ETV Bharat / sports

8 ವರ್ಷಗಳ ಆರ್​ಸಿಬಿ ಬಾಂಧವ್ಯ ಅಂತ್ಯ: ರಾಜಸ್ಥಾನ್​ ರಾಯಲ್ಸ್​ ತೆಕ್ಕೆಗೆ ಯಜ್ವೇಂದ್ರ ಚಹಲ್

ಯಜ್ವೇಂದ್ರ ಚಹಲ್​ 2014ರಲ್ಲಿ ಮೂಲಬೆಲೆ 10 ಲಕ್ಷ ರೂ.ಗಳಿಗೆ ಆರ್​ಸಿಬಿ ಸೇರಿದ್ದರು. ನಂತರ ಅದೇ ಮೊತ್ತಕ್ಕೆ 2017ರವರೆಗೂ ಆಡಿದ್ದ ಸ್ಪಿನ್ನರ್​ 2018ರಲ್ಲಿ 6 ಕೋಟಿ ರೂ. ಪಡೆದಿದ್ದರು..

Yuzvendra Chahal Bought By Rajasthan Royal For INR 6.5 Crores
ರಾಜಸ್ಥಾನ್​ ರಾಯಲ್ಸ್​ ತೆಕ್ಕೆಗೆ ಯುಜ್ವೇಂದ್ರ ಚಹಲ್
author img

By

Published : Feb 12, 2022, 7:31 PM IST

Updated : Feb 12, 2022, 10:35 PM IST

ಬೆಂಗಳೂರು : ಕಳೆದ 8 ವರ್ಷಗಳಿಂದ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯಲ್ಲಿದ್ದ ಭಾರತದ ಅಗ್ರ ಸ್ಪಿನ್ನರ್​ ಯಜ್ವೇಂದ್ರ ಚಹಲ್‌ರನ್ನು ರಾಜಸ್ಥಾನ್ ರಾಯಲ್ಸ್ ತಂಡ 6.50 ಕೋಟಿ ರೂ.ಗೆ​ ಖರೀದಿಸಿದೆ. ಈ ಮೂಲಕ 8 ವರ್ಷಗಳ ಆರ್​ಸಿಬಿಯೊಂದಗಿನ ಒಡನಾಟ 2022ಕ್ಕೆ ಅಂತ್ಯವಾಗಿದೆ.

ಯಜ್ವೇಂದ್ರ ಚಹಲ್​ 2014ರಲ್ಲಿ ಮೂಲಬೆಲೆ 10 ಲಕ್ಷ ರೂ.ಗಳಿಗೆ ಆರ್​ಸಿಬಿ ಸೇರಿದ್ದರು. ನಂತರ ಅದೇ ಮೊತ್ತಕ್ಕೆ 2017ರವರೆಗೂ ಆಡಿದ್ದ ಸ್ಪಿನ್ನರ್​ 2018ರಲ್ಲಿ 6 ಕೋಟಿ ರೂ. ಪಡೆದಿದ್ದರು.

ಆದರೆ, 2022ರ ಆವೃತ್ತಿಗೂ ಮುನ್ನ ಬೆಂಗಳೂರು ಫ್ರಾಂಚೈಸಿ ಚಹಲ್​ರನ್ನು ರಿಟೈನ್​ ಮಾಡಿಕೊಂಡಿರಲಿಲ್ಲ. ವಿರಾಟ್​ ಕೊಹ್ಲಿ, ಗ್ಲೆನ್​ ಮ್ಯಾಕ್ಸ್​ವೆಲ್​ ಮತ್ತು ಮೊಹಮ್ಮದ್​ ಸಿರಾಜ್​ರನ್ನು ಕ್ರಮವಾಗಿ 15, 11 ಮತ್ತು 7 ಕೋಟಿ ರೂ.ಗಳಿಗೆ ರಿಟೈನ್ ಮಾಡಿಕೊಂಡಿತ್ತು.

ಇನ್ನು ಹರಾಜಿನಲ್ಲಿ ಈಗಾಗಲೇ ಶ್ರೀಲಂಕಾದ ವನಿಡು ಹಸರಂಗ ಅವರನ್ನು 10.75 ಕೋಟಿ ರೂ. ನೀಡಿ ಖರೀದಿಸಿದ್ದರಿಂದ ಚಹಲ್​ ಮೇಲೆ ಬಿಡ್​ ಕೂಡ ಮಾಡಲಿಲ್ಲ. ಆದರೆ, ಮುಂಬೈ ಇಂಡಿಯನ್ಸ್​ 6 ಕೋಟಿ ರೂ.ವರೆಗೂ ರಾಯಲ್ಸ್ ಜೊತೆಗೆ ಪೈಪೋಟಿ ನಡೆಸಿತಾದರೂ ಖರೀದಿಸುವಲ್ಲಿ ವಿಫಲವಾಯಿತು.

ಸ್ಪಿನ್ನರ್ ವಿಭಾಗದಲ್ಲಿ ಭಾರತದ ಕುಲ್ದೀಪ್ ಯಾದವ್​ 2 ಕೋಟಿ ರೂ.ಗಳಿಗೆ ಡೆಲ್ಲಿ ತಂಡಕ್ಕೂ, ರಾಹುಲ್ ಚಾಹರ್​ 5.25 ಕೋಟಿ ರೂ.ಗಳಿಗೆ ಪಂಜಾಬ್ ತಂಡಕ್ಕೆ ಸೇರಿಕೊಂಡರು.

ಇದನ್ನೂ ಓದಿ: ದೀಪಕ್ ಚಾಹರ್​ಗೆ ಒಲಿದ ಚಾಕ್​ಪಾಟ್​.. 2022ರ ಐಪಿಎಲ್​​ ಹರಾಜಿನಲ್ಲಿ ಕೋಟಿ ವೀರರಾದ ಬೌಲರ್​ಗಳ ಪಟ್ಟಿ

Last Updated : Feb 12, 2022, 10:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.