ಲಂಡನ್: ಚೆಲ್ಲಿಯಾ ಕ್ಲಬ್‌ನ ಹೊಸ ಮುಖ್ಯ ತರಬೇತುದಾರರಾಗಿ ಥಾಮಸ್ ತುಶೆಲ್ ಅವರನ್ನು ನೇಮಕ ಮಾಡಿರುವುದಾಗಿ ಚೆಲ್ಸಿಯಾ ಪ್ರಕಟಿಸಿದೆ. ಈ ವೇಳೆ ತುಶೆಲ್ 18 ತಿಂಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
"ಥಾಮಸ್ ತುಶೆಲ್ ಅವರನ್ನು ಹೊಸ ಚೆಲ್ಸಿಯಾ ಹೆಡ್ ಕೋಚ್ ಆಗಿ ನೇಮಕ ಮಾಡಲಾಗಿದೆ. ಫ್ರೆಂಚ್ ಚಾಂಪಿಯನ್ ಪ್ಯಾರಿಸ್ ಸೇಂಟ್-ಜರ್ಮೈನ್ನಲ್ಲಿ ಕೆಲಸ ಕಳೆದುಕೊಂಡ ಬಳಿಕ ಇದೀಗ ಚೆಲ್ಸಿಯಾ ಕ್ಲಬ್ಗೆ ಸೇರಿದ್ದಾರೆ. ಇವರು ಚೆಲ್ಸಿಯಾ ತಂಡವನ್ನು ನಿರ್ವಹಿಸಿದ ಮೊದಲ ಜರ್ಮನ್ ವ್ಯಕ್ತಿ.
"ನನ್ನ ಮತ್ತು ನನ್ನ ಸಿಬ್ಬಂದಿಯ ಮೇಲಿನ ವಿಶ್ವಾಸಕ್ಕಾಗಿ ನಾನು ಚೆಲ್ಸಿಯಾ ಎಫ್‌ಸಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಫ್ರಾಂಕ್ ಲ್ಯಾಂಪಾರ್ಡ್ ಅವರ ಕೆಲಸ ಮತ್ತು ಚೆಲ್ಸಿಯಾದಲ್ಲಿ ಅವರು ರಚಿಸಿದ ಪರಂಪರೆಯ ಬಗ್ಗೆ ನಮಗೆಲ್ಲರಿಗೂ ಹೆಚ್ಚಿನ ಗೌರವವಿದೆ. ಈಗ ಚೆಲ್ಸಿಯಾ ಕುಟುಂಬದ ಭಾಗವಾಗಲು ನಾನು ಕೃತಜ್ಞನಾಗಿದ್ದೇನೆ" ಎಂದು ಕ್ಲಬ್‌ನ ಅಧಿಕೃತ ವೆಬ್‌ಸೈಟ್, ತುಶೆಲ್ ಹೇಳಿದ್ದನ್ನು ಉಲ್ಲೇಖಿಸಿದೆ.