ETV Bharat / sports

ಬಾಂಗ್ಲದೇಶ ಮಣಿಸಿ ಸೌತ್​ ಏಷ್ಯನ್​ ಫುಟ್ಬಾಲ್​ ಚಾಂಪಿಯನ್​ ಆದ ಯಂಗ್​ ಟೈಗರ್ಸ್​

author img

By

Published : Sep 29, 2019, 9:04 PM IST

ನೇಪಾಳದ ಕಠ್ಮಂಡುವಿನಕಲ್ಲಿ ನಡೆದ SAFF-18 ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಬಾಂಗ್ಲಾದೇಶ 18 ತಂಡವನ್ನು 2-1 ಗೋಲುಗಳಿಂದ ​ಮಣಿಸುವ ಮೂಲಕ ಭಾರತ ಅಂಡರ್​ 18 ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದೆ.

India defeat Bangladesh

ಕಠ್ಮಂಡು: ಭಾರತ ಅಂಡರ್​ 18 ತಂಡ ಮೂರನೇ ಆವೃತ್ತಿಯ ಸೌತ್​ ಏಷ್ಯನ್ ಫುಟ್ಬಾಲ್​ ಚಾಂಪಿಯನ್​ಶಿಪ್​ನಲ್ಲಿ ಬಾಂಗ್ಲದೇಶ ತಂಡವನ್ನು ಮಣಿಸಿ ಚಾಂಪಿಯನ್​ ಆಗಿ ಹೊರಹೊಮ್ಮಿದೆ.

ನೇಪಾಳದ ಕಠ್ಮಂಡುವಿನಕಲ್ಲಿ ನಡೆದ SAFF-18 ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಬಾಂಗ್ಲಾದೇಶ ತಂಡವನ್ನು 2-1 ಗೋಲುಗಳಿಂದ ​ಮಣಿಸುವ ಮೂಲಕ ಭಾರತ ಅಂಡರ್​ 18 ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದೆ.

ಪಂದ್ಯಾರಂಭವಾದ ಕೇವಲ 2ನೇ ನಿಮಿಷದಲ್ಲಿ ವಿಕ್ರಮ್​ ಪ್ರತಾಪ್​ ಸಿಂಗ್​ ಗೋಲು ಗಳಿಸಿ ಭಾರತ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ ಬಾಂಗ್ಲದೇಶ ತಂಡ ಮೊದಲಾರ್ಧದ ಕೊನೆಯಲ್ಲಿ ಯಾಸಿನ್​ ಗಳಿಸಿದ ಗೋಲಿನ ನೆರವಿನಿಂದ 1-1 ರಲ್ಲಿ ಸಮಬಲ ಸಾಧಿಸಿತು.

🙌🏻 🎉 🎊#BackTheBlue 💙 #IndianFootball#SAFFU18 pic.twitter.com/6wQKPltiHL

— Indian Football Team (@IndianFootball) September 29, 2019 ">

ದ್ವಿತೀಯಾರ್ಧದ 45 ನಿಮಿಷಗಳಲ್ಲಿ ಎರಡು ತಂಡಗಳು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದ್ದರಿಂದ ಗೋಲು ಗಳಿಸಲು ಆಗಲಿಲ್ಲ. ಹೆಚ್ಚುವರಿ ಸಮಯದಲ್ಲಿ ಭಾರತ ತಂಡದ ರವಿ ಬಹದ್ದೂರ್​ ರಾಣಾ ಗಳಿಸಿದ ಗೋಲಿನ ನೆರವಿನಿಂದ ಭಾರತ ತಂಡ ತನ್ನ ಚೊಚ್ಚಲ ಟ್ರೋಫಿಯನ್ನು ಎತ್ತಿ ಹಿಡಿಯಿತು.

8 ತಂಡಗಳು ಭಾಗವಹಿಸುವ ಈ ಟೂರ್ನಿಯಲ್ಲಿ 2015 ಹಾಗೂ 2017ರಲ್ಲಿ ನೇಪಾಳ ಚಾಂಪಿಯನ್​ ಆಗಿತ್ತು. ಭಾರತ 2015ರಲ್ಲಿ ರನ್ನರ್​ ಆಪ್​ ಆದರೆ, ಈ ಬಾರಿ ಚಾಂಪಿಯನ್​ ಆಗಿ ಹೊರಹೊಮ್ಮಿದೆ. 2017 ಹಾಗೂ 2019ರ ಟೂರ್ನಿಯಲ್ಲಿ ಬಾಂಗ್ಲದೇಶ ರನ್ನರ್​ ಆಪ್​ ಸ್ಥಾನ ಅಲಂಕರಿಸಿದೆ.

ಕಠ್ಮಂಡು: ಭಾರತ ಅಂಡರ್​ 18 ತಂಡ ಮೂರನೇ ಆವೃತ್ತಿಯ ಸೌತ್​ ಏಷ್ಯನ್ ಫುಟ್ಬಾಲ್​ ಚಾಂಪಿಯನ್​ಶಿಪ್​ನಲ್ಲಿ ಬಾಂಗ್ಲದೇಶ ತಂಡವನ್ನು ಮಣಿಸಿ ಚಾಂಪಿಯನ್​ ಆಗಿ ಹೊರಹೊಮ್ಮಿದೆ.

ನೇಪಾಳದ ಕಠ್ಮಂಡುವಿನಕಲ್ಲಿ ನಡೆದ SAFF-18 ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಬಾಂಗ್ಲಾದೇಶ ತಂಡವನ್ನು 2-1 ಗೋಲುಗಳಿಂದ ​ಮಣಿಸುವ ಮೂಲಕ ಭಾರತ ಅಂಡರ್​ 18 ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದೆ.

ಪಂದ್ಯಾರಂಭವಾದ ಕೇವಲ 2ನೇ ನಿಮಿಷದಲ್ಲಿ ವಿಕ್ರಮ್​ ಪ್ರತಾಪ್​ ಸಿಂಗ್​ ಗೋಲು ಗಳಿಸಿ ಭಾರತ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ ಬಾಂಗ್ಲದೇಶ ತಂಡ ಮೊದಲಾರ್ಧದ ಕೊನೆಯಲ್ಲಿ ಯಾಸಿನ್​ ಗಳಿಸಿದ ಗೋಲಿನ ನೆರವಿನಿಂದ 1-1 ರಲ್ಲಿ ಸಮಬಲ ಸಾಧಿಸಿತು.

ದ್ವಿತೀಯಾರ್ಧದ 45 ನಿಮಿಷಗಳಲ್ಲಿ ಎರಡು ತಂಡಗಳು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದ್ದರಿಂದ ಗೋಲು ಗಳಿಸಲು ಆಗಲಿಲ್ಲ. ಹೆಚ್ಚುವರಿ ಸಮಯದಲ್ಲಿ ಭಾರತ ತಂಡದ ರವಿ ಬಹದ್ದೂರ್​ ರಾಣಾ ಗಳಿಸಿದ ಗೋಲಿನ ನೆರವಿನಿಂದ ಭಾರತ ತಂಡ ತನ್ನ ಚೊಚ್ಚಲ ಟ್ರೋಫಿಯನ್ನು ಎತ್ತಿ ಹಿಡಿಯಿತು.

8 ತಂಡಗಳು ಭಾಗವಹಿಸುವ ಈ ಟೂರ್ನಿಯಲ್ಲಿ 2015 ಹಾಗೂ 2017ರಲ್ಲಿ ನೇಪಾಳ ಚಾಂಪಿಯನ್​ ಆಗಿತ್ತು. ಭಾರತ 2015ರಲ್ಲಿ ರನ್ನರ್​ ಆಪ್​ ಆದರೆ, ಈ ಬಾರಿ ಚಾಂಪಿಯನ್​ ಆಗಿ ಹೊರಹೊಮ್ಮಿದೆ. 2017 ಹಾಗೂ 2019ರ ಟೂರ್ನಿಯಲ್ಲಿ ಬಾಂಗ್ಲದೇಶ ರನ್ನರ್​ ಆಪ್​ ಸ್ಥಾನ ಅಲಂಕರಿಸಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.