅರ್ಜೆಂಟೀನಾ ತಂಡ ಐದನೇ ಸ್ಥಾನಕ್ಕೆ ಕುಸಿದಿದೆ.

ಇದನ್ನೂ ಓದಿ...ಮೆಲ್ಬೋರ್ನ್ ಪ್ರತಿಷ್ಠಿತ​ ಸೆಂಚುರಿ ಬೋರ್ಡ್​ನಲ್ಲಿ 2ನೇ ಬಾರಿ ರಾರಾಜಿಸಿದ ರಹಾನೆ

ಕೋವಿಡ್-19 ಲಾಕ್​​ಡೌನ್​​ಗೂ ಮುನ್ನ ಭಾರತ ತಂಡವು ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಆರು ಪಂದ್ಯಗಳನ್ನು ಆಡಿತು. ಅದರಲ್ಲಿ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ನೆದರ್ಲೆಂಡ್ಸ್ ತಂಡವನ್ನು 5-2 ಮತ್ತು 3-3 (3-1) ಗೋಲುಗಳಿಂದ ಸೋಲಿಸಿತು. ಮತ್ತು ವಿಶ್ವ ಚಾಂಪಿಯನ್ ಬೆಲ್ಜಿಯಂ ವಿರುದ್ಧ 2-1 ಗೋಲುಗಳ ಅಂತರದಿಂದ ಜಯಗಳಿಸಿತ್ತು. ಸತತ ಗೆಲುವಿನ ನಂತರ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 3-4 ರಿಂದ ಸೋಲನುಭವಿಸಿತು. ಆದರೆ, ಎರಡನೇ ಹಂತದಲ್ಲಿ 2-2 (3-1) ಆಸ್ಟ್ರೇಲಿಯಾವನ್ನು ಮಣಿಸಿತು.

  • Both Indian Men’s and Women’s Hockey Teams climbed up the ranking ladder to claim the 4️⃣th and 9️⃣th spots respectively!

    (2/3) pic.twitter.com/ADYTr3C5yz

    — Hockey India (@TheHockeyIndia) December 27, 2020 " class="align-text-top noRightClick twitterSection" data=" ">

ದಶಕದಿಂದ ಭಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಹಂತ ಹಂತವಾಗಿ ಶ್ರೇಯಾಂಕ ಪಟ್ಟಿಯಲ್ಲಿ ಮೆಟ್ಟಿಲಿನಂತೆ ಹತ್ತಿಕೊಂಡು ಬಂದಿದೆ. 2011ರಲ್ಲಿ 10ನೇ ಸ್ಥಾನ, 2012ರಲ್ಲಿ 11ನೇ ಸ್ಥಾನಕ್ಕೆ ಭಾರತ ಕುಸಿಯಿತು. 2013ರಲ್ಲಿ ಮತ್ತೆ 10ನೇ ಸ್ಥಾನಕ್ಕೆ ಮರಳಿತು. ಅದಾದ ನಂತರ 2014ರಲ್ಲಿ 9, 2015ರಲ್ಲಿ ಆರನೇ ಸ್ಥಾನದೊಂದಿಗೆ ಕೊನೆಗೊಂಡಿತು.

2016ನೇ ವರ್ಷದ ಕೊನೆಯಲ್ಲಿ 5ನೇ ಸ್ಥಾನಕ್ಕೆ ಏರಿತು. ರಿಯೊ ಒಲಿಂಪಿಕ್ಸ್‌ನಲ್ಲಿ ಕಳಪೆ ಪ್ರದರ್ಶನದಿಂದ ಮತ್ತೊಮ್ಮೆ ಆರನೇ ಸ್ಥಾನಕ್ಕೆ ಇಳಿಯಿತು. ನಂತರ ಭಾರತವು 2018 ಮತ್ತು 2019ರಲ್ಲಿ ಐದನೇ ಸ್ಥಾನ ತಲುಪುವ ಮೂಲಕ ಹಳಿಗೆ ಮರಳಿತು. ಈ ವರ್ಷದ ಮಾರ್ಚ್ ಮೊದಲ ವಾರದಲ್ಲಿ 2,063.78 ಅಂಕಗಳೊಂದಿಗೆ 4ನೇ ಸ್ಥಾನವನ್ನು ಗಳಿಸಿದರು. ಭಾರತ ಅಂದಿನಿಂದಲೂ ಆ ಸ್ಥಾನವನ್ನು ಉಳಿಸಿಕೊಂಡೇ ಬಂದಿದೆ.

ವಿಶ್ವ ಚಾಂಪಿಯನ್‌ ಬೆಲ್ಜಿಯಂ ತಂಡವು ಅಗ್ರಪಟ್ಟ ಕಾಪಾಡಿಕೊಂಡಿದೆ. ಆಸ್ಟ್ರೇಲಿಯಾ ಮತ್ತು ನೆದರ್ಲೆಂಡ್ಸ್‌ ತಂಡಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿ ಮುಂದುವರೆದಿವೆ. ಮಹಿಳೆಯರ ರ‍್ಯಾಂಕಿಂಗ್‌ನಲ್ಲಿ ಭಾರತ ತಂಡ ಒಂಬತ್ತನೇ ಸ್ಥಾನಕ್ಕೆ ಮರಳಿದೆ. ನೆದರ್ಲೆಂಡ್ಸ್‌ ತಂಡ ಅಗ್ರಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ, ಅರ್ಜೆಂಟೈನಾ, ಜರ್ಮನಿ ಮತ್ತು ಇಂಗ್ಲೆಂಡ್‌ ತಂಡಗಳು ಕ್ರಮವಾಗಿ ಎರಡರಿಂದ ಐದನೇ ಸ್ಥಾನಗಳಲ್ಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.