ಪರ್ತ್(ಆಸ್ಟ್ರೇಲಿಯಾ): ಪಾಕಿಸ್ತಾನಕ್ಕೆ ಮೊಹಮದ್ ನವಾಜ್ ಮತ್ತೆ ವಿಲನ್ ಆಗಿದ್ದಾರೆ. ಭಾರತ ವಿರುದ್ಧದ ಪಂದ್ಯದಲ್ಲಿ ವೈಡ್, ನೋಬಾಲ್ ಹಾಕಿ ಪಂದ್ಯ ಕೈಚೆಲ್ಲುವಂತೆ ಮಾಡಿದ್ದರು. ಇಂದು ಜಿಂಬಾಬ್ವೆ ವಿರುದ್ಧ ಕೊನೆಯಲ್ಲಿ ಔಟ್ ಆಗಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಜಿಂಬಾಬ್ವೆ ನೀಡಿದ್ದ 130 ರನ್ಗಳ ಸಾಧಾರಣ ಗುರಿ ಮುಟ್ಟುವಲ್ಲಿ ಎಡವಿಬಿದ್ದ ಪಾಕಿಸ್ತಾನ ಅಂತಿಮವಾಗಿ 1 ರನ್ನಿಂದ ಸೋತು ತೀವ್ರ ಮುಖಭಂಗ ಅನುಭವಿಸಿತು.
ಕ್ರಿಕೆಟ್ನಲ್ಲಿ ಮತ್ತೆ ಬೆಳೆಯುತ್ತಿರುವ ಜಿಂಬಾಬ್ವೆ ಮೊದಲು ಬ್ಯಾಟ್ ಮಾಡಿ 8 ವಿಕೆಟ್ಗೆ 130 ರನ್ ಗಳಿಸಿತ್ತು. ಸಲೀಸಾಗಿ ಗೆಲ್ಲಬಹುದಾಗಿದ್ದ ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ ಗೆಲುವಿನಂಚಿನಲ್ಲಿ ಮತ್ತೆ ಎಡವಿಬಿದ್ದು 8 ವಿಕೆಟ್ಗೆ 129 ಗಳಿಸಿ 1 ರನ್ನಿಂದ ಸೋಲೊಪ್ಪಿಕೊಂಡಿತು. ಈ ಮೂಲಕ ಜಿಂಬಾಬ್ವೆ ವಿಶ್ವಕಪ್‌ನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದೆ.
-
WHAT A GAME 🤩
— ICC (@ICC) October 27, 2022 " class="align-text-top noRightClick twitterSection" data="
Zimbabwe hold their nerve against Pakistan and clinch a thrilling win by a solitary run!#T20WorldCup | #PAKvZIM | 📝: https://t.co/ufgJMugdrK pic.twitter.com/crpuwpdhv5
">WHAT A GAME 🤩
— ICC (@ICC) October 27, 2022
Zimbabwe hold their nerve against Pakistan and clinch a thrilling win by a solitary run!#T20WorldCup | #PAKvZIM | 📝: https://t.co/ufgJMugdrK pic.twitter.com/crpuwpdhv5WHAT A GAME 🤩
— ICC (@ICC) October 27, 2022
Zimbabwe hold their nerve against Pakistan and clinch a thrilling win by a solitary run!#T20WorldCup | #PAKvZIM | 📝: https://t.co/ufgJMugdrK pic.twitter.com/crpuwpdhv5
ಕೊನೆಯ ಓವರ್ ಥ್ರಿಲ್ಲರ್: ಪಾಕಿಸ್ತಾನ ತಂಡ ಬೌಲಿಂಗ್, ಬ್ಯಾಟಿಂಗ್ನಲ್ಲಿ ಸದೃಢವಾಗಿದ್ದರೂ ಪಂದ್ಯವನ್ನು ಕೊನೆಯ ಓವರ್ವರೆಗೂ ಕೊಂಡೊಯ್ದು ಅಂತಿಮವಾಗಿ ಸೋಲನುಭವಿಸಿತು. ಕೊನೆಯ ಓವರ್ನಲ್ಲಿ ಗೆಲ್ಲಲು 11 ರನ್ಗಳ ಅವಶ್ಯಕತೆ ಇತ್ತು. ಕ್ರೀಸ್ನಲ್ಲಿದ್ದುದು ಕಳೆದ ಪಂದ್ಯದ ಸೋಲಿನ ಕಾರಣರಾಗಿದ್ದ ಮೊಹಮದ್ ನವಾಜ್ ಮತ್ತು ಮೊಹಮದ್ ವಾಸಿಂ ಜೂನಿಯರ್. ಬ್ರಾಡ್ ಈವನ್ಸ್ ಎಸೆದ ಮೊದಲ ಬಾಲ್ ಅನ್ನು ಬಲವಾಗಿ ಹೊಡೆದ ನವಾಜ್ 3 ರನ್ ತೆಗೆದರು.
ಬಳಿಕ ಸ್ಟ್ರೈಕ್ ಪಡೆದ ವಾಸೀಂ ಜೂನಿಯರ್ ಬೌಂಡರಿ ಗಳಿಸಿದರು. ಮೂರನೇ ಎಸೆತದಲ್ಲಿ 1 ರನ್ ಬಂತು. ನಾಲ್ಕನೇ ಎಸೆತ ಎದುರಿಸಿದ ನವಾಜ್ ರನ್ ಗಳಿಸಲಿಲ್ಲ. ಈ ವೇಳೆ ತಂಡ ತೀವ್ರ ಒತ್ತಡಕ್ಕೆ ಸಿಲುಕಿತು. 2 ಎಸೆತಗಳಲ್ಲಿ ಗೆಲುವಿಗೆ 3 ರನ್ ಬೇಕಿತ್ತು. ನವಾಜ್ ಎದುರಿಸಿದ 5 ನೇ ಬಾಲ್ ನೇರವಾಗಿ ಇರ್ವಿನ್ ಕೈಸೇರಿತು.
ಇದು ಪಾಕಿಸ್ತಾನದ ಹೃದಯ ಒಡೆದು ಹಾಕಿತು. ಪಂದ್ಯ ಗೆಲ್ಲಿಸಬೇಕಿದ್ದ ನವಾಜ್ 3 ರನ್ ಅಗತ್ಯವಿದ್ದಾಗ ಔಟಾಗಿ ಅಭಿಮಾನಿಗಳ ಕೋಪಕ್ಕೆ ಕಾರಣವಾದರು. ನವಾಜ್ ಕೂಡ ಬ್ಯಾಟ್ ತಲೆಮೇಲಿಟ್ಟುಕೊಂಡು ಕೆಲಕ್ಷಣ ಮೈದಾನದಲ್ಲೇ ಕುಸಿದರು. ಕೊನೆಯ ಎಸೆತವನ್ನು ಶಾಹೀನ್ ಆಫ್ರಿದಿ ಎದುರಿಸಿ ಓಡುತ್ತಿದ್ದಾಗ 1 ಮಾತ್ರ ಗಳಿಸಿ ರನೌಟ್ ಆದರು. ಇದರಿಂದ ಜಿಂಬಾಬ್ವೆ ಪಾಕಿಸ್ತಾನ ವಿರುದ್ಧ 1 ರನ್ನಿಂದ ಗೆಲುವಿನ ದಾಖಲೆ ಬರೆಯಿತು. ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಇದೇ ಮೊದಲ ಮತ್ತು ಒಟ್ಟಾರೆ 2ನೇ ಗೆಲುವಾಗಿದೆ.
ತಂಡದ ಹಿಟ್ಟರ್ಗಳು ಫೇಲ್: ಇದಕ್ಕೂ ಮೊದಲು ತಂಡದ ಪ್ರಮುಖ ಬ್ಯಾಟರ್ಗಳಾದ ಮೊಹಮದ್ ರಿಜ್ವಾನ್, ನಾಯಕ ಬಾಬರ್ ಅಜಂ ಮತ್ತೆ ಕೈಕೊಟ್ಟರು. ಬಾಬರ್ 4, ರಿಜ್ವಾನ್ 14 ರನ್ನಿಗೆ ಗಂಟುಮೂಟೆ ಕಟ್ಟಿದರು. ಇಫ್ತಿಕಾರ್ ಅಹ್ಮದ್ 5, ಶಾದಾಬ್ ಖಾನ್ 17, ಹೈದರ್ ಅಲಿ ಸೊನ್ನೆ ಸುತ್ತಿದರು.
ತಂಡ ಸತತ ವಿಕೆಟ್ ಕಳೆದುಕೊಂಡರೂ ಶಾನ್ ಮಸೂದ್ ಮತ್ತೆ ಆಪದ್ಭಾಂದವರಾದರು. 44 ರನ್ ಗಳಿಸಿದರು. ವಾಸೀಂ ಜೂನಿಯ್ ಔಟಾಗದೇ 12 ರನ್ ಮಾಡಿದರು. ಜಿಂಬಾಬ್ವೆ ಪರವಾಗಿ ಸಿಕಂದರ್ ರಾಜಾ 3, ಬ್ರಾಡ್ ಇವನ್ಸ್ 2 ವಿಕೆಟ್ ಕಿತ್ತರು.
ಪರದಾಡಿದ ಜಿಂಬಾಬ್ವೆ ಬ್ಯಾಟರ್ಗಳು: ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡ ಪಾಕ್ ವೇಗಿಗಳ ದಾಳಿಗೆ ನಲುಗಿ 8 ವಿಕೆಟ್ಗೆ 130 ಸಾಧಾರಣ ಮೊತ್ತ ದಾಖಲಿಸಿತು. ವೆಸ್ಲೆ ಮಧೆವೆರೆ 17, ಕ್ರೇಗ್ ಇರ್ವಿನ್ 19, ಸೀನ್ ವಿಲಿಯಮ್ಸನ್ 31 ಬ್ರಾಡ್ ಇವನ್ಸ್ 19 ರನ್ ಗಳಿಸಿದರು. ಪಾಕಿಸ್ತಾನದ ಪರವಾಗಿ ಮೊಹಮದ್ ವಾಸೀಂ ಜೂನಿಯರ್ 4 ವಿಕೆಟ್ ಕಿತ್ತು ಪ್ರಭಾವಿಯಾದರೆ, ಶಾದಾಬ್ ಖಾನ್ 3, ಹ್ಯಾರೀಸ್ ರೌಫ್ 1 ವಿಕೆಟ್ ಪಡೆದರು. 2 ಪಂದ್ಯಗಳನ್ನೂ ಸೋತಿರುವ ಪಾಕಿಸ್ತಾನ ಪಾಯಿಂಟ್ ಪಟ್ಟಿಯಲ್ಲಿ ಕೊನೆಗೆ ದೂಡಿದೆ.
ಇದನ್ನೂ ಓದಿ: ಸಿಡ್ನಿಯಲ್ಲಿ ವಿರಾಟ್ ಕೊಹ್ಲಿ ಸಿಕ್ಸರ್ ಪಟಾಕಿ; ತನ್ನದೇ ಶಾಟ್‌ಗೆ ರನ್ ಮಷಿನ್ ಅಚ್ಚರಿ