ಸಾವೊ ಪಾಲೊ (ಬ್ರೆಜಿಲ್) : ಪ್ಯಾರಿಸ್ ಸೇಂಟ್ ಜರ್ಮೈನ್ ಎಫ್ಸಿಯ ಫುಟ್ಬಾಲ್ ಆಟಗಾರ ನೇಮರ್ ಜೂನಿಯರ್ ವಿರುದ್ಧ ತೃತೀಯ ಲಿಂಗಿ ವಿರೋಧಿ ಹೇಳಿಕೆ ನೀಡಿದ್ದಕ್ಕಾಗಿ ಕ್ರಿಮಿನಲ್ ದೂರು ದಾಖಲಿಸಲಾಗಿದೆ.
ತಾಯಿಯ ತೃತೀಯ ಲಿಂಗಿ ಗೆಳೆಯನ ವಿರುದ್ಧ ನೇಮರ್ ಮತ್ತು ಆತನ ಗೆಳೆಯರು ಅವಹೇಳನಕಾರಿ ಹೇಳಿಕೆ ನೀಡಿರುವುದಾಗಿ ಬ್ರೆಜಿಲ್ ತೃತೀಯ ಲಿಂಗಿ ಹಕ್ಕುಗಳ ಕಾರ್ಯಕರ್ತೆ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ಸಾವೊ ಪಾಲೊ ಪ್ರಾಸಿಕ್ಯೂಟರ್ ಬಳಿ ತಲುಪಿದ್ದು, ಈ ವಿಷಯದ ಬಗ್ಗೆ ಪರಿಶೀಲಿಸಿ ಪ್ರಕರಣದ ವಿಚಾರಣೆ ನಡೆಸಬೇಕೆ ಬೇಡವೇ ಎಂದು ನಿರ್ಧರಿಸುವುದಾಗಿ ತಿಳಿಸಿದ್ದಾರೆ.
ಆದರೆ, ಈ ಬಗ್ಗೆ ನೇಮರ್ ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ತೃತೀಯ ಲಿಂಗಿಗಳ ಹಕ್ಕುಗಳ ಕಾರ್ಯಕರ್ತೆ ಅಗ್ರಿಪಿನೊ ಮಗಲ್ಹೇಸ್ ನೇಮರ್ ವಿರುದ್ಧ ತಾಯಿಯ ತೃತೀಯ ಲಿಂಗಿ ಗೆಳೆಯನಿಗೆ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಹೋಮೋಫೋಬಿಯಾ ಕ್ರಿಮಿನಲ್ ದೂರು ದಾಖಲಿಸಿದ್ದಾರೆ.
![Neymar faces criminal complaint for homophobia](https://etvbharatimages.akamaized.net/etvbharat/prod-images/tiagoramoss_12jpg-js576839650_1006newsroom_1591765843_668.jpg)
ಕಳೆದ ಏಪ್ರಿಲ್ನಲ್ಲಿ ನೇಮರ್ ತಾಯಿ ನಾಡಿನ್ ಗೊನ್ಕಾಲ್ವ್ಸ್ (52) ತೃತೀಯ ಲಿಂಗಿ ರಾಮೋಸ್ (22) ಜೊತೆ ಸಂಬಂಧದಲ್ಲಿರುವುದಾಗಿ ಘೋಷಿಸಿದ್ದರು. ಆ ಬಳಿಕ ಬ್ರೆಜಿಲ್ ಹಳದಿ ಪತ್ರಿಕೆಗಳಲ್ಲಿ ಇವರಿಬ್ಬರ ಸಂಬಂಧದ ಬಗ್ಗೆ ಭಿನ್ನ ಭಿನ್ನವಾದ ಸುದ್ದಿಗಳು ಪ್ರಕಟಗೊಂಡಿದ್ದವು.