ETV Bharat / sports

ನಕಲಿ ಪಾಸ್​ಪೋರ್ಟ್​ ಕೇಸ್: ಕೆಲವೇ ದಿನಗಳಲ್ಲಿ ರೊನಾಲ್ಡಿನೋ ರಿಲೀಸ್ - ಪರಾಗ್ವೆ

ನಕಲಿ ಪಾಸ್‌ಪೋರ್ಟ್‌ ಜತೆ ದಕ್ಷಿಣ ಅಮೆರಿಕದ ದೇಶಕ್ಕೆ ಪ್ರವೇಶಿಸಿದ ಆರೋಪದ ಮೇಲೆ ಬ್ರೆಜಿಲ್‌ನ ಖ್ಯಾತ ಫುಟ್ಬಾಲ್ ಆಟಗಾರ ರೊನಾಲ್ಡಿನೊ ಮತ್ತು ಅವರ ಸಹೋದರ ಅಸಿಸ್ ಅವರನ್ನು ಮಾರ್ಚ್​ನಲ್ಲಿ ಬಂಧಿಸಲಾಗಿತ್ತು.

ರೊನಾಲ್ಡಿನೋ
ರೊನಾಲ್ಡಿನೋ
author img

By

Published : Aug 8, 2020, 2:28 PM IST

ಅಸುನ್ಸಿಯಾನ್​: ಪರಾಗ್ವೆಯ ತನಿಖಾಧಿಕಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ಬ್ರೆಜಿಲ್ ದೇಶದ ಮಾಜಿ ಫುಟ್​ಬಾಲ್​ ಆಟಗಾರ ರೊನಾಲ್ಡಿನೋ ಮತ್ತು ಅವರ ಸಹೋದರ ರಾಬರ್ಟೊ ಅಸಿಸ್ ಕೆಲವೇ ದಿನಗಳಲ್ಲಿ ಬಂಧಮುಕ್ತರಾಗಲಿದ್ದಾರೆ ಎಂದು ತಿಳಿದು ಬಂದಿದೆ.

ರೊನಾಲ್ಡಿನೋ ವಕೀಲ​ ಸೆರ್ಗಿಯೋ ಕ್ವರೋಜ್​ ಪ್ರಕಾರ, ತಮ್ಮ ಕಕ್ಷಿದಾರರ ವಿರುದ್ಧ ನ್ಯಾಯಾಲಯದಲ್ಲಿರುವ ವಿಚಾರಣೆಯನ್ನು ಅಮಾನತುಗೊಳಿಸುವಂತೆ ಪರಾಗ್ವೆಯ ಸಾರ್ವಜನಿಕ ಪ್ರಾಸಿಕ್ಯೂಟರ್​ ಕಚೇರಿಯಲ್ಲಿ ಶುಕ್ರವಾರ ಕೇಳಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ನಕಲಿ ಪಾಸ್‌ಪೋರ್ಟ್ ಜತೆ ದ.ಅಮೆರಿಕದ ದೇಶ ಪ್ರವೇಶಿಸಿದ ಆರೋಪದ ಮೇಲೆ ರೊನಾಲ್ಡಿನೋ ಮತ್ತು ಅವರ ಸಹೋದರ ಅಸಿಸ್ ಅವರನ್ನು ಮಾರ್ಚ್​ನಲ್ಲಿ ಬಂಧಿಸಲಾಗಿತ್ತು. ಏಪ್ರಿಲ್​ನಲ್ಲಿ 1.6 ಮಿಲಿಯನ್​ ಅಮೆರಿಕನ್​ ಡಾಲರ್​ ಮೊತ್ತವನ್ನು ಜಾಮೀನಾಗಿ ನೀಡಲು ಒಪ್ಪಿಕೊಂಡ ನಂತರ ಅವರಿಬ್ಬರನ್ನು ರಾಜಧಾನಿ ಅಸುನ್ಸಿಯನ್​ನ ತಾರಾ​ ಹೋಟೆಲ್​ಗೆ ಸ್ಥಳಾಂತರಿಸಲಾಗಿತ್ತು.

ರೊನಾಲ್ಡಿನೋ
ಬ್ರೆಜಿಲ್ ಫುಟ್ಬಾಲ್‌ ಆಟಗಾರ ರೊನಾಲ್ಡಿನೋ

ರೊನಾಲ್ಡಿನೋ ತಮ್ಮ ತಪ್ಪಿಗೆ 90,000 ಡಾಲರ್​ ದಂಡ ಕಟ್ಟಲು ಒಪ್ಪಿಕೊಂಡಿದ್ದಾರೆ. ಜತೆಗೆ 3 ತಿಂಗಳಿಗೊಮ್ಮೆ ಎರಡು ವರ್ಷಗಳವರೆಗೆ ಬ್ರೆಜಿಲ್​ನ ಫೆಡರಲ್​ ನ್ಯಾಯಾಧೀಶರಿಗೆ ವರದಿ ನೀಡಲು ರೊನಾಲ್ಡಿನೊ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ರೊನಾಲ್ಡಿನೋ ಅವರ ಸಹೋದರ ಆಸೀಸ್​ಗೆ 1,10,000 ಡಾಲರ್​ ದಂಡ ಕಟ್ಟಲು ಸೂಚಿಸಲಾಗಿದೆ. ಅವರು 2 ವರ್ಷ ಬ್ರೆಜಿಲ್​ನಿಂದ ಹೊರ ಹೋಗುವುದನ್ನು ನಿಷೇಧಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.