ಮ್ಯಾಂಚೆಸ್ಟರ್ : ಮ್ಯಾಂಚೆಸ್ಟರ್ ಯುನೈಟೆಡ್ಗೆ ವರ್ಗಾವಣೆಯಾಗಿರುವ ಪೋರ್ಚುಗಲ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಅವರನ್ನು ಹಿಂದಿಕ್ಕಿ ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಫುಟ್ಬಾಲ್ ಆಟಗಾರ ಎನಿಸಿಕೊಂಡಿದ್ದಾರೆ.
ಫೋರ್ಬ್ಸ್ ಪ್ರಕಾರ ರೊನಾಲ್ಡೊ 2021-22ನೇ ಋತುವಿನಲ್ಲಿ ತೆರಿಗೆಗೆ ಮುಂಚಿತವಾಗಿ 125 ಮಿಲಿಯನ್ ಡಾಲರ್ ಗಳಿಸಲು ಸಿದ್ಧರಾಗಿದ್ದಾರೆ. ಇದರಲ್ಲಿ 70 ಮಿಲಿಯನ್ ಡಾಲರ್ ಮ್ಯಾಂಚೆಸ್ಟರ್ ಯುನೈಟೆಡ್ನಿಂದ ಬರುವ ವೇತನ ಮತ್ತು ಭೋನಸ್ ರೂಪದಲ್ಲಿ ರೊನಾಲ್ಡೊ ಗಳಿಸಿಲಿದ್ದಾರೆ. 36 ವರ್ಷದ ಫೋರ್ಚುಗಲ್ ನಾಯಕ 55 ಮಿಲಿಯನ್ ಡಾಲರ್ ಮೊತ್ತವನ್ನು ಈ ಆವೃತ್ತಿಯಲ್ಲಿ ಜಾಹೀರಾತು ರಾಯಭಾರತ್ವದಿಂದ ಪಡೆಯಲಿದ್ದಾರೆ.
ರೊನಾಲ್ಡೊ ಅವರಿಗಿಂತ ಕೇವಲ ಮೂವರು ಕ್ರೀಡಾಪಟುಗಳು ಮಾತ್ರ ಹೆಚ್ಚು ವಾಣಿಜ್ಯ ಒಪ್ಪಂದಗಳ ಮೂಲಕ ಹೆಚ್ಚು ಸಂಭಾವನೆ ಪಡೆಯುವ ಪಟ್ಟಿಯಲ್ಲಿ ಮುಂದಿದ್ದಾರೆ. ಟೆನಿಸ್ ಪ್ಲೇಯರ್ ರೋಜರ್ ಫೆಡರರ್ 90 ಮಿಲಿಯನ್ ಡಾಲರ್, ಬ್ಯಾಸ್ಕೆಟ್ ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ 65 ಮಿಲಿಯನ್ ಡಾಲರ್ ಮತ್ತು ಗಾಲ್ಫರ್ ಟೈಗರ್ ವುಡ್ಸ್ 60 ಮಿಲಿಯನ್ ಡಾಲರ್ ಪಡೆಯುತ್ತಿದ್ದಾರೆ.
ರೊನಾಲ್ಡೊ ಪ್ರತಿಸ್ಪರ್ಧಿ ಲಿಯೋನೆಲ್ ಮೆಸ್ಸಿ ವಾರ್ಷಿಕವಾಗಿ 110 ಮಿಲಿಯನ್ ಡಾಲರ್ ಸಂಪಾದಿಸುತ್ತಿದ್ದಾರೆ. 75 ಮಿಲಿಯನ್ ಡಾಲರ್ ವೇತನ ಮತ್ತು ಭೋನಸ್ ಮೂಲಕ ಬಂದರೆ, 35 ಮಿಲಿಯನ್ ಡಾಲರ್ ಜಾಹೀರಾತು ಒಪ್ಪಂದಗಳ ಮೂಲಕ ಪಡೆಯಲಿದ್ದಾರೆ.
ಇದನ್ನೂ ಓದಿ:ಇನ್ಮುಂದೆ ಕ್ರಿಕೆಟ್ನಲ್ಲಿ ಬ್ಯಾಟ್ಸ್ಮನ್ ಪದದ ಬದಲಿಗೆ 'ಬ್ಯಾಟರ್' ಬಳಸಲು MCC ಘೋಷಣೆ: ಕಾರಣವೇನು?