ಟೋಕಿಯೋ: ಭಾರತ ಮಹಿಳಾ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್ 2020ರ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ 1-5ರ ಅಂತರದಿಂದ ಹೀನಾಯ ಸೋಲು ಕಂಡಿದ್ದಾರೆ.
ಶನಿವಾರ ನಡೆದ ಪಂದ್ಯದಲ್ಲಿ ಕಳೆದ ಬಾರಿಯ ಒಲಿಂಪಿಕ್ಸ್ ರನ್ನರ್ ಅಪ್ ತಂಡದ ವಿರುದ್ಧ ಮೊದಲಾರ್ಧದಲ್ಲಿ ಸಮಬಲದ ಹೋರಾಟ ಪ್ರದರ್ಶನ ನೀಡಿದರು. 6ನೇ ನಿಮಿಷದಲ್ಲಿ ನೆದರ್ಲೆಂಡ್ಸ್ ತಂಡ ಗೋಲುಗಳಿಸಿದರೆ, ಇದಕ್ಕುತ್ತರವಾಗಿ 10ನೇ ನಿಮಿಷದಲ್ಲಿ ಭಾರತ ಮಹಿಳೆಯರು ಗೋಲು ಸಿಡಿಸಿ ಸಮಬಲಕ್ಕೆ ತಂದರು.
-
We will come back stronger. 💪
— Hockey India (@TheHockeyIndia) July 24, 2021 " class="align-text-top noRightClick twitterSection" data="
On to the next, #IndianEves! 💙#NEDvIND #HaiTayyar #IndiaKaGame #TokyoTogether #StrongerTogether #HockeyInvites #WeAreTeamIndia #Tokyo2020 #Hockey pic.twitter.com/gysuz08nW5
">We will come back stronger. 💪
— Hockey India (@TheHockeyIndia) July 24, 2021
On to the next, #IndianEves! 💙#NEDvIND #HaiTayyar #IndiaKaGame #TokyoTogether #StrongerTogether #HockeyInvites #WeAreTeamIndia #Tokyo2020 #Hockey pic.twitter.com/gysuz08nW5We will come back stronger. 💪
— Hockey India (@TheHockeyIndia) July 24, 2021
On to the next, #IndianEves! 💙#NEDvIND #HaiTayyar #IndiaKaGame #TokyoTogether #StrongerTogether #HockeyInvites #WeAreTeamIndia #Tokyo2020 #Hockey pic.twitter.com/gysuz08nW5
ಆದರೆ ದ್ವಿತೀಯಾರ್ಧದಲ್ಲಿ ಸಂಪೂರ್ಣ ಪ್ರಾಬಲ್ಯ ತೋರಿದ ನೆದರ್ಲೆಂಡ್ಸ್ ಮಹಿಳೆಯರು 4 ಗೋಲು ಸಿಡಿಸಿದರೆ ಭಾರತ ತಂಡದ ಒಂದೂ ಗೋಲು ಸಿಡಿಸಲು ಸಾಧ್ಯವಾಗಲಿಲ್ಲ.
ಮೂರನೇ ಕ್ವಾರ್ಟರ್ನಲ್ಲಿ ದಾಳಿ ಮಾಡಿದ ನೆದರ್ಲೆಂಡ್ಸ್ 3 ಮತ್ತು ನಾಲ್ಕನೇ ಕ್ವಾರ್ಟರ್ಸ್ನಲ್ಲಿ ಒಂದು ಗೋಲು ಸಿಡಿಸಿ ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡರು.
ಭಾರತ ವನಿತಾ ತಂಡ ತನ್ನ ಮುಂದಿನ ಪಂದ್ಯದಲ್ಲಿ ಜುಲೈ 26 ರಂದು ಜರ್ಮನಿ ತಂಡವನ್ನು, ಜುಲೈ 28ರಂದು ಗ್ರೇಟ್ ಬ್ರಿಟನ್, ಜುಲೈ 30ರಂದು ಐರ್ಲೆಂಡ್ ಮತ್ತಯ ಜುಲೈ 31ರಂದು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ಇದನ್ನು ಓದಿ:Tokyo Olympics boxing: ಮೊದಲ ಸುತ್ತಿನಲ್ಲೇ ಸೋಲುಕಂಡು ನಿರಾಸೆ ಅನುಭವಿಸಿದ ವಿಕಾಸ್ ಕ್ರಿಶನ್