ಬುಡಾಪೆಸ್ಟ್(ಹಂಗೇರಿ): ಪೋರ್ಚುಗಲ್ ಫುಟ್ಬಾಲ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ ಮತ್ತೊಂದು ದಾಖಲೆ ಬರೆದಿದ್ದಾರೆ. ಯೂರೋ-2020 ಟೂರ್ನಮೆಂಟ್ನಲ್ಲಿ ಗುರುವಾರ ಫ್ರಾನ್ಸ್ ವಿರುದ್ಧ ಆಟವಾಡಿದ ರೊನಾಲ್ಡ್ ತಮ್ಮ 109ನೇ ಗೋಲ್ ದಾಖಲಿಸಿದರು.
ಈ ಗೋಲ್ ಮೂಲಕ ಅಂತಾರಾಷ್ಟ್ರೀಯ ಪುರುಷರ ಫುಟ್ಬಾಲ್ ಪಂದ್ಯಗಳಲ್ಲಿ ಅತಿ ಹೆಚ್ಚು ಗೋಲ್ ದಾಖಲಿಸಿದ ಇರಾನ್ನ ಸ್ಟ್ರೈಕರ್ ಅಲಿ ಡೈಯಿ ಅವರ ಗೋಲುಗಳಿಗೆ ಸಮನಾಗಿದ್ದಾರೆ. ಈ ಮೂಲಕ ಹೆಚ್ಚು ಗೋಲು ದಾಖಲಿಸಿದವರಲ್ಲಿ ಮೊದಲ ಸ್ಥಾನವನ್ನು ಅಲಿ ಡೈಯಿ ಅವರೊಂದಿಗೆ ಹಂಚಿಕೊಂಡಿದ್ದಾರೆ.
ಯೂರೋಪಿಯನ್ ಚಾಂಪಿಯನ್ಶಿಪ್ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಆಟಗಾರನಾಗಿರುವ ಕ್ರಿಶ್ಚಿಯಾನೋ ರೊನಾಲ್ಡೋ ಬುಡಾಪೆಸ್ಟ್ನಲ್ಲಿ ನಡೆದ ಪಂದ್ಯದಲ್ಲಿ ಎರಡನೇ ಪೆನಾಲ್ಟಿಯನ್ನು ಗೋಲ್ ಆಗಿ ಪರಿವರ್ತನೆ ಮಾಡಿಕೊಳ್ಳುವಲ್ಲಿ ಸಫಲರಾದರು.
ಇದನ್ನೂ ಓದಿ: WTC 21 Final: ಭಾರತದ ಬೌಲಿಂಗ್ ಸಂಯೋಜನೆ ಸಮರ್ಥಿಸಿಕೊಂಡ ವಿರಾಟ್ ಕೊಹ್ಲಿ
ತಾವು ಗಳಿಸಿದ 109ನೇ ಗೋಲ್ ತಮ್ಮ 178ನೇ ಪಂದ್ಯದ್ದು ಆಗಿದ್ದು, ಇನ್ನೊಂದು ಗೋಲ್ ಅವರನ್ನು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದ ವ್ಯಕ್ತಿಯಾಗಿ ರೂಪಿಸಲಿದ್ದು, ಯೂರೋ-2020ಯಲ್ಲಿಯೇ ಅದು ನೆರವೇರಲು ರೊನಾಲ್ಡೋ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಅಲಿ ಡೈಯಿ ಕೇವಲ 149 ಪಂದ್ಯಗಳಲ್ಲಿ 10 ಗೋಲ್ಗಳನ್ನು ದಾಖಲಿಸಿದ್ದು, 1993 ಮತ್ತು 2006ರ ನಡುವೆ ಇರಾನ್ಗಾಗಿ ಆಡಿದ್ದರು. ಕ್ಲಬ್ಗಳು ಮತ್ತು ಎಲ್ಲಾ ಪಂದ್ಯಗಳಲ್ಲಿನ ತಾವು ಪಡೆದ ಗೋಲುಗಳನ್ನು ಒಟ್ಟುಗೂಡಿಸಿದರೆ ಕ್ರಿಶ್ಚಿಯಾನೋ ರೊನಾಲ್ಡೋ ಅವರ ಗೋಲುಗಳ ಸಂಖ್ಯೆ 755 ಆಗಲಿದೆ.