ಬಾರ್ಸಿಲೋನಾ: ಕ್ಯಾಂಪ್ನೌನಲ್ಲಿ ನಡೆದ ಚಾಂಪಿಯನ್ಸ್ ಲೀಗ್ಸ್ನಲ್ಲಿ ಫೆರೆನ್ಕ್ವರೊಸ್ ತಂಡದ ವಿರುದ್ಧ 5-1 ಗೋಲುಗಳ ಅಂತರದಲ್ಲಿ ಬಾರ್ಸಿಲೋನಾ ಗೆದ್ದ ಸಂದರ್ಭದಲ್ಲಿ ಲೆಜೆಂಡ್ ಲಿಯೋನೆಲ್ ಮೆಸ್ಸಿ ಐತಿಹಾಸಿಕ ಗೋಲು ಸಿಡಿಸಿ ದಾಖಲೆ ಬರೆದಿದ್ದಾರೆ.
ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಮೆಸ್ಸಿ ಗೋಲುಗಳಿಸಿದರು. ಈ ಮೂಲಕ ಚಾಂಪಿಯನ್ಸ್ ಲೀಗ್ನಲ್ಲಿ ಭಾಗವಹಿಸಿರುವ 41 ತಂಡಗಳ ಪೈಕಿ 36ನೇ ತಂಡದ ವಿರುದ್ದ ಗೋಲು ಸಿಡಿಸಿದರು. ಈ ಸ್ಪರ್ಧೆಯಲ್ಲಿರುವ ರುಬಿನ್ ಕಝಾನ್, ಅಟ್ಲೆಂಟಿಕೊ ಮ್ಯಾಡ್ರಿಡ್, ಬೆನ್ಫಿಕಾ, ಯುಡಿನೆಸ್ ಮತ್ತು ಇಂಟರ್ ಮಿಲಾನ್ ತಂಡಗಳ ವಿರುದ್ಧ ಮಾತ್ರ ಮೆಸ್ಸಿ ಇನ್ನು ಗೋಲು ದಾಖಲಿಸಿಲ್ಲ.
ಮೆಸ್ಸಿಯನ್ನು ಬಿಟ್ಟರೆ ಹೆಚ್ಚು ತಂಡಗಳ ವಿರುದ್ಧ ಗೋಲುಗಳಿಸಿರುವ ಪಟ್ಟಿಯಲ್ಲಿ ಕ್ರಿಸ್ಚಿಯಾನೋ ರೊನಾಲ್ಡೊ, ರೌಲ್ ಗೊನ್ಜಾಲೆಜ್ ಇದ್ದಾರೆ. ಇವರಿಬ್ಬರು ತಲಾ 33 ತಂಡಗಳ ವಿರುದ್ಧ ಗೋಲು ಸಿಡಿಸಿ ಮೆಸ್ಸಿ ನಂತರದ ಸ್ಥಾನದಲ್ಲಿದ್ದಾರೆ. ಕರೀಮ್ ಬೆಂಜೆಮ ಮತ್ತು ಝ್ಲಾಟೆನ್ ಇಬ್ರಾಹಿಮೋವಿಕ್ 29 ಗೋಲು ಸಿಡಿಸಿದ್ದಾರೆ.