ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆ ಮುಂಬರುವ ತಿಂಗಳಲ್ಲಿ ನಡೆಯಲಿರುವ ಯಾವುದೇ ಹಾಕಿ ಪಂದ್ಯಾವಳಿಗಳಲ್ಲಿ ಆಸ್ಟ್ರೇಲಿಯಾ ತಂಡ ಭಾಗಿಯಾಗುವುದಿಲ್ಲ ಎಂದು ಹಾಕಿ ಆಸ್ಟ್ರೇಲಿಯಾ ಮಂಡಳಿ ಮಾಹಿತಿ ನೀಡಿದೆ.
ಮುಂದಿನ ತಿಂಗಳಿನಿಂದ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ನಲ್ಲಿ ನಡೆಯಲಿರುವ ಎಫ್ಐಹೆಚ್ ಪ್ರೊ ಲೀಗ್ ಸೀಸನ್ 3ರಲ್ಲಿ ಆಸ್ಟ್ರೇಲಿಯಾ ಪುರುಷರ ಮತ್ತು ಮಹಿಳಾ ಹಾಕಿ ತಂಡ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಕೋವಿಡ್ ಸಂಬಂಧಿತ ನಿಯಮಾವಳಿಗಳ ಪ್ರಕಾರ ಪ್ರವಾಸ ಕೈಗೊಳ್ಳುವುದನ್ನ ನಿರ್ಬಂಧಿಸಲಾಗಿದ್ದು, ಎರಡೂ ರಾಷ್ಟ್ರಗಳ ನಡುವೆ ನಿರ್ಬಂಧವಿದ್ದು, ಈ ಸಂಬಂಧ ಟೂರ್ನಿಯಲ್ಲಿ ಭಾಗಿಯಾಗದಿರಲು ನಿರ್ಧರಿಸಲಾಗಿದೆ.
ಹಾಕಿ ಆಸ್ಟೇಲಿಯಾ ಪ್ರಕಾರ, ಭಾಗವಹಿಸುವ ಎಲ್ಲ ದೇಶಗಳು ಮತ್ತು ಎಫ್‌ಐಎಚ್ ಪ್ರೊ ಲೀಗ್ ಕೌನ್ಸಿಲ್ ಅಂತಾರಾಷ್ಟ್ರೀಯ ತಂಡಗಳು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ಗೆ ಪ್ರಯಾಣಿಸುವುದು, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ತಂಡಗಳು ವಿದೇಶದಲ್ಲಿ ಆಡುವುದು ಮತ್ತು ಕ್ಯಾರೆಂಟೈನ್ ಮಾಡದೇ ಹಿಂದಿರುಗುವುದು ಸಾಧ್ಯವಿಲ್ಲ ಎಂದು ಒಪ್ಪಿಕೊಂಡಿವೆ.
ಜುಲೈ 28 ಮತ್ತು ಆಗಸ್ಟ್ 8 2022ರ ನಡುವೆ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ಗೆ ತೆರಳಲಿರುವ ಆಸ್ಟ್ರೇಲಿಯಾ ಕಾಮನ್‌ವೆಲ್ತ್ ಗೇಮ್ಸ್ ತಂಡದಲ್ಲಿ ಆಸ್ಟ್ರೇಲಿಯಾ ತಂಡ ಭಾಗಿಯಾಗಲಿದೆ ಎಂದು ಎಹೆಚ್ (ಆಸ್ಟ್ರೇಲಿಯಾ ಹಾಕಿ) ತಿಳಿಸಿದೆ.