ETV Bharat / sports

Asian Champions Trophy: ಪಾಕಿಸ್ತಾನ ಬಗ್ಗುಬಡಿದು ಸೆಮೀಸ್​ ಸನಿಹಕ್ಕೆ ಭಾರತ ಹಾಕಿ ತಂಡದ ಲಗ್ಗೆ

author img

By

Published : Dec 17, 2021, 5:54 PM IST

Updated : Dec 17, 2021, 6:53 PM IST

ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 2-2 ಗೋಲುಗಳ ಡ್ರಾ ಸಾಧಿಸಿದ್ದ ಭಾರತದ ಹಾಕಿ ತಂಡ 2ನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 9-0 ಗೋಲುಗಳಿಂದ ಸೋಲಿಸಿತ್ತು.

Asian Champions Trophy: Indian beats pakistan  in third match
Asian Champions Trophy: ಪಾಕಿಸ್ತಾನವನ್ನು ಬಗ್ಗುಬಡಿದು ಸೆಮೀಸ್​ ಸನಿಹಕ್ಕೆ ಭಾರತ ಹಾಕಿ ತಂಡ

ಢಾಕಾ, ಬಾಂಗ್ಲಾದೇಶ: ಏಷ್ಯನ್ ಹಾಕಿ ಚಾಂಪಿಯನ್‌ಶಿಪ್ ಟ್ರೋಫಿ​ ಪಂದ್ಯಾವಳಿಗಳು ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆಯುತ್ತಿದ್ದು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಹಾಲಿ ಚಾಂಪಿಯನ್​ ಭಾರತಕ್ಕೆ ಜಯ ದೊರಕಿದ್ದು, ಸೆಮಿಫೈನಲ್​ ಸಮೀಪಕ್ಕೆ ತಲುಪಿದೆ.

ಒಲಿಂಪಿಕ್ ಕಂಚಿನ ಪದಕ ವಿಜೇತ ರಾಷ್ಟ್ರವಾದ ಭಾರತಕ್ಕೆ ಇದು ಸತತ 2ನೇ ಗೆಲುವಾಗಿದ್ದು, ಪಾಕಿಸ್ತಾನವನ್ನು 3-1 ಗೋಲುಗಳ ಅಂತರದಿಂದ ಮಣಿಸಿದೆ. ಭಾರತದ ಪರ ಹರ್ಮನ್‌ಪ್ರೀತ್ ಸಿಂಗ್ 8 ಮತ್ತು 53ನೇ ನಿಮಿಷಗಳಲ್ಲಿ ಎರಡು ಗೋಲು, ಆಕಾಶದೀಪ್ ಸಿಂಗ್ 42ನೇ ನಿಮಿಷದಲ್ಲಿ ಒಂದು ಗೋಲು ಗಳಿಸಿದ್ದಾರೆ.

A phenomenal all-round performance earns India the BIG 𝐖 over Pakistan 💙#IndiaKaGame #HeroACT2021 pic.twitter.com/uxwWQ7Pm9A

— Hockey India (@TheHockeyIndia) December 17, 2021 ">

ಭಾರತದ ಗೋಲ್‌ಕೀಪರ್ ಆಗಿರುವ ಸೂರಜ್ ಕರ್ಕೇರ ಅತ್ಯುತ್ತಮ ಆಟ ಪ್ರದರ್ಶಿಸಿದ್ದು, ಪೆನಾಲ್ಟಿ ಕಾರ್ನರ್​ನಲ್ಲಿ ಪಾಕಿಸ್ತಾನಕ್ಕೆ ಗೋಲಿನ ಅವಕಾಶ ತಪ್ಪಿಸಿದ್ದಾರೆ. ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 2-2 ಗೋಲುಗಳ ಡ್ರಾ ಸಾಧಿಸಿದ್ದ ಭಾರತದ ಹಾಕಿ ತಂಡ 2ನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 9-0 ಗೋಲುಗಳಿಂದ ಸೋಲಿಸಿತ್ತು.

ಇದನ್ನೂ ಓದಿ: Commonwealth Championship 2021 : ಬಂಗಾರ ಗೆದ್ದು ಎಂಟು ರಾಷ್ಟ್ರೀಯ ದಾಖಲೆ ನಿರ್ಮಿಸಿದ ಪೂರ್ಣಿಮಾ!

ಢಾಕಾ, ಬಾಂಗ್ಲಾದೇಶ: ಏಷ್ಯನ್ ಹಾಕಿ ಚಾಂಪಿಯನ್‌ಶಿಪ್ ಟ್ರೋಫಿ​ ಪಂದ್ಯಾವಳಿಗಳು ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆಯುತ್ತಿದ್ದು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಹಾಲಿ ಚಾಂಪಿಯನ್​ ಭಾರತಕ್ಕೆ ಜಯ ದೊರಕಿದ್ದು, ಸೆಮಿಫೈನಲ್​ ಸಮೀಪಕ್ಕೆ ತಲುಪಿದೆ.

ಒಲಿಂಪಿಕ್ ಕಂಚಿನ ಪದಕ ವಿಜೇತ ರಾಷ್ಟ್ರವಾದ ಭಾರತಕ್ಕೆ ಇದು ಸತತ 2ನೇ ಗೆಲುವಾಗಿದ್ದು, ಪಾಕಿಸ್ತಾನವನ್ನು 3-1 ಗೋಲುಗಳ ಅಂತರದಿಂದ ಮಣಿಸಿದೆ. ಭಾರತದ ಪರ ಹರ್ಮನ್‌ಪ್ರೀತ್ ಸಿಂಗ್ 8 ಮತ್ತು 53ನೇ ನಿಮಿಷಗಳಲ್ಲಿ ಎರಡು ಗೋಲು, ಆಕಾಶದೀಪ್ ಸಿಂಗ್ 42ನೇ ನಿಮಿಷದಲ್ಲಿ ಒಂದು ಗೋಲು ಗಳಿಸಿದ್ದಾರೆ.

ಭಾರತದ ಗೋಲ್‌ಕೀಪರ್ ಆಗಿರುವ ಸೂರಜ್ ಕರ್ಕೇರ ಅತ್ಯುತ್ತಮ ಆಟ ಪ್ರದರ್ಶಿಸಿದ್ದು, ಪೆನಾಲ್ಟಿ ಕಾರ್ನರ್​ನಲ್ಲಿ ಪಾಕಿಸ್ತಾನಕ್ಕೆ ಗೋಲಿನ ಅವಕಾಶ ತಪ್ಪಿಸಿದ್ದಾರೆ. ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 2-2 ಗೋಲುಗಳ ಡ್ರಾ ಸಾಧಿಸಿದ್ದ ಭಾರತದ ಹಾಕಿ ತಂಡ 2ನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 9-0 ಗೋಲುಗಳಿಂದ ಸೋಲಿಸಿತ್ತು.

ಇದನ್ನೂ ಓದಿ: Commonwealth Championship 2021 : ಬಂಗಾರ ಗೆದ್ದು ಎಂಟು ರಾಷ್ಟ್ರೀಯ ದಾಖಲೆ ನಿರ್ಮಿಸಿದ ಪೂರ್ಣಿಮಾ!

Last Updated : Dec 17, 2021, 6:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.