ETV Bharat / sports

ಪ್ರೀಮಿಯರ್​ ಲೀಗ್ ಆರಂಭಕ್ಕೂ ಮುನ್ನವೇ  ಆಘಾತ: 3 ಕ್ಲಬ್​ನ 6 ಆಟಗಾರರಿಗೆ ಸೋಂಕು - ಪ್ರೀಮಿಯರ್​ ಲೀಗ್​ನ ಆರು ಆಟಗಾರರಿಗೆ ಕೊರೊನಾ ಪಾಸಿಟಿವ್​

ಮಾರ್ಚ್​ನಲ್ಲಿ ಕೋವಿಡ್​ 19 ಭೀತಿಯಿಂದ ಮುಂದೂಡಲ್ಪಟ್ಟಿದ್ದ ಪ್ರೀಮಿಯರ್​ ಲೀಗ್ ಜೂನ್​ನಲ್ಲಿ ಪುನಾರಾರಂಭಿಸಲು ತೀರ್ಮಾನಿಸಲಾಗಿತ್ತು.

ಪ್ರೀಮಿಯರ್​ ಲೀಗ್
ಪ್ರೀಮಿಯರ್​ ಲೀಗ್
author img

By

Published : May 20, 2020, 1:45 PM IST

ಲಂಡನ್​: ಜೂನ್​ನಲ್ಲಿ ಪುನಾರಾಂಭಿಸಲು ಸಿದ್ದವಾಗುತ್ತಿರುವ ಪ್ರೀಮಿಯರ್​ ಲೀಗ್​ಗೆ ಆರಂಭಕ್ಕೂ ಮುನ್ನವೇ ಆಘಾತವಾಗಿದೆ. ತರಬೇತಿ ಪಾಲ್ಗೊಳ್ಳುವ ಮುನ್ನ ನಡೆಸಿದ ಪರೀಕ್ಷೆಯಲ್ಲಿ ಮೂರು ಕ್ಲಬ್​ಗಳ ಆರು ಆಟಗಾರರಿಗೆ ಕೋವಿಡ್​ 19 ಇರುವುದು ಪತ್ತೆಯಾಗಿದೆ.

ಮಾರ್ಚ್​ನಲ್ಲಿ ಕೋವಿಡ್​ 19 ಭೀತಿಯಿಂದ ಮುಂದೂಡಲ್ಪಟ್ಟಿದ್ದ ಪ್ರೀಮಿಯರ್​ ಲೀಗ್ ಜೂನ್​ನಲ್ಲಿ ಪುನಾರಾರಂಭಿಸಲು ತೀರ್ಮಾನಿಸಲಾಗಿತ್ತು.

ಮೇ 17 ಮತ್ತು 18ರಂದು ಸುಮಾರು 748 ಆಟಗಾರರು ಹಾಗೂ ಕ್ಲಬ್​ಗಳ ಸಿಬ್ಬಂದಿಯನ್ನು ಕೋವಿಡ್ 19 ಪರೀಕ್ಷೆಗ ಒಳಪಡಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಒಟ್ಟು ಆರು ಮಂದಿಗೆ ಪಾಸಿಟಿವ್​ ರಿಪೋರ್ಟ್​ ಬಂದಿದೆ ಎಂದು ಪ್ರೀಮಿಯರ್​ ಲೀಗ್​ ತಿಳಿಸಿದೆ.

ಕೋವಿಡ್​ 19 ಪಾಸಿಟಿವ್​ ಖಚಿತವಾಗಿರುವ ಆಟಗಾರರು ಅಥವಾ ಸಿಬ್ಬಂದಿಗೆ 7 ದಿನಗಳ ಕಾಲ ಸ್ವಯಂ ಐಸೋಲೇಷನ್​​ ​ನಲ್ಲಿರಲಿದ್ದಾರೆ. "ಪ್ರೀಮಿಯರ್ ಲೀಗ್ ಸ್ಪರ್ಧೆಯ ಸಮಗ್ರತೆ ಮತ್ತು ಮೇಲ್ವಿಚಾರಣೆಯ ಉದ್ದೇಶಗಳಿಗಾಗಿ ಈ ಮಾಹಿತಿಯನ್ನ ನೀಡಿದೆ. ಆದರೆ ಯಾವ ಕ್ಲಬ್​ ಅಥವಾ ಕೋವಿಡ್​ ಸೋಂಕಿಗೆ ಒಳಗಾಗಿರುವವರ ಮಾಹಿತಿಯನ್ನು ಪ್ರೀಮಿಯರ್​ ಲೀಗ್ ಬಿಟ್ಟುಕೊಟ್ಟಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.