ETV Bharat / sports

ಭಾರತ ಫುಟ್ಬಾಲ್​​ ತಂಡದ ಮಾಜಿ ಆಟಗಾರ​ ಪ್ರದಿಪ್​ ಕುಮಾರ್ ಬ್ಯಾನರ್ಜಿ ನಿಧನ - Pradip Kumar Banerjee

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 83 ವರ್ಷದ ಬ್ಯಾನರ್ಜಿ ಇಂದು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಭಾರತ ಫುಟ್ಬಾಲ್​​​​ ತಂಡದ ನಾಯಕನ ಸ್ಥಾನ ಅಲಂಕರಿಸಿದ್ದ ಇವರು ಕ್ರೀಡೆಯಲ್ಲಿನ ವಿಶೇಷ ಸಾಧನೆಗಾಗಿ 1961ರಲ್ಲಿ ಅರ್ಜುನ ಪ್ರಶಸ್ತಿ ಮುಡಿಗೇರಿಸಿಕೊಂಡ ಮೊದಲ ಫುಟ್ಬಾಲ್​​​ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದರು.

Former Indian football team captain Pradip Kumar Banerjee passes away at 83, ಭಾರತ ಫುಟ್​ಬಾಲ್ ತಂಡದ ಮಾಜಿ ಆಟಗಾರ​ ಪ್ರದಿಪ್​ ಕುಮಾರ್ ಬ್ಯಾನರ್ಜಿ ನಿಧನ
ಭಾರತ ಫುಟ್​ಬಾಲ್ ತಂಡದ ಮಾಜಿ ಆಟಗಾರ​ ಪ್ರದಿಪ್​ ಕುಮಾರ್ ಬ್ಯಾನರ್ಜಿ ನಿಧನ
author img

By

Published : Mar 20, 2020, 3:50 PM IST

ನವದೆಹಲಿ: ಭಾರತ ಫುಟ್ಬಾಲ್​ ತಂಡದ ಮಾಜಿ ಆಟಗಾರ​ ಪ್ರದಿಪ್​ ಕುಮಾರ್ ಬ್ಯಾನರ್ಜಿ ನಿಧನರಾಗಿದ್ದಾರೆ. ಪಿ.ಕೆ.ಬ್ಯಾನರ್ಜಿ ಎಂದೇ ಪ್ರಖ್ಯಾತಿ ಗಳಿಸಿದ್ದ ಇವರು ಭಾರತ ಫುಟ್ಬಾಲ್​ ​ ತಂಡದ ನಾಯಕ, ಕೋಚ್​​​​​​​​ ಹಾಗೂ ಟೆಕ್ನಿಕಲ್​​​ ಡೈರೆಕ್ಟರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 83 ವರ್ಷದ ಬ್ಯಾನರ್ಜಿ ಇಂದು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇವರು 1962ರ ಏಷ್ಯಾನ್​ ಗೇಮ್ಸ್​​​ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಈ ಟೂರ್ನಿಯಲ್ಲಿ ಭಾರತ 2-1 ಗೋಲುಗಳ ಮೂಲಕ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿ ಸಿತ್ತು. 1956ರ ಮೆಲ್ಬರ್ನ್​​​​​ನಲ್ಲಿ ನಡೆದ ಒಲಿಂಪಿಕ್​​​ ಕ್ರೀಡಾಕೂಟದಲ್ಲಿ ಭಾರತ ತಂಡ ಪ್ರತಿನಿಧಿಸಿ ಆಸ್ಟ್ರೇಲಿಯಾ ವಿರುದ್ಧ 4-2ರ ಅಂತರದಿಂದ ಗೆಲುವು ಪಡೆದು ನಾಲ್ಕನೇ ಸ್ಥಾನ ಅಲಂಕರಿಸಿತ್ತು.

ಒಟ್ಟಾರೆ ಬ್ಯಾನರ್ಜಿ ಒಟ್ಟು 36 ಪಂದ್ಯಗಳಲ್ಲಿ ಭಾರತ ತಂಡದಲ್ಲಿ ಆಡಿದ್ದು, ಅದರಲ್ಲಿ 6 ಪಂದ್ಯಗಳಲ್ಲಿ ನಾಯಕನಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಇನ್ನೂ ಭಾರತದ ಪರ ಒಟ್ಟು 19 ಅಂತಾರಾಷ್ಟ್ರೀಯ ಗೋಲು ದಾಖಲಿಸಿದ ಸಾಧನೆ ಮಾಡಿದ್ದರು. ಇವರ ಈ ಸಾಧನೆ ಗುರುತಿಸಿದ ಭಾರತ ಸರ್ಕಾರ 1990ರಲ್ಲಿ ಪದ್ಮ ಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಅಲ್ಲದೆ, ಕ್ರೀಡೆಯಲ್ಲಿನ ಸಾಧನೆಗಾಗಿ 1961ರಲ್ಲಿ ಅರ್ಜುನ ಪ್ರಶಸ್ತಿ ಮುಡಿಗೇರಿಸಿಕೊಂಡ ಮೊದಲ ಫುಟ್ಬಾಲ್​​​​ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದರು.

ಬಳಿಕ ಫುಟ್ಬಾಲ್​ ವೃತ್ತಿ ಜೀವನಕ್ಕೆ ವಿದಾಯ ನೀಡಿದ ಬ್ಯಾನರ್ಜಿ, ಫುಟ್ಬಾಲ್​ ​​ ತಂಡಗಳಿಗೆ ಕೋಚ್​ ಆಗಿಯೂ ಕಾರ್ಯನಿರ್ವಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.