ETV Bharat / sports

ಗ್ಲೋಬ್ ಸಾಕರ್ ಪ್ರಶಸ್ತಿ.. 2020ರ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾದ ಲೆವಾಂಡೋಸ್ಕಿ - ರಾಬರ್ಟ್ ಲೆವಾಂಡೋಸ್ಕಿ ಲೇಟೆಸ್ಟ್ ನ್ಯೂಸ್

ಬೇಯರ್ನ್ ಮ್ಯೂನಿಚ್ ಸ್ಟ್ರೈಕರ್ ರಾಬರ್ಟ್ ಲೆವಾಂಡೋಸ್ಕಿ 2020 ರ ವರ್ಷದ ಆಟಗಾರ ಪ್ರಶಸ್ತಿ ಪಡೆದುಕೊಂಡಿದ್ದಾರೆ..

Lewandowski named 2020 Player of the Year at Globe Soccer Awards
2020ರ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾದ ಲೆವಾಂಡೋಸ್ಕಿ
author img

By

Published : Dec 28, 2020, 11:19 AM IST

ದುಬೈ: ಶನಿವಾರ ರಾತ್ರಿ ನಡೆದ ಗ್ಲೋಬ್ ಸಾಕರ್ ಪ್ರಶಸ್ತಿ ಸಮಾರಂಭದಲ್ಲಿ ಬೇಯರ್ನ್ ಮ್ಯೂನಿಚ್ ಸ್ಟ್ರೈಕರ್ ರಾಬರ್ಟ್ ಲೆವಾಂಡೋಸ್ಕಿ 2020ರ ವರ್ಷದ ಆಟಗಾರ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಬೇಯರ್ನ್ ಮ್ಯೂನಿಚ್ ತಂಡದ ಆಟಗಾರ ರಾಬರ್ಟ್ ಲೆವಾಂಡೋಸ್ಕಿ 2020ರಲ್ಲಿ ಚಾಂಪಿಯನ್ಸ್ ಲೀಗ್ ಮತ್ತು ಬುಂಡೆಸ್ಲಿಗ ಟೂರ್ನಿಯಲ್ಲಿ ಗೆಲುವು ಸಾಧಿಸಿದ್ದಾರೆ.

2020ರ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾದ ಲೆವಾಂಡೋಸ್ಕಿ

ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಲೆವಾಂಡೋಸ್ಕಿ, "ನನ್ನ ಕನಸು ನನಸಾಗಿದೆ. ಯಾಕೆಂದರೆ, ನಾನು ಅಭಿಮಾನಿಗಳ ಮಧ್ಯೆ ದೊಡ್ಡ ಕ್ರೀಡಾಂಗಣಗಳಲ್ಲಿ ಆಡುವ ಮತ್ತು ದೊಡ್ಡ ಪ್ರಶಸ್ತಿಗಳನ್ನು ಗೆಲ್ಲುವ ಕನಸು ಕಂಡಿದ್ದೆ. ಈಗ ನಾನು ಇಲ್ಲಿದ್ದೇನೆ.

  • 📸 Robert Lewandowski, awarded ‘Player of the Year 2020’, alongside his wife Anna on the Globe Soccer blue carpet, earlier today in Dubai, United Arab Emirates⁠ pic.twitter.com/RIoP5vikh0

    — Globe Soccer Awards (@Globe_Soccer) December 27, 2020 " class="align-text-top noRightClick twitterSection" data=" ">

ಹಾಗಾಗಿ, ನನಗೆ ಖುಷಿಯಾಗಿದೆ. ನನಗೆ ಈ ಟ್ರೋಫಿ ಗೆಲ್ಲಲು ಮತ ಹಾಕಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಲು ಬಯಸುತ್ತೇನೆ. ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಮೆಸ್ಸಿಯಂತಹ ಲೆಜೆಂಡ್​ಗಳ ನಡುವೆ ಇರುವುದು ಅದ್ಭುತ ಸಂಗತಿಯಾಗಿದೆ. ಈ ಪ್ರಶಸ್ತಿಯಿಂದ ನನಗೆ ಖುಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.