ETV Bharat / sports

EPL: ಜೋಟಾ, ಸಲಾಹ್‌ ಗೋಲಲ್ಲಿ ಮೇಲೆದ್ದ ಲಿವರ್‌ಪೂಲ್; ಆರ್ಸೆನಲ್‌ಗೆ ಮುಖಭಂಗ - ಲಿವರ್‌ಪೂಲ್

ಈ ಗೆಲುವಿನೊಂದಿಗೆ ಲಿವರ್‌ಪೂಲ್ 30 ಪಂದ್ಯಗಳಿಂದ 49 ಅಂಕ ಗಳಿಸಿ ಟೂರ್ನಿಯಲ್ಲಿ ಐದನೇ ಸ್ಥಾನಕ್ಕೆ ತಲುಪಿದ್ದರೆ, ಆರ್ಸೆನಲ್ 30 ಪಂದ್ಯಗಳಿಂದ 42 ಅಂಕಗಳೊಂದಿಗೆ ಒಂಬತ್ತನೇ ಸ್ಥಾನಕ್ಕೆ ಕುಸಿಯಿತು.

Jota, Salah score as Liverpool beat Arsenal 3-0
ಆರ್ಸೆನಲ್ ತಂಡವನ್ನ ಮಣಿಸಿದ ಲಿವರ್‌ಪೂಲ್
author img

By

Published : Apr 4, 2021, 10:24 AM IST

ಲಂಡನ್: ಎಮಿರೇಟ್ಸ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲಿಷ್ ಪ್ರೀಮಿಯರ್ ಲೀಗ್ 2020-21ರ ಲೀಗ್​ ಪಂದ್ಯದಲ್ಲಿ ಲಿವರ್‌ಪೂಲ್ ತಂಡ ಆರ್ಸೆನಲ್ ವಿರುದ್ಧ 3-0 ಗೋಲುಗಳಿಂದ ಭರ್ಜರಿ ಜಯ ಸಾಧಿಸಿದೆ.

ಈ ಗೆಲುವಿನೊಂದಿಗೆ, ಲಿವರ್‌ಪೂಲ್ 30 ಪಂದ್ಯಗಳಿಂದ 49 ಅಂಕ ಗಳಿಸಿ ಐದನೇ ಸ್ಥಾನಕ್ಕೆ ತಲುಪಿದ್ದರೆ, ಆರ್ಸೆನಲ್ 30 ಪಂದ್ಯಗಳಿಂದ 42 ಅಂಕಗಳೊಂದಿಗೆ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ.

ಪಂದ್ಯದ ಮೊದಲಾರ್ಧದಲ್ಲಿ ಎರಡು ತಂಡಗಳು ಯಾವುದೇ ಗೋಲು ಗಳಿಸಲಿಲ್ಲ. ದ್ವಿತೀಯಾರ್ಧದಲ್ಲಿ, ಲಿವರ್‌ಪೂಲ್‌ ತಂಡ ಸೇರಿಕೊಂಡ ಜೋಟಾ ಮತ್ತು ಸಲಾಹ್ ಇಬ್ಬರೂ ತಂಡಕ್ಕೆ ಜಯ ತಂದು ಕೊಡುವಲ್ಲಿ ಯಶಸ್ವಿಯಾದರು. ಈ ಪಂದ್ಯದಲ್ಲಿ ಜೋಟಾ 2 ಗೋಲುಗಳಿಸಿ ಮಿಂಚಿದರೆ, ಸಲಾಹ್ ಒಂದು ಗೋಲುಗಳಿಸಿದರು. ಇದಕ್ಕೆ ಎದುರಾಳಿ ತಂಡ ಯಾವುದೇ ಪ್ರತಿರೋಧ ನೀಡಲಿಲ್ಲ.

  • GET IN, REDS!! 🔴

    Big performance 💪

    — Liverpool FC (@LFC) April 3, 2021 " class="align-text-top noRightClick twitterSection" data=" ">

ಲಿವರ್‌ಪೂಲ್ ಮುಂದಿನ ಪಂದ್ಯ ಏಪ್ರಿಲ್ 10 ರಂದು ನಿಗದಿಯಾಗಿದ್ದು ಆಯ್ಸ್ಟನ್ ವಿಲ್ಲಾ ವಿರುದ್ಧ ಸೆಣಸಲಿದೆ. ಆರ್ಸೆನಲ್ ಏಪ್ರಿಲ್ 11 ರಂದು ಶೆಫೀಲ್ಡ್ ಯುನೈಟೆಡ್ ವಿರುದ್ಧ ಹೋರಾಟ ಮುಂದುವರೆಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.