ಗ್ಲಾಸ್ಗೋ: ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಉಕ್ರೇನ್ ತಂಡ 16 ನೇ ಸುತ್ತಿಗೆ ತಲುಪಿದೆ. ಉಕ್ರೇನ್ ಹಾಗೂ ಸ್ವೀಡನ್ ನಡುವಿನ ಪಂದ್ಯದಲ್ಲಿ 2-1 ಗೋಲುಗಳಿಂದ ಸ್ವೀಡನ್ ವಿರುದ್ಧ ಭರ್ಜರಿ ಜಯ ದಾಖಲಿಸಿದೆ.
ಹೆಚ್ಚುವರಿ ಸಮಯದಲ್ಲಿ ಉಕ್ರೇನ್ನ ಅರ್ತೆಮ್ ಡೋಬಿಕ್ ಸಿಡಿಸಿದ ಗೋಲು ಉಕ್ರೇನ್ ಮುಂದಿನ ಹಂತಕ್ಕೆ ತಲುಪಲು ಸಹಾಯ ಮಾಡಿತು. ಇದಕ್ಕೂ ಮೊದಲು ನಾಯಕ ಆಂಡ್ರಿ ಯರ್ಮೋಲೆಂಕೊ ಅವರಿಂದ ಪಾಸ್ ಪಡೆದು 27ನೇ ನಿಮಿಷದಲ್ಲಿ ಜಿಂಚೆಂಕೋ ಸಿಡಿಸಿದ ಗೋಲು ಉಕ್ರೇನ್ಗೆ ಲೀಡ್ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತು. ಇದಾದ ಬಳಿಕ 48ನೇ ನಿಮಿಷದಲ್ಲಿ ಸ್ವೀಡನ್ನ ಎಮಿಲ್ ಫೋರ್ಸ್‌ಬರ್ಗ್‌ನ ಗೋಲಿನಿಂದಾಗಿ ಎರಡು ತಂಡಗಳು ಸಮಬಲ ಸಾಧಿಸಿದವು.
ಬಳಿಕ ದ್ವಿತಿಯಾರ್ಧದಲ್ಲಿ ಎರಡೂ ತಂಡಗಳು ಸರಿಸಮ ಹೋರಟ ನಡೆಸಿದ್ದವು. ಆದರೆ, ಹೆಚ್ಚುವರಿ ಸಮಯದಲ್ಲಿ ಉಕ್ರೇನ್ನ ಅರ್ತೆಮ್ ಡೋಬಿಕ್ ಸಿಡಿಸಿದ ಹೆಡ್ ಶಾಟ್ ಗೋಲಿನಿಂದ ತಂಡ ಜಯದಾಖಲಿಸಿತು. ಈ ಜಯದ ಮೂಲಕ ಶನಿವಾರ ಉಕ್ರೇನ್ ರೋಮ್ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಕ್ಚಾರ್ಟರ್ಫೈನಲ್ ಪಂದ್ಯದಲ್ಲಿ ಸೆಣಸಾಡಲಿದೆ.