ಪ್ಯಾರೀಸ್(ಫ್ರಾನ್ಸ್) : ಚಾಂಪಿಯನ್ ಲೀಗ್ ಸೆಮಿಫೈನಲ್ನಲ್ಲಿ ಫ್ರಾನ್ಸ್ ಫುಟ್ಬಾಲ್ ಕ್ಲಬ್ ಪ್ಯಾರೀಸ್ ಸೇಂಟ್ ಜರ್ಮನ್ ಸೆಮಿಫೈನಲ್ನಲ್ಲಿ ವಿಜಯ ಸಾಧಿಸಿತ್ತು. ಈ ವೇಳೆ, ಪ್ಯಾರೀಸ್ನಲ್ಲಿ ಸಂಭ್ರಮಾಚರಣೆ ನಡೆಸುವ ವೇಳೆ ಹಿಂಸಾಚಾರಕ್ಕೆ ತಿರುಗಿದ್ದರಿಂದ 36 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಾಂಪಿಯನ್ಸ್ ಲೀಗ್ನಲ್ಲಿ ಪ್ಯಾರೀಸ್ ಸೇಂಟ್ ಜರ್ಮನ್ ತಂಡದ 3-0 ಗೋಲುಗಳಿಂದ ಲಿಪ್ಜಿಗ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು. ಈ ಐತಿಹಾಸಿಕ ಜಯದ ಸಂಭ್ರಮವನ್ನು ಪ್ಯಾರೀಸ್ ಆರ್ಕ್ ಡಿ ಟ್ರಯೋಂಪ್ನ ಬುಡದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಮಿತಿ ಮೀರಿದ ಸಂಭ್ರಮಾಚರಣೆ ಮಾಡಿದ್ದರು. ಈ ವೇಳೆ, ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡಿದ್ದರಿಂದ ಪೊಲೀಸರು 36 ಮಂದಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
-
#BreakingNews : Overflows of joy on the #ChampsElysees following the victory of #PSG against #Leipzig. The security forces charge to disperse the supporters.#LEIPSG #PSGRBL #ChampionsLeague #dimaria #PSG #Paris pic.twitter.com/FXLNkpkZRB
— ZAHID ABBAS 🇮🇳 (@abbaszahid24) August 19, 2020 " class="align-text-top noRightClick twitterSection" data="
">#BreakingNews : Overflows of joy on the #ChampsElysees following the victory of #PSG against #Leipzig. The security forces charge to disperse the supporters.#LEIPSG #PSGRBL #ChampionsLeague #dimaria #PSG #Paris pic.twitter.com/FXLNkpkZRB
— ZAHID ABBAS 🇮🇳 (@abbaszahid24) August 19, 2020#BreakingNews : Overflows of joy on the #ChampsElysees following the victory of #PSG against #Leipzig. The security forces charge to disperse the supporters.#LEIPSG #PSGRBL #ChampionsLeague #dimaria #PSG #Paris pic.twitter.com/FXLNkpkZRB
— ZAHID ABBAS 🇮🇳 (@abbaszahid24) August 19, 2020
ಪ್ರಾನ್ಸ್ ಮೂಲದ ಫುಟ್ಬಾಲ್ ಕ್ಲಬ್ ಯುರೋಪಿಯನ್ ಲೀಗ್ನಲ್ಲಿ 26 ವರ್ಷಗಳನಂತರ ಫೈನಲ್ ಪ್ರವೇಶಿಸಿದ್ದೇ ಅಲ್ಲಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಆದರೆ, ಸಂಭ್ರಮ ಎಲ್ಲೆ ಮೀರಿದ್ದರಿಂದ ಕಂಬಿ ಎಣಿಸುವಂತಾಗಿದೆ. ಇನ್ನು ಈ ವೇಳೆ ಆರ್ಕ್ ಡಿ ಟ್ರಿಯೋಪ್ಗೆ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಿಂದ ತಿಳಿದುಬಂದಿದೆ.
1993ರಲ್ಲಿ ಮರ್ಸಿಲ್ಲೆ ತಂಡ ಮೊದಲ ಬಾರಿಗೆ ಚಾಂಪಿಯನ್ಸ್ ಲೀಗ್ನಲ್ಲಿ ಚಾಂಪಿಯನ್ ಆಗಿತ್ತು. ನಿನ್ನೆ ಪಿಎಸ್ಜಿ ತಂಡ ಫೈನಲ್ ಪ್ರವೇಶಿಸಿದೆ.