ETV Bharat / sports

ಎರಡೇ ವರ್ಷಕ್ಕೆ ಫುಟ್​ಬಾಲ್​ ತಂಡದ ಮಾಲೀಕಳಾದ ಸೆರೆನಾ ವಿಲಿಯಮ್ಸ್​ ಪುತ್ರಿ - ಸೆರೆನಾ ವಿಲಿಯಮ್ಸ್​

ನ್ಯಾಷನಲ್​ ವುಮೆನ್ಸ್ ಸಾಕರ್​ ಲೀಗ್​ನ ಹೊಸ ತಂಡವಾದ ಏಂಜೆಲ್​ ಸಿಟಿ ತಂಡಕ್ಕೆ ಸೆರೆನಾ ವಿಲಿಯಮ್ಸ್​ ಪತಿ ಅಲೆಕ್ಸ್​ ಒಹಾನಿಯನ್​ ಹಾಗೂ ಮಗಳು ಅಲೆಕ್ಸ್​ ಒಲಿಂಪಿಯಾ ಸಹಮಾಲೀಕರಾಗಿದ್ದಾರೆ.

ಅಲೆಕ್ಸ್​ ಒಲಿಂಪಿಯಾ ಒಹಾನಿಯನ್
ಅಲೆಕ್ಸ್​ ಒಲಿಂಪಿಯಾ ಒಹಾನಿಯನ್
author img

By

Published : Jul 23, 2020, 4:05 PM IST

ನ್ಯೂಯಾರ್ಕ್​: ಅಮೆರಿಕದ ಸ್ಟಾರ್​ ಟೆನ್ನಿಸ್​ ಆಟಗಾರ್ತಿ ಸೆರೆನಾ ವಿಲಿಯಮ್ಸ್​ ಮಗಳು ಅಲೆಕ್ಸಿಸ್​ ಒಲಿಂಪಿಯಾ ಕ್ರೀಡಾ ತಂಡದ ವಿಶ್ವದ ಅತ್ಯಂತ ಕಿರಿಯ ಯಜಮಾನಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾಳೆ.

ನ್ಯಾಷನಲ್​ ವುಮೆನ್ಸ್ ಸಾಕರ್​ ಲೀಗ್​ನ ಹೊಸ ತಂಡವಾದ ಏಂಜೆಲ್​ ಸಿಟಿ ತಂಡಕ್ಕೆ ಸೆರೆನಾ ವಿಲಿಯಮ್ಸ್​ ಅವರ ಪತಿ ಅಲೆಕ್ಸ್​ ಒಹಾನಿಯನ್​ ಹಾಗೂ ಅಲೆಕ್ಸ್​ ಒಲಿಂಪಿಯಾ ಸಹಮಾಲೀಕರಾಗಿದ್ದಾರೆ.

ಯಾರಾದರೂ ಗಂಟೆಗಟ್ಟಲೆ ಫುಟ್ಬಾಲ್​ ಒದೆಯುತ್ತಾ ಸಮಯ ಕಳೆಯುವಾಗ ನನ್ನ ಮಗಳು ಮುಂದಿನ ಸಾಲಿನ ಆಸನದಲ್ಲಿ ಕೂರಬೇಕೆಂದು ನಾನು ಬಯಸುತ್ತೇನೆ ಎಂದು ಒಹಾನಿಯನ್​ ಹೇಳಿದ್ದಾರೆ.

ನಾನು ವೈಯಕ್ತಿಕವಾಗಿ ನನ್ನ ಕುಟುಂಬದ ಪರವಾಗಿ ಹೂಡಿಕೆ ಮಾಡುತ್ತಿದ್ದೇನೆ. ಏಕೆಂದರೆ ಮಹಿಳಾ ಕ್ರೀಡೆಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು ನನ್ನ ಪತ್ನಿ ಮತ್ತು ನನ್ನ ಆಶಯ. ಅಲ್ಲದೆ ಆಕೆಗೆ ಉತ್ತಮ ಭವಿಷ್ಯ ನೀಡುವುದಕ್ಕೆ ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.