ನವದೆಹಲಿ: ಕೋವಿಡ್ 19 ವೈರಸ್ಗೆ ಸಂಬಂಧಿಸಿದ ತೊಂದರೆಗಳಿಂದ ಮಾಜಿ ಅಂತಾರಾಷ್ಟ್ರೀಯ ಹಾಕಿ ಅಂಪೈರ್ ಸುರೇಶ್ ಠಾಕೂರ್ ನಿಧನರಾಗಿದ್ದಾರೆ ಎಂದು ಶನಿವಾರ ಹಾಕಿ ಇಂಡಿಯಾ ತಿಳಿಸಿದೆ.
51 ವರ್ಷದ ಸುರೇಶ್ ಶುಕ್ರವಾರ ಮೊಹಾಲಿಯಲ್ಲಿ ತಮ್ಮ ಕೊನೆಯುಸಿರೆಳೆದಿದ್ದಾರೆ. ಠಾಕೂರ್ ಜರ್ಮನಿಯಲ್ಲಿ ನಡೆದಿದ್ದ 4 ರಾಷ್ಟ್ರಗಳ ಟೂರ್ನಮೆಂಟ್ ಮತ್ತು ಮಲೇಷ್ಯಾದ ಕ್ವಾಲ ಲಾಂಪುರದಲ್ಲಿ ನಡೆದಿದ್ದ ಅಜ್ಲಾನ್ ಷಾ ಹಾಕಿ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಟೂರ್ನಮೆಂಟ್ಗಳಲ್ಲಿ ಕಾರ್ಯ ನಿರ್ವಹಿಸಿದ್ದರು.
2013 ಮತ್ತು 2014 ರ ಹಾಕಿ ಇಂಡಿಯಾ ಲೀಗ್ನಲ್ಲೂ ಪಂದ್ಯದ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
" ಸುರೇಶ್ ಕುಮಾರ್ ಠಾಕೂರ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧ ಅಂಪೈರ್ ಆಗಿದ್ದರು. ಅವರು ಕಂಡಿತ ಹಾಕಿ ಪಿಚ್ ಅನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಹಾಕಿ ಇಂಡಿಯಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಅವರ ಕುಟುಂಬಕ್ಕೆ ಈ ಕಠಿಣ ಸಂದರ್ಭದಲ್ಲಿ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ " ಎಂದು ಹಾಕಿ ಇಂಡಿಯಾದ ಅಧ್ಯಕ್ಷ ಗ್ಯಾನೆಂದ್ರೊ ನಿಂಗೊಂಬಮ್ ತಿಳಿಸಿದ್ದಾರೆ.
ಇದನ್ನು ಓದಿ:ನಿಮ್ಮಲ್ಲಿ ಸೂಪರ್ ಪವರ್ ಇದೆ, ವ್ಯರ್ಥವಾಗಲು ಬಿಡಬೇಡಿ: ಕೊರೊನಾ ಗೆದ್ದವರಿಗೆ ಪ್ಲಾಸ್ಮಾ ದಾನ ಮಾಡಲು ಧವನ್ ಮನವಿ