ETV Bharat / sports

ಬೆಂಗಳೂರಿನಿಂದ ಟೋಕಿಯೋಗೆ ಪ್ರಯಾಣ ಬೆಳೆಸಿದ ಪುರುಷ, ಮಹಿಳಾ ಹಾಕಿ ತಂಡ

author img

By

Published : Jul 18, 2021, 1:06 AM IST

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾಗಿಯಾಗಲು ಭಾರತದ ಉಭಯ ಹಾಕಿ ತಂಡಗಳು ಬೆಂಗಳೂರಿನಿಂದ ಪ್ರಯಾಣ ಬೆಳೆಸಿದವು.

Indian Hockey Team
Indian Hockey Team

ಬೆಂಗಳೂರು: ಇದೇ ತಿಂಗಳ 23ರಿಂದ ಜಪಾನ್​ನ ಟೋಕಿಯೋದಲ್ಲಿ ಒಲಿಂಪಿಕ್ಸ್​​ ಕ್ರೀಡಾಕೂಟ ಆರಂಭಗೊಳ್ಳಲಿದ್ದು, ಅದರಲ್ಲಿ ಭಾಗಿಯಾಗಲು ಭಾರತದ ಅಥ್ಲೀಟ್ಸ್​ಗಳು ನಿನ್ನೆ ಪ್ರಯಾಣ ಬೆಳೆಸಿದರು. ಇದರ ಬೆನ್ನಲ್ಲೇ ಬೆಂಗಳೂರಿನಿಂದ ಪುರುಷ ಹಾಗೂ ಮಹಿಳಾ ಹಾಕಿ ತಂಡಗಳು ಕೂಡ ಪ್ರಯಾಣ ಕೈಗೊಂಡಿವೆ.

Indian Hockey Team
ಟೊಕಿಯೋಗೆ ಪ್ರಯಾಣ ಬೆಳೆಸಿದ ಹಾಕಿ ತಂಡ

ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಯಶಸ್ವಿಯಾಗಿರುವ ಭಾರತ ಇಲ್ಲಿಯವರೆಗೆ 8 ಚಿನ್ನದ ಪಕದ ಗೆದ್ದಿದ್ದು, ಅತ್ಯಂತ ಯಶಸ್ವಿ ತಂಡವಾಗಿದೆ. ಸದ್ಯ ಭಾರತೀಯ ಪುರುಷ ಹಾಗೂ ಮಹಿಳಾ ಹಾಕಿ ತಂಡ ಭಾರತದ ಕ್ರೀಡಾ ಪ್ರಾಧಿಕಾರ ಬೆಂಗಳೂರಿನಲ್ಲಿ ತರಬೇತಿ ಪಡೆದುಕೊಳ್ಳುತ್ತಿವೆ. ನಿನ್ನೆ ತಡರಾತ್ರಿ ಉಭಯ ತಂಡಗಳು ಪ್ರಯಾಣ ಬೆಳೆಸಿದವು.

ಇದನ್ನೂ ಓದಿರಿ: ಮಂಗಳೂರು: ಬಕೆಟ್ ನೀರಲ್ಲಿ‌ ಮುಳುಗಿ ಒಂದೂವರೆ ವರ್ಷದ ಮಗು ಸಾವು

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಹಾಕಿ ತಂಡವನ್ನ ಮನ್‌ಪ್ರೀತ್ ಸಿಂಗ್ ಹಾಗೂ ಮಹಿಳಾ ತಂಡವನ್ನ ರಾಣಿ ಮುನ್ನಡೆಸಲಿದ್ದಾರೆ. ಪ್ರಯಾಣ ಕೈಗೊಳ್ಳುವುದಕ್ಕೂ ಮುಂಚಿತವಾಗಿ ಮಾತನಾಡಿದ ಕ್ಯಾಪ್ಟನ್​ ಮನ್​ಪ್ರೀತ್ ಸಿಂಗ್​, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಇತ್ತೀಚೆಗೆ ನಡೆಸಿರುವ ಸಂವಾದ ತಂಡಕ್ಕೆ ಮತ್ತಷ್ಟು ಸ್ಥೈರ್ಯ ಮತ್ತು ಉತ್ಸಾಹ ನೀಡಿದೆ. ಕೋವಿಡ್​ ಸಾಂಕ್ರಾಮಿಕ ರೋಗದ ಸಂಧರ್ಭದಲ್ಲೂ ಸುರಕ್ಷಿತ ತರಬೇತಿ ಹಾಗೂ ಬೆಂಬಲ ಸೂಚಿಸಿದ್ದಕ್ಕಾಗಿ ಬೆಂಗಳೂರು ಕ್ರೀಡಾ ಪ್ರಾಧಿಕಾರಕ್ಕೆ ಧನ್ಯವಾದಗಳು ಎಂದಿದ್ದಾರೆ.

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಉತ್ತಮ ಪ್ರದರ್ಶನ ನೀಡುವಂತೆ ಶುಭ ಹಾರೈಕೆ ಮಾಡಲಾಗಿದ್ದು, ಉಭಯ ತಂಡಗಳಿಗೆ ಸ್ಮರಣಿಕೆ ನೀಡಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.