ETV Bharat / sports

ISL ಪ್ಲೇಆಫ್ ವೇಳಾಪಟ್ಟಿ​ ಬಿಡುಗಡೆ : ಮಾರ್ಚ್​ 13ರಂದು ಫತೋರ್ಡಾದಲ್ಲಿ ಫೈನಲ್​ - Semi-final match

ಮೊದಲ ಸೆಮಿಫೈನಲ್​ ಪಂದ್ಯ ಮಾರ್ಚ್​ 5ರಂದು ನಡೆಯಲಿದೆ. 2ನೇ ಸೆಮಿಫೈನಲ್ ಮಾರ್ಚ್​ 6ರಂದು, ಮೊದಲ ಸೆಮಿಫೈನಲ್​ನ 2ನೇ ಲೆಗ್ ಪಂದ್ಯ ಮಾರ್ಚ್ ​8ರಂದು, ಮಾರ್ಚ್​ 9ರಂದು 2ನೇ ಸೆಮಿಫೈನಲ್​ನ 2ನೇ ಲೆಗ್​ ಪಂದ್ಯ ನಡೆಯಲಿದೆ. ಮಾರ್ಚ್​ 13ರಂದು ಫೈನಲ್ ಪಂದ್ಯ ನಡೆಯಲಿದೆ..

ಇಂಡಿಯನ್ ಸೂಪರ್ ಲೀಗ್
ಇಂಡಿಯನ್ ಸೂಪರ್ ಲೀಗ್
author img

By

Published : Feb 17, 2021, 8:06 PM IST

ಪಣಜಿ (ಗೋವಾ): ಫುಟ್‌ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್ (ಎಫ್‌ಎಸ್‌ಡಿಎಲ್) ಬುಧವಾರ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) 2020-21ರ ಪ್ಲೇಆಫ್‌ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಮಾರ್ಚ್​ 13ರಂದು ಗೋವಾದ ಫತೋರ್ಡಾದಲ್ಲಿ 7ನೇ ಆವೃತ್ತಿಯ ಫೈನಲ್​ ಪಂದ್ಯ ನಡೆಯಲಿದೆ.

ಇದೇ ಮೊದಲ ಬಾರಿಗೆ ಐಎಸ್​ಎಲ್​ನಲ್ಲಿ 11 ತಂಡ ಭಾಗವಹಿಸಿವೆ. ಆದ್ದರಿಂದ 95 ಪಂದ್ಯಗಳ ಬದಲಾಗಿ ಈ ಬಾರಿ 115 ಪಂದ್ಯ ನಡೆಯಲಿವೆ. ಹಿಂದಿನ ಲೀಗ್​ಗಳಿಗಿಂತ ರೋಚಕ ಪಂದ್ಯ ನಡೆಯುತ್ತಿದ್ದು, ಅರ್ಧಕ್ಕೂ ಹೆಚ್ಚು ಲೀಗ್ ಪಂದ್ಯಗಳು ಮುಗಿದರೂ ಪ್ಲೇಆಫ್ ಸ್ಥಾನಕ್ಕೆ 8 ತಂಡಗಳಿಂದ ಪ್ರಬಲ ಪೈಪೋಟಿ ನಡೆಯುತ್ತಿದೆ.

ಫತೋರ್ಡಾದ ಜವಾಹರಲಾಲ್ ನೆಹರು ಕ್ರೀಡಾಂಗಣವು ಸತತ 3ನೇ ಋತುವಿನಲ್ಲಿ ಐಎಸ್ಎಲ್ ಫೈನಲ್ ಪಂದ್ಯ ಆಯೋಜಿಸುತ್ತಿದೆ. ಸೆಮಿಫೈನಲ್​ ಪ್ರವೇಶಿಸುವ ತಂಡಗಳು ತಲಾ ಎರಡು ಪಂದ್ಯಗಳನ್ನಾಡಲಿದ್ದು, 2 ಪಂದ್ಯಗಳಿಂದ ಹೆಚ್ಚು ಗೋಲುಗಳಿಸಿದ ತಂಡಗಳು ಫೈನಲ್ ಪಂದ್ಯದಲ್ಲಿ ಸೆಣಸಲಿವೆ.

ಮೊದಲ ಸೆಮಿಫೈನಲ್​ ಪಂದ್ಯ ಮಾರ್ಚ್​ 5ರಂದು ನಡೆಯಲಿದೆ. 2ನೇ ಸೆಮಿಫೈನಲ್ ಮಾರ್ಚ್​ 6ರಂದು, ಮೊದಲ ಸೆಮಿಫೈನಲ್​ನ 2ನೇ ಲೆಗ್ ಪಂದ್ಯ ಮಾರ್ಚ್ ​8ರಂದು, ಮಾರ್ಚ್​ 9ರಂದು 2ನೇ ಸೆಮಿಫೈನಲ್​ನ 2ನೇ ಲೆಗ್​ ಪಂದ್ಯ ನಡೆಯಲಿದೆ. ಮಾರ್ಚ್​ 13ರಂದು ಫೈನಲ್ ಪಂದ್ಯ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.