ETV Bharat / sports

ನಿಮಗೆ ಭಾರತಕ್ಕೆ ಆಡುವಾಗ ವರ್ಕ್​ಲೋಡ್, ಐಪಿಎಲ್​ನಲ್ಲಿ ಯಾವ ಒತ್ತಡ ಇರಲ್ಲ: ಸುನಿಲ್ ಗವಾಸ್ಕರ್ ವಾಗ್ದಾಳಿ - ಈಟಿವಿ ಭಾರತ ಕನ್ನಡ

ಫಿಟ್​ ಆಗಿದ್ದರೆ ವರ್ಕ್​ಲೋಡ್​ ಪ್ರಶ್ನೆಯೇ ಬರುವುದಿಲ್ಲ. ಬಹಳ ಆಟಗಾರರು ವರ್ಕ್​​ಲೋಡ್​​ ​ಮರೆತು ಐಪಿಎಲ್​ನಲ್ಲಿ ಆಡುತ್ತಾರೆ. ಸದ್ಯ ತಂಡದಲ್ಲಿ ಬದಲಾವಣೆ ಆಗಲಿದೆ, ಅದರ ಅನಿವಾರ್ಯತೆಯೂ ಇದೆ ಎಂದು ದಿಗ್ಗಜ ಕ್ರಿಕೆಟರ್​ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

You not get tired while playing IPL? Sunil Gavaskar slams Team India players
ಸುನಿಲ್ ಗವಾಸ್ಕರ್ ವಾಗ್ದಾಳಿ
author img

By

Published : Nov 12, 2022, 10:23 AM IST

ಅಡಿಲೇಡ್‌ನಲ್ಲಿ ನಡೆದ ಟಿ20 ವಿಶ್ವಕಪ್​ ಸೆಮಿಫೈನಲ್​ನಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನದೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ. ಇದರಿಂದ ತಂಡವು ಭಾರತೀಯ ಕ್ರಿಕೆಟ್ ದಿಗ್ಗಜರು ಸೇರಿದಂತೆ ಹಲವರಿಂದ ಟೀಕೆಗೆ ಗುರಿಯಾಗಿದೆ. ಲೆಜೆಂಡರಿ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಭಾರತ ತಂಡದಲ್ಲಿನ 'ವರ್ಕ್​ಲೋಡ್'​​ ಪರಿಕಲ್ಪನೆ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಶ್ವಕಪ್​ ಗೆಲ್ಲಲಾಗದ ಹಿನ್ನೆಲೆಯಲ್ಲಿ ತಂಡದಲ್ಲಿ ಕೆಲ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ. ಮುಂಬರುವ ನ್ಯೂಜಿಲೆಂಡ್​ ಪ್ರವಾಸಕ್ಕೂ ಸಹ ಭಾರತ ತಂಡದಲ್ಲಿ ಬದಲಾವಣೆ ಆಗಿವೆ. ಯಾವಾಗಲೂ ಕೆಲಸದ ಹೊರೆ, ಕೆಲಸದ ಹೊರೆ ಎಂದು ಹೇಳಲಾಗುತ್ತದೆ. ಆದರೆ ಭಾರತ ತಂಡಕ್ಕಾಗಿ ಆಡುವಾಗ ಮಾತ್ರ ವರ್ಕ್​ಲೋಡ್​ ಆಗುತ್ತದೆಯೇ ಎಂದು ಗವಾಸ್ಕರ್​ ಪ್ರಶ್ನಿಸಿದ್ದಾರೆ.

'ನೀವು ಪೂರ್ತಿ ಐಪಿಎಲ್​ ಆಡುತ್ತೀರಿ, ಆ ಸಂದರ್ಭದಲ್ಲಿ ನಿರಂತರವಾಗಿ ಬೇರೆ ಬೇರೆ ಮೈದಾನಗಳಿಗೆ ಪ್ರಯಾಣ ಮಾಡುತ್ತೀರಿ. ಕೇವಲ ಹಿಂದಿನ ಸೀಸನ್​ ಮಾತ್ರ ನಾಲ್ಕು ಸ್ಥಳಗಳಲ್ಲಷ್ಟೇ ನಡೆದಿತ್ತು. ಆಗ ವಾಹನದಲ್ಲಿ ಸಂಚರಿಸುವಾಗ ನಿಮಗೆ ಆಯಾಸವಾಗುವುದಿಲ್ಲ. ಆದರೆ ಭಾರತಕ್ಕಾಗಿ ಆಡುವಾಗ, ಗ್ಲಾಮರಸ್ ಅಲ್ಲದ ದೇಶಗಳಿಗೆ ಪ್ರವಾಸ ಮಾಡುವಾಗ ನಿಮಗೆ ಕೆಲಸದ ಹೊರೆ ಕಂಡುಬರುತ್ತದೆ ಎಂದು ಟೀಂ ಇಂಡಿಯಾ ಆಟಗಾರರ ಬಗ್ಗೆ ಸುನಿಲ್ ಗವಾಸ್ಕರ್ ವಾಗ್ದಾಳಿ ನಡೆಸಿದ್ದಾರೆ.

ವರ್ಕ್​ಲೋಡ್​ ಹಾಗೂ ಫಿಟ್ನೆಸ್​​ ಎರಡೂ ಒಟ್ಟಿಗೆ ಕಂಡುಬರಲು ಸಾಧ್ಯವಿಲ್ಲ. ಫಿಟ್​ ಆಗಿದ್ದರೆ ವರ್ಕ್​ಲೋಡ್​ ಪ್ರಶ್ನೆಯೇ ಬರುವುದಿಲ್ಲ. ನಿಮಗೆ ಟೀಂನಲ್ಲಿ ಸ್ಥಾನ ನೀಡಲಾಗಿದೆ. ರಿಟೈನರ್ ಶುಲ್ಕ ಕೂಡ ನೀಡಲಾಗುತ್ತಿದೆ. ಒಂದು ವೇಳೆ ನೀವು ವರ್ಕ್​ಲೋಡ್​ನಿಂದ ಆಡುತ್ತಿಲ್ಲವೆಂದರೆ ನಿಮಗೆ ರಿಟೈನರ್ ಶುಲ್ಕ ಯಾಕೆ ನೀಡಬೇಕು. ಅದನ್ನೂ ಸಹ ಕೈಬಿಡಬೇಕಲ್ಲವೇ? ಎಂದಿದ್ದಾರೆ.

ಬಹಳ ಆಟಗಾರರು ವರ್ಕ್​​ಲೋಡ್​​ ​ಮರೆತು ಐಪಿಎಲ್​ನಲ್ಲಿ ಆಡುತ್ತಾರೆ. ತಂಡದಲ್ಲಿ ಬದಲಾವಣೆ ಆಗಲಿದೆ, ಅದರ ಅಗತ್ಯತೆಯೂ ಇದೆ. ಈ ಬಗ್ಗೆ ತಂಡದ ಆಯ್ಕೆ ಸಮಿತಿ ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ಆಟಗಾರರಿಗೆ ಸ್ಟಷ್ಟ ಸಂದೇಶ ರವಾನಿಸಬೇಕಿದೆ ಎಂದು ಗವಾಸ್ಕರ್​ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಧೋನಿ ಬಳಿಕ ಯಾರಿಂದಲೂ ಮೂರೂ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ: ಗೌತಮ್​ ಗಂಭೀರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.