ಲಂಡನ್: ಸೆನೆಗಲ್ ಲೆಜೆಂಡ್ ಮಿಡ್ಫೀಲ್ಡರ್ ಪಾಪಾ ಬವುಬಾ ಡಿಯೋಪ್ ತಮ್ಮ 42ನೇ ವರ್ಷದಲ್ಲಿ ನಿಧನರಾಗಿದ್ದಾರೆ. ಅವರು ಲೌ ಗೆಹ್ರಿಗ್ ಅಥವಾ ಮೋಟಾರ್ ನ್ಯೂರಾನ್ ಎಂದು ಕರೆಯಲಾಗುವ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
ಸೆನೆಗಲ್ಗೆ 63 ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದ ಡಿಯೋಪ್ 2002ರಲ್ಲಿ ನಡೆದಿದ್ದ ಫೀಫಾ ವಿಶ್ವಕಪ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 1-0 ಗೋಲಿನಿಂದ ಗೆದ್ದಿದ್ದ ಪಂದ್ಯದಲ್ಲಿ ಗೋಲು ಗಳಿಸಿದ್ದರು. ಈ ಪಂದ್ಯಾವಳಿಯಲ್ಲಿ ಸೆನೆಗಲ್ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿತ್ತು.
-
Among Diop's many accomplishments, he will always be remembered for scoring the opening goal of the 2002 World Cup. RIP, Papa Bouba Diop.pic.twitter.com/O2tG9xj5J7
— FIFA World Cup (@FIFAWorldCup) November 29, 2020 " class="align-text-top noRightClick twitterSection" data="
">Among Diop's many accomplishments, he will always be remembered for scoring the opening goal of the 2002 World Cup. RIP, Papa Bouba Diop.pic.twitter.com/O2tG9xj5J7
— FIFA World Cup (@FIFAWorldCup) November 29, 2020Among Diop's many accomplishments, he will always be remembered for scoring the opening goal of the 2002 World Cup. RIP, Papa Bouba Diop.pic.twitter.com/O2tG9xj5J7
— FIFA World Cup (@FIFAWorldCup) November 29, 2020
"ಸೆನೆಗಲ್ ದಂತಕಥೆ ಪಾಪಾ ಬವುಬಾ ಡಿಯೋಪ್ ಅವರ ನಿಧನವನ್ನು ತಿಳಿದು ಫಿಫಾ ದುಃಖಿತವಾಗಿದೆ. ಒಮ್ಮೆ ವಿಶ್ವಕಪ್ ಹೀರೋ ಆದವರು ಯಾವಾಗಲೂ ವಿಶ್ವಕಪ್ ಹೀರೋ" ಎಂದು ಫಿಫಾ ಭಾನುವಾರ ಸಂಜೆ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಖಚಿತಪಡಿಸಿದೆ.
ಸೆನೆಗಲ್ ದೇಶದ ಅಧ್ಯಕ್ಷ ಮೆಕೆ ಸಾಲ್ ಕೂಡ ಡಿಯೋಪ್ ಸಾವಿಗೆ ಕಂಬನಿ ಮಿಡಿದಿದ್ದಾರೆ. ಪಾಪ್ ಬವುಬಾ ಡಿಯೋಪ್ ಸಾವು ಸೆನೆಗಲ್ಗೆ ಬಹುದೊಡ್ಡ ನಷ್ಟ ಎಂದು ಟ್ವೀಟ್ ಮಾಡಿದ್ದಾರೆ.