ETV Bharat / sports

ರಾಜಸ್ಥಾನ್​ ರಾಯಲ್ಸ್​ಗೆ ಹೊಸ ನಾಯಕ.. ಫ್ರಾಂಚೈಸಿ ಟ್ವಿಟರ್​ನಲ್ಲಿ ಚಹಲ್​ ಸ್ವ'ಘೋಷಣೆ'

author img

By

Published : Mar 16, 2022, 7:10 PM IST

ರಾಜಸ್ಥಾನ್​ ರಾಯಲ್ಸ್​ನ ಅಧಿಕೃತ ಟ್ವಿಟರ್​ ಖಾತೆಯ ಪಾಸ್​ವರ್ಡ್​ ಪಡೆದುಕೊಂಡಿರುವ ಭಾರತೀಯ ಸ್ಪಿನ್ನರ್​, ರಾಜಸ್ಥಾನ್​ ರಾಯಲ್ಸ್​ ಹೊಸ ನಾಯಕ ಇವರೇ ನೋಡಿ ಎಂದು ತಮ್ಮ ಫೋಟೋವನ್ನು ಟ್ವೀಟ್​ ಮಾಡಿಕೊಂಡಿದ್ದಾರೆ. ಈ ಟ್ವೀಟ್​ಗೆ ನಾಯಕ ಸಂಜು ಸಾಮ್ಸನ್​ ಕೂಡ ಪ್ರತಿಕ್ರಿಯಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ. ಹಾಗಾಗಿ ಟ್ವಿಟರ್​ನಲ್ಲಿ ಇದು ಕೆಲವು ಸಮಯ ಆಶ್ಚರ್ಯ ಮತ್ತು ಗೊಂದಲ ಮೂಡಿಸಿದೆ.

Yuzvendra Chahal
ರಾಜಸ್ಥಾನ್ ರಾಯಲ್ಸ್​ ನಾಯಕ

ಜೈಪುರ: ಐಪಿಎಲ್​ನ 15ನೇ ಆವೃತ್ತಿ ಪ್ರಾರಂಭಕ್ಕೆ ಕೆಲವೇ ದಿನಗಳು ಬಾಕಿಯುಳಿದಿವೆ. ಆದರೆ ಎಲ್ಲ ತಂಡಗಳು ಶ್ರೀಮಂತ ಲೀಗ್​ಗಾಗಿ ಬರದ ಸಿದ್ಧತೆಯಲ್ಲಿದ್ದರೆ, ರಾಜಸ್ಥಾನ್​ ರಾಯಲ್ಸ್​ ಅಧಿಕೃತ ಖಾತೆಯಲ್ಲಿ ಯುಜ್ವೇಂದ್ರ ಚಹಲ್ ನೂತನ ನಾಯಕ ಎಂದು ಘೋಷಣೆ ಮಾಡಿತ್ತು. ಇದರಿಂದ ಅಭಿಮಾನಿಗಳಲ್ಲಿ ಗೊಂದಲ ಉಂಟಾಗಿತ್ತು. ಆದರೆ ಇದೆಲ್ಲಾ ಕಿತಾಪತಿಗೆ ಹೆಸರಾಗಿರುವ ಚಹಲ್ ಎನ್ನುವುದು ಕೂಡ ಬಹಿರಂಗವಾಗಿದೆ.

ರಾಜಸ್ಥಾನ್​ ರಾಯಲ್ಸ್​ನ ಅಧಿಕೃತ ಟ್ವಿಟರ್​ ಖಾತೆಯ ಪಾಸ್​ವರ್ಡ್​ ಪಡೆದುಕೊಂಡಿರುವ ಭಾರತೀಯ ಸ್ಪಿನ್ನರ್​, ರಾಜಸ್ಥಾನ್​ ರಾಯಲ್ಸ್​ ಹೊಸ ನಾಯಕ ಇವರೇ ನೋಡಿ ಎಂದು ತಮ್ಮ ಫೋಟೋವನ್ನು ಟ್ವೀಟ್​ ಮಾಡಿಕೊಂಡಿದ್ದಾರೆ. ಈ ಟ್ವೀಟ್​ಗೆ ನಾಯಕ ಸಂಜು ಸಾಮ್ಸನ್​ ಕೂಡ ಪ್ರತಿಕ್ರಿಯಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ. ಹಾಗಾಗಿ ಟ್ವಿಟರ್​ನಲ್ಲಿ ಇದು ಕೆಲವು ಸಮಯ ಆಶ್ಚರ್ಯ ಮತ್ತು ಗೊಂದಲ ಮೂಡಿಸಿತ್ತು.

ಇದಷ್ಟೆ ಅಲ್ಲದೆ ಈ ಟ್ವೀಟ್​ಅನ್ನು 10 ಸಾವಿರ ರೀಟ್ವೀಟ್​ ಮಾಡಿದರೆ ಜೋಶ್ ಬಟ್ಲರ್​ ಜೊತೆಗೆ ಚಹಲ್ ಇನ್ನಿಂಗ್ಸ್​ ಆರಂಭಿಸಲಿದ್ದಾರೆ ಎಂದು ಮತ್ತೊಂದು ಟ್ವೀಟ್​ ಮಾಡಿದ್ದಾರೆ. ಅಭಿಮಾನಿಗಳು ಕೂಡ ಇದಕ್ಕೆ ಕೈಜೋಡಿಸಿದ್ದು, 11 ಸಾವಿರಕ್ಕೂ ಹೆಚ್ಚು ರೀಟ್ವೀಟ್​ಗಳಾಗಿವೆ.

ಇಷ್ಟಕ್ಕೆ ನಿಲ್ಲಿಸದ ಚಹಲ್​ ಅಶ್ವಿನ್​ ಖಾತೆಯನ್ನು ಟ್ಯಾಗ್ ಮಾಡಿ, ಎಲ್ಲಿದ್ದೀರಾ ನನ್ನ ಪ್ರೀತಿಯ ಅಶ್ವಿನ್, ಫೋನ್ ಕಾಲ್​, ಮೆಸೇಜ್​ ಏನೂ ಇಲ್ಲ. ನಿಮ್ಮ ಜೀವನದಲ್ಲಿ ಬೇರೆ ಯಾರಾದರೂ ಇದ್ದಾರೆಯೇ? ಎಂದು ಟ್ವೀಟ್​ ಮಾಡಿ ಮಜಾ ತೆಗೆದುಕೊಂಡಿದ್ದಾರೆ. ಅಲ್ಲದೆ ಇಂಗ್ಲೆಂಡ್ ಬ್ಯಾಟರ್​ ಜೋಶ್ ಬಟ್ಲರ್​ಗೆ ' ಹಾಯ್ ಜೋಶ್​ ಬೇಬಿ, ಐ ಲವ್ ಯು ಸೋ ಮಚ್​' ಎಂದು ಸಂದೇಶ ಕಳುಹಿಸಿ, ಅದನ್ನೂ ಕೂಡ ಟ್ವೀಟ್​ ಮಾಡಿದ್ದಾರೆ.

  • Where are you my love @ashwinravi99 💗💗💗💗💗💗💗💗💗💗💗💗💗 no calls no texts koi or hai kya aapki life mein? 😭😭😒😒

    — Rajasthan Royals (@rajasthanroyals) March 16, 2022 " class="align-text-top noRightClick twitterSection" data=" ">

ಚಹಲ್ 2014ರಿಂದ 2021ರವರೆಗೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಪರ ಆಡಿದ್ದರು. ಆದರೆ ಮೆಗಾ ಹರಾಜಿನಲ್ಲಿ ಅವರನ್ನು ಆರ್​ಸಿಬಿ ಖರೀದಿಸಲು ಮನಸ್ಸು ಮಾಡಲಿಲ್ಲ. ಕೊನೆಗೆ ರಾಜಸ್ಥಾನ್​ ರಾಯಲ್ಸ್​ 6.5 ಕೋಟಿ ರೂ.ಗಳಿಗೆ ಖರೀದಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ:ಐಪಿಎಲ್​ಗೆ ಹೊಸ ರೂಪದಲ್ಲಿ ರೀ ಎಂಟ್ರಿ ಕೊಡಲಿದ್ದಾರೆ ಸುರೇಶ್​ ರೈನಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.