ETV Bharat / sports

ಎಎಫ್‌ಸಿ ಚಾಂಪಿಯನ್ಸ್ ಲೀಗ್​ಗೆ ದೇಶದ ಮೊದಲ ತಂಡವಾಗಿ ಅರ್ಹತೆ ಗಿಟ್ಟಿಸಿಕೊಂಡ ಎಫ್​ಸಿ ಗೋವಾ

author img

By

Published : Feb 20, 2020, 10:32 AM IST

ಏಷ್ಯಾದ ಜನಪ್ರಿಯ ಫುಟ್​ಬಾಲ್​ ಟೂರ್ನಿ ಎಎಫ್‌ಸಿ ಚಾಂಪಿಯನ್ಸ್ ಲೀಗ್‌ನ ಲೀಗ್​ ಹಂತಗಳಿಗೆ ಅರ್ಹತೆ ಪಡೆಯುವ ಮೂಲಕ ಎಫ್‌ಸಿ ಗೋವಾ ಇತಿಹಾಸ ಬರೆದಿದೆ.

FC Goa
ಎಫ್​ಸಿ ಗೋವಾ

ಜೆಮ್‌ಶೆಡ್‌ಪುರ (ಜಾರ್ಖಂಡ್): ಎಎಫ್‌ಸಿ ಚಾಂಪಿಯನ್ಸ್ ಲೀಗ್‌ನ ಲೀಗ್​ ಹಂತಗಳಿಗೆ ಅರ್ಹತೆ ಪಡೆಯುವ ಮೂಲಕ ಎಫ್‌ಸಿ ಗೋವಾ ಇತಿಹಾಸ ಬರೆದಿದೆ.

ಏಷ್ಯಾದ ಅಗ್ರ ಕ್ಲಬ್ ಸ್ಪರ್ಧೆಯೆಂದು ಪರಿಗಣಿಸಲ್ಪಟ್ಟಿರುವ ಎಎಫ್‌ಸಿ ಚಾಂಪಿಯನ್ಸ್ ಲೀಗ್​ನಲ್ಲಿ ಈಗ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಮಿಂಚಿದ ಎಫ್‌ಸಿ ಗೋವಾ ಭಾರತದಿಂದ ಪ್ರತಿನಿಧಿಸುವ ಏಕೈಕ ತಂಡವಾಗಿದೆ. ನಿನ್ನೆ ನಡೆದ ಪಂದ್ಯದಲ್ಲಿ ಎಫ್‌ಸಿ ಗೋವಾ ತಂಡವು ಜೆಮ್‌ಶೆಡ್‌ಪುರ ಎಫ್‌ಸಿಯನ್ನು 5-0 ಅಂತರದಿಂದ ಮಣಿಸಿ ಈ ಅರ್ಹತೆಯನ್ನು ಗಿಟ್ಟಿಸಿಕೊಂಡಿದೆ.

ಈ ಬಗ್ಗೆ ಐಎಸ್‌ಎಲ್‌ ತನ್ನ ಅಧಿಕೃತ ಟ್ವಿಟ್ಟರ್​ಖಾತೆಯಲ್ಲಿ ಪೋಸ್ಟ್​ ಹಾಕಿದ್ದು, ಎಫ್‌ಸಿ ಗೋವಾದ ಸಾಧನೆಯನ್ನು ಟ್ವೀಟ್ ಮಾಡಿ ಹೊಗಳಿದೆ.

ಇತ್ತೀಚೆಗೆ, ಐಎಸ್ಎಲ್ ಅನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ದೇಶದ ಉನ್ನತ ಶ್ರೇಣಿಯ ಲೀಗ್ ಎಂದು ಗುರುತಿಸಿದೆ. ಈಗ ಇದರ ಪರಿಣಾಮವಾಗಿ, ಐಎಸ್ಎಲ್​ನ ಉನ್ನತ ತಂಡವೊಂದು ಎಎಫ್‌ಸಿ ಚಾಂಪಿಯನ್ಸ್ ಲೀಗ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದೆ.

ಎಎಫ್‌ಸಿ ಚಾಂಪಿಯನ್ಸ್ ಲೀಗ್‌:

ಏಷ್ಯನ್ ಚಾಂಪಿಯನ್ಸ್ ಲೀಗ್ ಎಂದು ಕರೆಯಲ್ಪಡುವ ಎಎಫ್‌ಸಿ ಚಾಂಪಿಯನ್ಸ್ ಲೀಗ್, ಏಷ್ಯನ್ ಫುಟ್‌ಬಾಲ್ ಒಕ್ಕೂಟವು ಆಯೋಜಿಸುವ ವಾರ್ಷಿಕ ಕಾಂಟಿನೆಂಟಲ್ ಕ್ಲಬ್ ಫುಟ್‌ಬಾಲ್ ಸ್ಪರ್ಧೆ. ಈ ಟೂರ್ನಮೆಂಟ್​ 2002 ರಲ್ಲಿ ಆರಂಭಗೊಂಡಿತು. ಸದ್ಯ ಇದಕ್ಕೆ ಭಾರತದ ಗೋವಾ ಎಫ್​ಸಿ ತಂಡ ಅರ್ಹತೆ ಪಡೆದಿದ್ದು, ಇಲ್ಲಿಯೂ ಅರ್ಹತೆಯೊಂದಿಗೆ ಗೆದ್ದ ತಂಡ ಫೀಫಾ ವಿಶ್ವಕಪ್​ಗೆ ಅರ್ಹತೆ ಪಡೆದುಕೊಳ್ಳುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.