ETV Bharat / sports

55 ವರ್ಷದ ನಂತ್ರ ಫೈನಲ್​ ತಲುಪಿದ ಇಂಗ್ಲೆಂಡ್​ಗೆ ನಿರಾಸೆ​.. ಇಟಲಿ ಮುಡಿಗೆ ಯುರೋ ಕಪ್​! - ಚಾಂಪಿಯನ್ಸ್​ ಲೀಗ್ ಗೆದ್ದ ಇಟಲಿ

ಯುಇಎಫ್‌ಎ ಯುರೋ ಕಪ್​ನಲ್ಲಿ 55 ವರ್ಷಗಳ ಬಳಿಕ ಫೈನಲ್​ ತಲುಪಿದ ಇಂಗ್ಲೆಂಡ್​ಗೆ ನಿರಾಸೆ​ಯಾಗಿದ್ದರೆ, 53 ವರ್ಷಗಳ ನಂತರ ಮೊದಲ ಬಾರಿಗೆ ಇಟಲಿ ಯುರೋ ಕಪ್​ ಗೆದ್ದು ಬೀಗಿದೆ.

Italy vs England Euro 2020 Final, Italy vs England Euro 2020 Final 2021, Italy vs England Euro 2020 Final 2021 news, Champions League win, Champions League winners by Italy, ಇಟಲಿ ಮತ್ತು ಇಂಗ್ಲೆಂಡ್​ ಯುರೋ ಕಪ್ 2020​ ಫೈನಲ್​, ಇಟಲಿ ಮತ್ತು ಇಂಗ್ಲೆಂಡ್​ ಯುರೋ ಕಪ್ 2020​ ಫೈನಲ್​ 2021, ಇಟಲಿ ಮತ್ತು ಇಂಗ್ಲೆಂಡ್​ ಯುರೋ ಕಪ್ 2020​ ಫೈನಲ್​ 2021 ಸುದ್ದಿ, ಚಾಂಪಿಯನ್ಸ್​ ಲೀಗ್​ ಗೆಲುವು,  ಚಾಂಪಿಯನ್ಸ್​ ಲೀಗ್ ಗೆದ್ದ ಇಟಲಿ,
ಕೃಪೆ: Twitter
author img

By

Published : Jul 12, 2021, 8:18 AM IST

Updated : Jul 12, 2021, 9:05 AM IST

ಯುಇಎಫ್‌ಎ ಯುರೋ ಕಪ್‌ನ ಫೈನಲ್​ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡವನ್ನು ಸೋಲಿಸುವ ಮೂಲಕ ಇಟಲಿ ಚಾಂಪಿಯನ್ ಆಗಿದೆ. ಪೆನಾಲ್ಟಿ ಶೂಟೌಟ್ ತನಕ ನಡೆದ ಪಂದ್ಯದಲ್ಲಿ ಇಟಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಯುರೋ ಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. 1968 ರ ನಂತರ ಯುರೋ ಕಪ್‌ನಲ್ಲಿ ಇಟಲಿ ಮೊದಲ ಪ್ರಶಸ್ತಿ ಗೆದ್ದಿದೆ. 55 ವರ್ಷಗಳ ನಂತರ ಇಂಗ್ಲೆಂಡ್ ಫೈನಲ್ ತಲುಪಿದ್ದು, ಅವರ ಮೊದಲ ಯುರೋ ಕಪ್ ಪ್ರಶಸ್ತಿ ಗೆಲ್ಲುವ ಕನಸು ನುಚ್ಚು ಚೂರಾಯಿತು.

ಇದಕ್ಕೂ ಮೊದಲು, 90 ನಿಮಿಷಗಳ ಪಂದ್ಯದಲ್ಲಿ ಉಭಯ ತಂಡಗಳನ್ನು 1-1 ಗೋಲ್​ಗಳನ್ನು ಗಳಿಸಿ ಸಮವಾಗಿತ್ತು. ನಂತರ 6 ನಿಮಿಷಗಳ ಪೆನಾಲ್ಟಿ ಶೂಟೌಟ್​ ಸಮಯವನ್ನು ತೆಗೆದುಕೊಳ್ಳಲಾಯಿತು. ಪೆನಾಲ್ಟಿ ಶೂಟೌಟ್​ ಸಮಯದಲ್ಲಿ ಎರಡೂ ತಂಡಗಳಿಗೆ ಸ್ಕೋರ್ ಮಾಡಲು ಸಾಧ್ಯವಾಗಲಿಲ್ಲ, ನಂತರ 30 ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಯಿತು. ನೀಡಿದ್ದ ಹೆಚ್ಚುವರಿ ಸಮಯದ ಆಟದಲ್ಲಿ ಎರಡೂ ತಂಡಗಳು ಸ್ಕೋರ್ ಮಾಡಲು ಸಾಧ್ಯವಾಗಲಿಲ್ಲ. ಹೆಚ್ಚುವರಿ ಸಮಯದಲ್ಲೂ ಪಂದ್ಯವನ್ನು ಸಮಗೊಳಿಸಿದ ನಂತರ, ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ನೀಡಲಾಯಿತು.

ಪೆನಾಲ್ಟಿ ಶೂಟೌಟ್‌ನಲ್ಲಿ ಇಟಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಇಟಲಿ ಬಾಲ್​ನ್ನು ಐದರಲ್ಲಿ ಮೂರು ಬಾರಿ ಗೋಲ್ ಬಾರಿಸಿತು. ಇಂಗ್ಲಿಷ್ ಆಟಗಾರರು ಎರಡು ಗೋಲ್​ ಮಾತ್ರ ಗಳಿಸಿತು. ಇದಕ್ಕೂ ಮೊದಲು ಫೈನಲ್​ ಪಂದ್ಯದ ಆರಂಭ ರೋಚಕವಾಗಿತ್ತು. ಐತಿಹಾಸಿಕ ವೆಂಬ್ಲಿ ಕ್ರೀಡಾಂಗಣದಲ್ಲಿ ಪಂದ್ಯ ಪ್ರಾರಂಭವಾದ ಎರಡನೇ ನಿಮಿಷದಲ್ಲಿ ಲ್ಯೂಕ್ ಶಾ ಅದ್ಭುತ ಗೋಲು ಗಳಿಸಿ ಇಂಗ್ಲೆಂಡ್‌ಗೆ ಮುನ್ನಡೆ ನೀಡಿದರು. 1-0 ಮುನ್ನಡೆ ಸಾಧಿಸಿದರೂ, ಇಂಗ್ಲೆಂಡ್ ಪಂದ್ಯದುದ್ದಕ್ಕೂ ಆಟ ಸಡಿಲಗೊಳಿಸಲಿಲ್ಲ ಮತ್ತು ಆಕ್ರಮಣಕಾರಿ ಪ್ರದರ್ಶನ ತೋರಿತು. ಮೊದಲಾರ್ಧದ ಅಂತ್ಯದ ವೇಳೆಗೆ, ಇಂಗ್ಲೆಂಡ್ ಇಟಲಿ ವಿರುದ್ಧ 1-0 ಮುನ್ನಡೆ ಸಾಧಿಸಿತು.

ದ್ವಿತೀಯಾರ್ಧದ ಆರಂಭದಲ್ಲಿ, ಅನುಭವಿ ಇಟಾಲಿಯನ್ ಡಿಫೆಂಡರ್ ಲಿಯೊನಾರ್ಡೊ ಬೊನುಸಿ ಪಂದ್ಯದ 67ನೇ ನಿಮಿಷದಲ್ಲಿ ಗೋಲು ಗಳಿಸಿ ಪಂದ್ಯವನ್ನು 1-1ರಲ್ಲಿ ಸಮಗೊಳಿಸಿದರು. 34 ವರ್ಷ ಬೊನುಸಿ ಯುರೋ ಕಪ್ ಇತಿಹಾಸದಲ್ಲೇ ಅಂತಿಮ ಪಂದ್ಯದಲ್ಲಿ ಸ್ಕೋರ್ ಮಾಡಿದ ಅತ್ಯಂತ ಹಳೆಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Last Updated : Jul 12, 2021, 9:05 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.