ಮುಂಬೈ : ನಗರದಲ್ಲಿ ನಡೆದ ಆಲ್ ಸ್ಟಾರ್ಸ್ ಫುಟ್ಬಾಲ್ ಅಭ್ಯಾಸ ಪಂದ್ಯದ ಸಂದರ್ಭದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಬಾಲಿವುಡ್ ನಟ ರಣವೀರ್ ಸಿಂಗ್ ಜೊತೆಯಾಗಿ ಕಾಣಿಸಿಕೊಂಡರು.
ಧೋನಿಯ ದೊಡ್ಡ ಅಭಿಮಾನಿಯಾಗಿರುವ ರಣವೀರ್, ಮೈದಾನದಲ್ಲಿ ನೆಚ್ಚಿನ ಆಟಗಾರನನ್ನು ಕಂಡೊಡನೆ ಹಗ್ ಮಾಡಿ ಖಷಿಪಟ್ಟರು. ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಧೋನಿ ವಿದಾಯ ಹೇಳಿದಾಗ ಮಾಹಿ ಜೊತೆಗಿನ ಹಳೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ರಣವೀರ್, ಭಾವನಾತ್ಮಕವಾಗಿ ಬರೆದಿದ್ದರು.
ಓದಿ : India vs Sri Lanka 2nd T20I: ಲಂಕಾ ಮಣಿಸಿ ಚುಟುಕು ಸರಣಿ ಗೆಲ್ಲುವುದರತ್ತ ಭಾರತ ಚಿತ್ತ!
ಬಹುತೇಕ ಕ್ರಿಕೆಟ್ ಆಟಗಾರರಿಗೆ ಆಪ್ತರಾಗಿರುವ ರಣವೀರ್, ಶೀಘ್ರದಲ್ಲೇ ಖಬೀರ್ ಖಾನ್ಸ್ 83 ಚಿತ್ರದ ಮೂಲಕ ತೆರೆ ಮೇಲೆ ಬರಲಿದ್ದಾರೆ. ಈ ಚಿತ್ರ 1983 ರ ವಿಶ್ವ ಕಪ್ ಚಾಂಪಿಯನ್ಶಿಪ್ನಲ್ಲಿ ಟೀಂ ಇಂಡಿಯಾದ ಗೆಲುವಿನ ಕಥೆಯನ್ನು ಹೇಳಲಿದೆ. ಚಿತ್ರದಲ್ಲಿ ರಣವೀರ್ ಕಪಿಲ್ ದೇವ್ ಆಗಿ ಕಾಣಿಸಿಕೊಳ್ಳಲಿದ್ದಾರೆ.