ಮುಂಬೈ: ಆಗಸ್ಟ್ 18ರಿಂದ ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಮೂರು ಏಕದಿನ ಸರಣಿಗಳ ಕ್ರಿಕೆಟ್ ಪಂದ್ಯ ಆಡಲಿದೆ. ಅದಕ್ಕಾಗಿ ಬಿಸಿಸಿಐ ಈಗಾಗಲೇ ಶಿಖರ್ ಧವನ್ ನಾಯಕತ್ವದ ತಂಡ ಪ್ರಕಟಿಸಿದ್ದಾರೆ. ಆದರೆ, ಕೋವಿಡ್ನಿಂದ ಸಂಪೂರ್ಣವಾಗಿ ಕೆ ಎಲ್ ರಾಹುಲ್ ಗುಣಮುಖರಾಗಿರುವ ಕಾರಣ ತಂಡ ಸೇರ್ಪಡೆಯಾಗಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ.
-
NEWS - KL Rahul cleared to play; set to lead Team India in Zimbabwe.
— BCCI (@BCCI) August 11, 2022 " class="align-text-top noRightClick twitterSection" data="
More details here - https://t.co/GVOcksqKHS #TeamIndia pic.twitter.com/1SdIJYu6hv
">NEWS - KL Rahul cleared to play; set to lead Team India in Zimbabwe.
— BCCI (@BCCI) August 11, 2022
More details here - https://t.co/GVOcksqKHS #TeamIndia pic.twitter.com/1SdIJYu6hvNEWS - KL Rahul cleared to play; set to lead Team India in Zimbabwe.
— BCCI (@BCCI) August 11, 2022
More details here - https://t.co/GVOcksqKHS #TeamIndia pic.twitter.com/1SdIJYu6hv
ಯೋ ಯೋ ಫಿಟ್ನೆಸ್ ಪಾಸ್ ಮಾಡಿರುವ ಕಾರಣ ರಾಹುಲ್ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಕಣಕ್ಕಿಳಿಯಲಿದ್ದು, ಟೀಂ ಇಂಡಿಯಾ ಮುನ್ನಡೆಸಲಿದ್ದಾರೆ. ಹೀಗಾಗಿ, ನಾಯಕತ್ವ ಜವಾಬ್ದಾರಿ ಹೊತ್ತುಕೊಂಡಿದ್ದ ಶಿಖರ್ ಧವನ್ ಇದೀಗ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. 2022 ಐಪಿಎಲ್ ಮುಕ್ತಾಯಗೊಂಡಾಗಿನಿಂದಲೂ ರಾಹುಲ್ ಯಾವುದೇ ರೀತಿಯ ಕ್ರಿಕೆಟ್ ಪಂದ್ಯಗಳಲ್ಲಿ ಭಾಗಿಯಾಗಿಲ್ಲ. ಏಷ್ಯಾಕಪ್ನಲ್ಲಿ ಅವರಿಗೆ ಸ್ಥಾನ ನೀಡಿರುವ ಕಾರಣ ಜಿಂಬಾಬ್ವೆ ಸರಣಿ ಅವರಿಗೆ ಮಹತ್ವದಾಗಿದೆ.
ಜಿಂಬಾಬ್ವೆ ವಿರುದ್ಧ ಸರಣಿಗೋಸ್ಕರ ಭಾರತೀಯ ಆಯ್ಕೆ ಸಮಿತಿ ಜುಲೈ 30ರಂದು ತಂಡ ಪ್ರಕಟಿಸಿತ್ತು. ಕೋವಿಡ್ನಿಂದಾಗಿ ರಾಹುಲ್ಗೆ ಮಣೆ ಹಾಕಿರಲಿಲ್ಲ. ಆದರೆ, ಇದೀಗ ಅವರು ಸಂಪೂರ್ಣವಾಗಿ ಫಿಟ್ ಆಗಿದ್ದರಿಂದ ಕಣಕ್ಕಿಳಿಯಲಿದ್ದಾರೆ. 2022 ಐಪಿಎಲ್ ಬಳಿಕ ರಾಹುಲ್ ಯಾವುದೇ ರೀತಿಯ ಸ್ಪರ್ಧಾತ್ಮಕ ಕ್ರಿಕಟ್ನಲ್ಲಿ ಭಾಗಿಯಾಗಿಲ್ಲ. ಮುಂಬರುವ ಏಷ್ಯಾಕಪ್ನಲ್ಲಿ ಅವಕಾಶ ನೀಡಿರುವ ಕಾರಣ ಈ ಸರಣಿ ಅವರಿಗೆ ಮಹತ್ವದಾಗಿದೆ.
ಇದನ್ನೂ ಓದಿ: ಜಿಂಬಾಬ್ವೆ ವಿರುದ್ಧದ ODI ಸರಣಿಗೆ ಟೀಂ ಇಂಡಿಯಾ ಪ್ರಕಟ.. ಕೊಹ್ಲಿ, ಬುಮ್ರಾ, ಪಂತ್ಗೆ ವಿಶ್ರಾಂತಿ
ಭಾರತ ತಂಡ ಇಂತಿದೆ: ಕೆ ಎಲ್ ರಾಹುಲ್(ಕ್ಯಾಪ್ಟನ್), ಶಿಖರ್ ಧವನ್(ಉಪ ನಾಯಕ), ಋತುರಾಜ್ ಗಾಯಕ್ವಾಡ, ಶುಬ್ಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್(ವಿ.ಕೀ), ಸಂಜು ಸ್ಯಾಮನ್ಸ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್, ಆವೇಶ್ ಖಾನ್, ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಹರ್
ಭಾರತ ವಿರುದ್ಧದ ಏಕದಿನ ಸರಣಿಗೋಸ್ಕರ ಜಿಂಬಾಬ್ವೆ ಕ್ರಿಕೆಟ್ ಮಂಡಳಿ ತಂಡ ಪ್ರಕಟಿಸಿದೆ. ರೆಗಿಸ್ ಚಕಬ್ವಾ ತಂಡದ ನಾಯಕತ್ವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಜಿಂಬಾಬ್ವೆ ತಂಡ: ರೆಗಿಸ್ ಚಕಬ್ವಾ (ಕ್ಯಾಪ್ಟನ್), ರಿಯಾನ್ ಬರ್ಲ್, ಸಿಕಂದರ್ ರಜಾ, ತನಕಾ ಚಿವಾಂಡಾ, ಬ್ರಾಡ್ಲಿ ಇವಾನ್ಸ್, ಲ್ಯೂಕ್ ಜೊಂಗ್ವೆ, ಇನೊಸೆಂಟ್ ಕೈಯಾ, ತಕುದ್ಜ್ವಾನಾಶೆ ಕೈಟಾನೊ, ಕ್ಲೈವ್ ಮದಂಡೆ, ವೆಸ್ಲಿ ಮಾಧೆವೆರೆ, ಜಾನ್ ಮಸಾರಾ, ಟೋನಿ ಮುನಿಯೊಂಗಾ, ವಿಚ್ಟೋರ್ ನ್ಗಾರ್ವಾ, ವಿಚ್ಟೋರ್ ನ್ಗಾರ್ವಾ, ವಿ. , ಮಿಲ್ಟನ್ ಶುಂಬಾ, ಡೊನಾಲ್ಡೊ ತಿರಿಪಾನೊ.
2016ರ ಬಳಿಕ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದ್ದು, ಉಭಯ ತಂಡಗಳ ನಡುವೆ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಉಭಯ ತಂಡಗಳ ನಡುವೆ ಹರಾರೆ ಮೈದಾನದಲ್ಲಿ ಆಗಸ್ಟ್ 18,20 ಹಾಗೂ 22ರಂದು ಪಂದ್ಯಗಳು ನಡೆಯಲಿವೆ. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ನ ಭಾಗವಾಗಿ ಈ ಸರಣಿ ನಡೆಯಲಿದ್ದು, ವಿಶ್ವಕಪ್ಗೆ ನೇರ ಅರ್ಹತೆ ಪಡೆದುಕೊಳ್ಳಲು ಜಿಂಬಾಬ್ವೆಗೆ ಈ ಸರಣಿ ಮಹತ್ವ ಪಡೆದುಕೊಂಡಿದೆ.