ಬಾರ್ಸಿಲೋನಾ: ರಿಯೊ ವೆಲೆಕಾನೊದಲ್ಲಿ ನಡೆಯಲಿರುವ ಕೊನೆಯ ಕೋಪಾ ಡೆಲ್ ರೇ-16 ಪಂದ್ಯಕ್ಕಾಗಿ ಲಿಯೋನೆಲ್ ಮೆಸ್ಸಿಯನ್ನು ಬಾರ್ಸಿಲೋನಾ ತಂಡಕ್ಕೆ ಮತ್ತೆ ಸೇರಿಸಿಕೊಂಡಾಗ ಅಭಿಮಾನಿಗಳು ಆಶ್ಚರ್ಯ ಚಕಿತರಾಗಿದ್ದಾರೆ.
ಸ್ಪ್ಯಾನಿಷ್ ಸೂಪರ್ ಕಪ್ ಫೈನಲ್‌ನಲ್ಲಿ ಅಥ್ಲೆಟಿಕ್ ಕ್ಲಬ್ ವಿರುದ್ಧದ ಆಡುವಾಗ ರೆಡ್ ಕಾರ್ಡ್ ಪಡೆದ ಮೆಸ್ಸಿ ಎರಡು ಪಂದ್ಯಗಳ ನಿಷೇಧವನ್ನು ಎದುರಿಸಿದ್ದರು.
ಅಷ್ಟೇ ಅಲ್ಲದೆ, ಕೋಚ್ ರೊನಾಲ್ಡ್ ಕೋಮನ್ ಜೊತೆ ವಾಗ್ವಾದ ನಡೆಸಿ ತಂಡದಿಂದ ತೆರಳಿದ್ದರು ಎಂಬ ಮಾತೂ ಕೇಳಿ ಬಂದಿತ್ತು. ಇದೀಗ ಮತ್ತೆ ಬಾರ್ಸಿಲೋನಾ ತಂಡಕ್ಕೆ ಮೆಸ್ಸಿ ಆಗಮಿಸಿದ್ದಾರೆ.