ಡೆನ್ಮಾರ್ಕ್: ಕ್ರೊಯೇಷಿಯಾ ವಿರುದ್ಧ 5-3 ಗೋಲುಗಳ ಹೆಚ್ಚುವರಿ ಸಮಯದ ಗೆಲುವಿನ ನಂತರ ಸ್ಪೇನ್ ಯೂರೋ -2020 ರ ಕ್ವಾರ್ಟರ್ ಫೈನಲ್ ತಲುಪಿತು. ಕೋಪನ್ ಹ್ಯಾಗನ್ನ ಪಾರ್ಕೆನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸ್ಪೇನ್‌ನ ಪ್ಯಾಬ್ಲೊ ಸಾರಾಬಿಯಾ, ಸೀಸರ್ ಅಜ್ಪಿಲಿಕುಟಾ ಮತ್ತು ಫೆರಾನ್ ಟೊರೆಸ್ ಗೋಲುಗಳನ್ನು ದಾಖಲಿಸುವ ಮೂಲಕ ತಂಡದ ಗೆಲುವಿಗೆ ನೆರವಾದರು.
-
"People said that Spain couldn't score, but I never thought that."
— UEFA EURO 2020 (@EURO2020) June 29, 2021 " class="align-text-top noRightClick twitterSection" data="
🇪🇸 Ferran Torres after Spain's 5-3 extra-time win over Croatia.@SeFutbol | #EURO2020 pic.twitter.com/BnnDUo9F9n
">"People said that Spain couldn't score, but I never thought that."
— UEFA EURO 2020 (@EURO2020) June 29, 2021
🇪🇸 Ferran Torres after Spain's 5-3 extra-time win over Croatia.@SeFutbol | #EURO2020 pic.twitter.com/BnnDUo9F9n"People said that Spain couldn't score, but I never thought that."
— UEFA EURO 2020 (@EURO2020) June 29, 2021
🇪🇸 Ferran Torres after Spain's 5-3 extra-time win over Croatia.@SeFutbol | #EURO2020 pic.twitter.com/BnnDUo9F9n
ಸಾಮಾನ್ಯ ಸಮಯದಲ್ಲಿ 13 ನಿಮಿಷಗಳು ಬಾಕಿ ಇರುವಾಗ ಲೂಯಿಸ್ ಎನ್ರಿಕ್ ತಂಡ 3-1 ಗೋಲುಗಳ ಮುನ್ನಡೆ ಸಾಧಿಸಿತು. ಕ್ರೊಯೇಷಿಯಾ ತಂಡದ ಬದಲಿ ಆಟಗಾರ ಮಿಸ್ಲಾವ್ ಆರ್ಸಿಕ್ 85 ನೇ ನಿಮಿಷದಲ್ಲಿ ಗೋಲು ಹೊಡೆಯುವ ಪಂದ್ಯವನ್ನು ಹೆಚ್ಚುವರಿ ಅರ್ಧ ಘಂಟೆಗೆ ಕೊಂಡೊಯ್ದರು. ಆದರೂ, ಸ್ಪೇನ್ ವಿರುದ್ಧ ಮಾರಿಯೋ ಪಸಾಲಿಕ್ ತಂಡ ಸೋಲನುಭವಿಸಿತು.
ಇದನ್ನೂ ಓದಿ: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ಗೆ 5 ಸಾವಿರ ರೂ. ದಂಡ.. ಯಾವ ಕಾರಣಕ್ಕಾಗಿ!?
ಪಂದ್ಯದಲ್ಲಿ ಸ್ಪೇನ್ ಅಂತಿಮವಾಗಿ ಮೇಲುಗೈ ಸಾಧಿಸಿತು. ಕೆಲವು ಆತಂಕಗಳ ನಂತರ ರೋಮಾಂಚಕ ಸ್ಪರ್ಧೆಯಲ್ಲಿ ಅಂಡರ್-ಫೈರ್ ಫಾರ್ವರ್ಡ್ ಅಲ್ವಾರೊ ಮೊರಾಟಾ ಮತ್ತು ಮೈಕೆಲ್ ಒಯರ್‌ಜಾಬಲ್ ಮಂಕಾಗಿದ್ದ ಲೂಯಿಸ್ ಎನ್ರಿಕ್ ತಂಡವನ್ನು ಗೆಲುವಿನ ದಡ ಸೇರಿಸಿದರು.
ಯುರೋ ಕಪ್- 2012 ಫೈನಲ್‌ನಲ್ಲಿ ಇಟಲಿಯನ್ನು ಸೋಲಿಸಿದ ನಂತರ ಸ್ಪೇನ್ ಪ್ರಮುಖ ಟೂರ್ನಮೆಂಟ್ ನಾಕೌಟ್ ಪಂದ್ಯವನ್ನು ಗೆದ್ದಿಲ್ಲ. ರಷ್ಯಾದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಆತಂಕದ ನಡುವೆಯೂ ಸೇಂಟ್ ಪೀಟರ್ಸ್ ಬರ್ಗ್ನಲ್ಲಿ ಶುಕ್ರವಾರ ಸ್ವಿಟ್ಜರ್ಲ್ಯಾಂಡ್ ಜೊತೆ ಸ್ಪೇನ್ ಮುಖಾಮುಖಿಯಾಗಲಿದೆ.