ETV Bharat / sports

ಫುಟ್ಬಾಲ್ ದಂತಕತೆ ಜಿನೆಡಿನ್ ಜಿಡಾನೆಗೆ ಕೊರೊನಾ ಸೋಂಕು - ಜಿನೆಡಿನ್ ಜಿಡಾನೆಗೆ ಕೊರೊನಾ ಸೋಂಕು

ರಿಯಲ್ ಮ್ಯಾಡ್ರಿಡ್‌ ಕೋಚ್​ ಮತ್ತು ಮಾಜಿ ಫುಟ್ಬಾಲ್ ಆಟಗಾರ ಜಿನೆಡಿನ್ ಜಿಡಾನೆ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಲಿಗಾ ಕ್ಲಬ್ ಶುಕ್ರವಾರ ಹೇಳಿದೆ.

Zinedine Zidane blasts snow-hit pitch after goalless draw against Osasuna
ಜಿನೆಡಿನ್ ಜಿಡಾನೆಗೆ ಕೊರೊನಾ ದೃಢ
author img

By

Published : Jan 22, 2021, 11:23 PM IST

ಮ್ಯಾಡ್ರಿಡ್​​: ರಿಯಲ್ ಮ್ಯಾಡ್ರಿಡ್‌ ಕೋಚ್​ ಮತ್ತು ಮಾಜಿ ಫುಟ್ಬಾಲ್ ಆಟಗಾರ, ಫುಟ್ಬಾಲ್ ದಂತಕತೆ ಜಿನೆಡಿನ್ ಜಿಡಾನೆ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಲಿಗಾ ಕ್ಲಬ್ ಶುಕ್ರವಾರ ಹೇಳಿದೆ. ಕೋವಿಡ್​ ಇರುವುದು ಗೊತ್ತಾಗುತ್ತಿದ್ದಂತೆ ಅವರು ಕ್ವಾರಂಟೈನ್​​ಗೊಳಗಾಗಿದ್ದಾರೆ.

ಜಿಡಾನೆ ಸಂಪರ್ಕದಲ್ಲಿದ್ದ ಸಿಬ್ಬಂದಿಗೂ ಕೊರೊನಾಗೆ ಪರೀಕ್ಷೆ ನಡೆಸಲಾಗಿದ್ದು, ಸದ್ಯ ಕ್ವಾರಂಟೈನ್​ಗೊಳಗಾಗಿದ್ದಾರೆ. ಹೀಗಾಗಿ, ತರಬೇತಿ ಅವಧಿಯಲ್ಲಿ ಭಾಗವಹಿಸಲಿಲ್ಲ. ಈ ವಾರದ ಆರಂಭದಲ್ಲಿ ಮೂರನೇ ವಿಭಾಗದ ಅಲ್ಕೊಯಾನೊ ವಿರುದ್ಧ ಕಪ್ ಸೋತಿದ್ದರು.

ಅಲಾವ್ಸ್‌ನಲ್ಲಿ ಶನಿವಾರ ನಡೆಯುವ ಪಂದ್ಯಕ್ಕೆ ಜಿಡಾನೆ ಅವರು ದೂರವಿರಲಿದ್ದಾರೆ. ಅವರ ಸಹಾಯಕ ಡೇವಿಡ್ ಬೆಟ್ಟೋನಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ರಿಯಲ್ ಮ್ಯಾಡ್ರಿಡ್ ಲೀಗ್​​​ನಲ್ಲಿ ಎರಡನೇ ಸ್ಥಾನದಲ್ಲಿದೆ, ಅಟ್ಲೆಟಿಕೊ ಮ್ಯಾಡ್ರಿಡ್​ಗಿಂತ ಏಳು ಅಂಕ ಹಿಂದುಳಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.