ETV Bharat / sports

ಕೇರಳ ಬ್ಲಾಸ್ಟರ್ಸ್‌ನೊಂದಿಗೆ ಒಪ್ಪಂದ ವಿಸ್ತರಣೆ: ಸಹಿ ಹಾಕಿದ ಸಹಲ್ ಅಬ್ದುಲ್ ಸಮದ್

author img

By

Published : Aug 13, 2020, 7:29 AM IST

ಕೇರಳದ ಕಣ್ಣೂರಿನ 23 ವರ್ಷದ ಸಹಲ್ ಅಬ್ದುಲ್ ಸಮದ್, 2025 ರವರೆಗೆ ಕೇರಳ ಬ್ಲಾಸ್ಟರ್ಸ್ ಎಫ್‌ಸಿಯ ಭಾಗವಾಗಲಿದ್ದಾರೆ.

Sahal Abdul Samad signs contract extensions
ಒಪ್ಪಂದ ವಿಸ್ತರಣೆಗೆ ಸಹಿ ಹಾಕಿದ ಸಹಲ್ ಅಬ್ದುಲ್ ಸಮದ್

ಕೊಚ್ಚಿ: ಕೇರಳ ಬ್ಲಾಸ್ಟರ್ಸ್ ಎಫ್‌ಸಿ (ಕೆಬಿಎಫ್‌ಸಿ) ಪ್ರಸ್ತುತ ಒಪ್ಪಂದಕ್ಕೆ ಹೆಚ್ಚುವರಿಯಾಗಿ ಮೂರು ವರ್ಷಗಳ ಕಾಲ ಪ್ರತಿಭಾವಂತ ಮಿಡ್‌ ಫೀಲ್ಡರ್ ಸಹಲ್ ಅಬ್ದುಲ್ ಸಮದ್ ಅವರ ಗುತ್ತಿಗೆ ವಿಸ್ತರಣೆಯನ್ನು ಪ್ರಕಟಿಸಿದೆ.

ಕೇರಳದ ಕಣ್ಣೂರಿನ 23 ವರ್ಷದ ಸಹಲ್ ಅಬ್ದುಲ್ ಸಮದ್ 2025 ರವರೆಗೆ ಕ್ಲಬ್‌ನ ಭಾಗವಾಗಲಿದ್ದಾರೆ. ಬಾಲ್ಯದಿಂದಲೂ ಫುಟ್ಬಾಲ್​​​​​​‌ ನನ್ನ ಅತಿದೊಡ್ಡ ಉತ್ಸಾಹ ಎಂದು ಸಮದ್ ಹೇಳಿದ್ದಾರೆ. ನನ್ನ ವೃತ್ತಿಜೀವನದ ಆರಂಭದಿಂದಲೂ, ನಾನು ಕೆಬಿಎಫ್‌ಸಿ ಭಾಗವಾಗಿ ಅತಿ ಹೆಚ್ಚು ಅಭಿಮಾನಿಗಳ ಮುಂದೆ ಆಡುವುದನ್ನು ಆನಂದಿಸಿದೆ. ಕ್ರೀಡೆಯೊಂದಿಗೆ ನನ್ನ ಪ್ರಯಾಣವು ಇದೀಗ ಪ್ರಾರಂಭವಾಗಿದೆ. ಮುಂದಿನ ವರ್ಷಗಳಲ್ಲಿ ಕ್ಲಬ್‌ಗಾಗಿ ಮತ್ತು ನನಗಾಗಿ ಹೆಚ್ಚಿನ ಸಾಧನೆಗಳನ್ನು ಸಾಧಿಸಬೇಕೆಂದು ನಾನು ಭಾವಿಸುತ್ತೇನೆ. ಇದು ನನ್ನ ರಾಜ್ಯ, ನನ್ನ ಜನರು ಮತ್ತು ನನ್ನ ಮನೆ ಎಂದಿದ್ದಾರೆ.

Sahal Abdul Samad signs contract extensions
ಸಹಲ್ ಅಬ್ದುಲ್ ಸಮದ್

ಕೆಬಿಎಫ್‌ಸಿಯ ಕ್ರೀಡಾ ನಿರ್ದೇಶಕ ಕರೋಲಿಸ್ ಸ್ಕಿಂಕಿಸ್ ಸಹಲ್ ಅವರ ಗುತ್ತಿಗೆ ವಿಸ್ತರಣೆಯ ಕುರಿತು ಮಾತನಾಡಿದ್ದು, ಕ್ಲಬ್‌ನೊಂದಿಗಿನ ಸಹಲ್ ಅವರ ವಾಸ್ತವ್ಯವು ಕೇರಳ ರಾಜ್ಯಕ್ಕೆ ಅವರ ಬದ್ಧತೆಯ ಪುನರ್ ದೃಢೀಕರಣವಾಗಿದೆ. ಇದು ಒಂದು ದೊಡ್ಡ ಜವಾಬ್ದಾರಿಯೂ ಆಗಿದೆ ಎಂದಿದ್ದಾರೆ.

ಯುಎಇಯ ಅಲ್-ಐನ್​ನಲ್ಲಿ ಜನಿಸಿದ ಆಕ್ರಮಣಕಾರಿ ಮಿಡ್ ಫೀಲ್ಡರ್ ಸಮದ್, ಅಬುಧಾಬಿಯ ಅಲ್ ಇತಿಹಾಡ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ 8 ನೇ ವಯಸ್ಸಿನಲ್ಲಿ ಫುಟ್ಬಾಲ್ ಆಡಲು ಪ್ರಾರಂಭಿಸಿದರು. ಭಾರತಕ್ಕೆ ಆಗಮಿಸಿದ ನಂತರ ಅವರು ಕಣ್ಣೂರಿನಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಫುಟ್ಬಾಲ್ ಆಡುವುದನ್ನು ಮುಂದುವರೆಸಿದರು. ಅವರ ಉತ್ತಮ ಪ್ರದರ್ಶನದಿಂದಾಗಿ ಅಂಡರ್ -21 ಕೇರಳ ತಂಡದಲ್ಲಿ ಮತ್ತು ಸಂತೋಷ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.