ರಿಯೊ ಡಿ ಜನೈರೊ: ಬ್ರೆಜಿಲ್ ತಂಡದ ಸಾರ್ವಕಾಲಿಕ ಅಗ್ರ ಸ್ಕೋರರ್ ಪೀಲೆ, ಕೋಪಾ ಅಮೆರಿಕದಲ್ಲಿ ಪಿಎಸ್ಜಿ ಸ್ಟ್ರೈಕರ್ ನೇಮಾರ್ ಅವರ ಅಸಾಧಾರಣ ಪ್ರದರ್ಶನವನ್ನು ಸಾಮಾಜಿಕ ಮಾಧ್ಯಮದಲ್ಲಿ ಶ್ಲಾಘಿಸಿದರು. ಫಿಫಾ ದಾಖಲೆಗಳ ಆಧಾರದ ಮೇಲೆ, ಪೀಲೆ 77 ಗೋಲುಗಳೊಂದಿಗೆ ಟೀಮ್ ಬ್ರೆಜಿಲ್ ಪರ ಮೊದಲ ಸ್ಥಾನದಲ್ಲಿದ್ದಾರೆ. ಗುರುವಾರ ನಡೆದ ಕೋಪಾ ಅಮೆರಿಕ ಪಂದ್ಯದಲ್ಲಿ ಪೆರುವನ್ನು 4-0 ಗೋಲುಗಳಿಂದ ಸೋಲಿಸಲು ಬ್ರೆಜಿಲ್ಗೆ ಸಹಾಯ ಮಾಡಿದ ನಂತರ ನೇಮಾರ್ 68ನೇ ಸ್ಥಾನಕ್ಕೇರಿದ್ದಾರೆ.
"ಪ್ರತಿ ಬಾರಿ ಈ ಹುಡುಗ(ನೇಮರ್)ನನ್ನು ಕಂಡಾಗ ಆತ ನಗುತ್ತಾನೆ. ನಾನು ನಗದಿರಲು ಅಸಾಧ್ಯವಾಗುತ್ತದೆ. ಇನ್ನು ನನಗೆ ಇತರೆ ಬ್ರೆಜಿಲಿಯನ್ರ ತರಹ ಇವನು ಸಾಕರ್ ಆಡುವಾಗ ಖುಷಿಯಾಗುತ್ತದೆ" ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
29 ವರ್ಷದ ನೇಮರ್ ಸಾಧನೆಯನ್ನು ಕಂಡು ಪೀಲೆ ಸಂತೋಷ ವ್ಯಕ್ತಪಡಿಸಿದರು. "ನೇಮರ್ ಇಂದು ನನ್ನ ಗೋಲ್ ಸ್ಕೋರಿಂಗ್ ದಾಖಲೆಯತ್ತ ಮತ್ತೊಂದು ಹೆಜ್ಜೆ ಇಟ್ಟಿದ್ದಾನೆ. ಅವರು ಆ ಸಾಧನೆ ಮಾಡಲಿ ಎಂದು ನಾನು ಇಚ್ಛಿಸುತ್ತೇನೆ. ಅವನು ಮೊದಲ ಬಾರಿಗೆ ಆಡುವುದನ್ನು ನೋಡಿದಾಗಿನಿಂದಲೂ ನಾನು ಅದೇ ಸಂತೋಷದಿಂದ ಹಾರೈಸಿದ್ದೇನೆ" ಎಂದರು.
ಬ್ರೆಜಿಲ್ ಗೆಲುವು ಸಾಧಿಸಿದ ಬಳಿಕ ನೇಮಾರ್ ಪಂದ್ಯಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಬಳಿಕ ಮಾತನಾಡಿದ ಅವರು "ಇದು ನನಗೆ ತುಂಬಾ ಭಾವನಾತ್ಮಕವಾಗಿದೆ. ಏಕೆಂದರೆ ನಾನು ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಕಷ್ಟ ಅನುಭವಿಸಿದೆ. ಈ ಗೋಲುಗಳು ನಾನು ಬ್ರೆಜಿಲ್ ಪರ ಆಡುತ್ತಿರುವ ಸಂತೋಷಕ್ಕೆ ಹೋಲಿಸಿದರೆ ಏನೂ ಅಲ್ಲ" ಎಂದು ಹೇಳಿದರು.
ಇನ್ನು ಪೀಲೆ ಮಾಡಿದಂತೆ ನೇಮಾರ್ ತಮ್ಮ ವೃತ್ತಿಜೀವನದಲ್ಲಿ ಮೂರು ವಿಶ್ವಕಪ್‌ಗಳನ್ನು ಗೆಲ್ಲದಿರಬಹುದು. ಆದರೆ, ಬ್ರೆಜಿಲ್‌ನ ರಾಷ್ಟ್ರೀಯ ತಂಡದ ಇದುವರೆಗಿನ ಅಗ್ರ ಗೋಲ್ ಸ್ಕೋರರ್ ಆಗಿ ಹೊಮ್ಮಿದ್ದಾರೆ. ಕೋಪಾ ಅಮೆರಿಕದಲ್ಲಿ ಗುರುವಾರ ಪೆರು ವಿರುದ್ಧ ಬ್ರೆಜಿಲ್ 4-0 ಗೋಲುಗಳಿಂದ ಜಯ ಗಳಿಸಿದೆ.
ಸಾಕರ್‌ನ ಅಂತಾರಾಷ್ಟ್ರೀಯ ಆಡಳಿತ ಮಂಡಳಿಯಾದ ಫಿಫಾದ ಅಧಿಕೃತ ಅಂಕಿ - ಅಂಶಗಳ ಪ್ರಕಾರ 77 ಗೋಲು ಗಳಿಸಿದ ಪೀಲೆ ನಂ .1 ಸ್ಥಾನದಲ್ಲಿದ್ದಾರೆ.