ಲಂಡನ್ [ಯುಕೆ]: ಇತ್ತೀಚೆಗೆ ನಡೆಸಿದ ಕೋವಿಡ್-19 ಪರೀಕ್ಷೆಯಲ್ಲಿ ಒಂದು ಸಕಾರಾತ್ಮಕ ಫಲಿತಾಂಶ ಬಂದಿದೆ ಎಂದು ಪ್ರೀಮಿಯರ್ ಲೀಗ್ ಸೋಮವಾರ ಖಚಿತಪಡಿಸಿದೆ.
ಪ್ರೀಮಿಯರ್ ಲೀಗ್ ಸೋಮವಾರ 22 ಜೂನ್ನಿಂದ ಭಾನುವಾರ ಜೂನ್ 28 ರ ಮಧ್ಯದಲ್ಲಿ ಸುಮಾರು 2,250 ಆಟಗಾರರು, ಕ್ಲಬ್ನ ಸಿಬ್ಬಂದಿಗೆ ಕೋವಿಡ್ 19 ಪರೀಕ್ಷೆ ನಡೆಸಿತ್ತು. ಇದರಲ್ಲಿ ಒಬ್ಬ ವ್ಯಕ್ತಿಗೆ ಪಾಸಿಟಿವ್ ಇರುವುದು ಪತ್ತೆಯಾಗಿದೆ ಎಂದು ಲೀಗ್ ಪ್ರಕಟಣೆ ಮೂಲಕ ಖಚಿತ ಪಡಿಸಿದೆ.
ಆದರೆ, ಆ ವ್ಯಕ್ತಿಯ ವೈಯಕ್ತಿಕ ವಿವರವನ್ನ ಪ್ರೀಮಿಯರ್ ಲೀಗ್ ನೀಡಿಲ್ಲ. ಮತ್ತು ಆತ ಯಾವ ಕ್ಲಬ್ಗೆ ಸೇರಿದ ಆಟಗಾರ ಅಥವಾ ಸಿಬ್ಬಂದಿ ಎಂಬ ಮಾಹಿತಿಯನ್ನು ಲೀಗ್ ಗುಟ್ಟಾಗಿರಿಸಿದೆ.
ಕೊರೊನ ವೈರಸ್ ಸಾಂಕ್ರಾಮಿಕದಿಂದ ಉಂಟಾದ ಸುದೀರ್ಘ ವಿರಾಮದ ನಂತರ ಜೂನ್ 17 ರಂದು ಪ್ರೀಮಿಯರ್ ಲೀಗ್ ಮತ್ತೆ ಕಾರ್ಯರೂಪಕ್ಕೆ ಬಂದಿತ್ತು.
ಇದು ಸ್ಪರ್ಧೆ ಪುನಾರಂಭಗೊಂಡ ನಂತರ ಪ್ರೀಮಿಯರ್ ಲೀಗ್ ನಡೆಸಿದ ಎರಡನೇ ಸಾಮೂಹಿಕ ಪರೀಕ್ಷೆಯಾಗಿತ್ತು. ಹಿಂದಿನ ಪರೀಕ್ಷೆಯಲ್ಲೂ ಕೂಡ ಒಬ್ಬ ವ್ಯಕ್ತಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು.