ETV Bharat / sports

12 ವರ್ಷಗಳ ಹಳೆಯ ವೆಸ್ಟ್​ ಇಂಡೀಸ್​ ಪ್ರವಾಸದ ಕ್ಷಣಗಳನ್ನು ಮೆಲುಕು ಹಾಕಿದ ರಾಹುಲ್ & ವಿರಾಟ್..

12 ವರ್ಷಗಳ ಹಿಂದಿನ ವೆಸ್ಟ್​ ಇಂಡೀಸ್ ಪ್ರವಾಸದ ಕ್ಷಣಗಳನ್ನು ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ವಿರಾಟ್​ ಕೊಹ್ಲಿ ಮೆಲಕು ಹಾಕಿದರು.

Rahul Dravid  Virat Kohli
ರಾಹುಲ್ & ವಿರಾಟ್
author img

By

Published : Jul 12, 2023, 5:47 PM IST

ರೋಸೌ (ಡೊಮಿನಿಕಾ): 12 ವರ್ಷಗಳ ಹಿಂದಿನ ವೆಸ್ಟ್​ ಇಂಡೀಸ್​ ಪ್ರವಾಸದ ಕ್ಷಣಗಳನ್ನು ಮುಖ್ಯ ಕೋಚ್​ ರಾಹುಲ್ ದ್ರಾವಿಡ್​ ಮತ್ತು ವಿರಾಟ್ ಕೊಹ್ಲಿ ಮೆಲುಕು ಹಾಕಿದ್ದಾರೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ, ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ತಮ್ಮ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ದಶಕದ ಹಿಂದಿನ ಕ್ರಿಕೆಟ್ ಕ್ಷೇತ್ರಕ್ಕೆ ಸಂಬಂಧಿಸಿದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಅವರು ವಿಡಿಯೋದಲ್ಲಿ, 2011ರ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಕ್ಷಣಗಳನ್ನು ನೆನಪಿಸಿಕೊಂಡರು. ಆ ಟೆಸ್ಟ್​ ಸರಣಿಯಲ್ಲಿ ರಾಹುಲ್​ ದ್ರಾವಿಡ್​ ಹಾಗೂ ವಿರಾಟ್ ಕೊಹ್ಲಿ ಜೊತೆಯಾಗಿ ಆಟವಾಡಿದ್ದರು. 12 ವರ್ಷಗಳ ನಂತರ, ಮತ್ತೆ 2023ರಲ್ಲಿ, ಇಬ್ಬರೂ ಆಟಗಾರರು ಈ ಮೈದಾನದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ರೆ ಈ ಇಬ್ಬರ ಪಾತ್ರಗಳು ಕೂಡಾ ಬದಲಾಗಿವೆ.

ನೆನಪಿನ ಬುತ್ತಿ ಬಿಚ್ಚಿಟ್ಟ ರಾಹುಲ್ ದ್ರಾವಿಡ್: ತಮ್ಮ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡ ರಾಹುಲ್ ದ್ರಾವಿಡ್ ಅವರು, ''2011ರಲ್ಲಿ ನಾನು ಮತ್ತು ವಿರಾಟ್ ಕೊಹ್ಲಿ ಈ ಮೈದಾನದಲ್ಲಿ ಆಡಲು ಒಟ್ಟಿಗೆ ಬಂದಿದ್ದೆವು. ಇಬ್ಬರೂ ಆಟಗಾರರು ಟೆಸ್ಟ್ ತಂಡದ ಭಾಗವಾಗಿದ್ದೆವು. 12 ವರ್ಷಗಳ ನಂತರ ಮತ್ತೊಮ್ಮೆ ವಿಭಿನ್ನ ಪಾತ್ರಗಳಲ್ಲಿ ಇಲ್ಲಿಗೆ ತಲುಪಿದ್ದೇವೆ. ಇಷ್ಟು ದಿನಗಳ ಸುದೀರ್ಘ ಪಯಣ ತುಂಬಾ ಆಹ್ಲಾದಕರವಾಗಿದ್ದು, ಹಲವು ಅನುಭವಗಳನ್ನು ನೀಡಿವೆ'' ಎಂದು ನೆನಪು ಮಾಡಿಕೊಂಡರು.

ತಮ್ಮ ಮೊದಲ ಸರಣಿ ಬಗ್ಗೆ ವಿರಾಟ ಕೋಹ್ಲಿ ಹೇಳಿದ್ದೇನು?: ಮತ್ತೊಂದೆಡೆ 2011ರಲ್ಲಿ ಇದೇ ಮೈದಾನದಲ್ಲಿ ಆಡಿದ ಮೊದಲ ಸರಣಿ ವಿಶೇಷ ಎಂದು ಬಣ್ಣಿಸಿರುವ ವಿರಾಟ್ ಕೊಹ್ಲಿ ಅವರು, ಇದೀಗ 100ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದು, 12 ವರ್ಷಗಳ ಬಳಿಕ ಮತ್ತೆ ಇಲ್ಲಿ ಆಡುತ್ತಿರುವುದು ರೋಮಾಂಚನ ತಂದಿದೆ ಎಂದಿದ್ದಾರೆ. ಈ ಗ್ರೌಂಡ್​ ತಮಗೆ ಸದಾ ವಿಶೇಷವಾಗಿರುತ್ತದೆ ಎಂದರು.

ವಿಡಿಯೋ ಟ್ವೀಟ್ ಮಾಡಿದ ಬಿಸಿಸಿಐ: ಕೆಲವು ದಿನಗಳ ಹಿಂದೆ ವಿರಾಟ್ ಕೊಹ್ಲಿ ಅವರು ರಾಹುಲ್ ದ್ರಾವಿಡ್ ಅವರೊಂದಿಗೆ ತಮ್ಮ ಚಿತ್ರವನ್ನು ಹಂಚಿಕೊಳ್ಳುವಾಗ ಈ ಮೈದಾನದ ಹಳೆಯ ನೆನಪನ್ನು ಹಂಚಿಕೊಂಡಿದ್ದರು. 2011ರಲ್ಲಿ ಟೀಂ ಇಂಡಿಯಾ ಇಲ್ಲಿಗೆ ಟೆಸ್ಟ್ ಪಂದ್ಯಗಳ ಸರಣಿ ಆಡಲು ಬಂದಾಗ, ರಾಹುಲ್ ದ್ರಾವಿಡ್ ಕೂಡ ಆಟಗಾರನಾಗಿ ತಂಡದಲ್ಲಿದ್ದರು. ವಿರಾಟ್ ಕೊಹ್ಲಿಗೆ ಇದು ಮೊದಲ ಟೆಸ್ಟ್ ಸರಣಿಯಾಗಿತ್ತು. ಇಬ್ಬರ ಈ ವಿಡಿಯೋವನ್ನು ಬಿಸಿಸಿಐ ಟ್ವೀಟ್ ಮಾಡಿದ್ದು, 12 ವರ್ಷಗಳ ನಂತರ ಇಬ್ಬರೂ ಡೊಮಿನಿಕಾದ ನೆನಪನ್ನು ನೆನಪಿಸಿಕೊಂಡರು.

2011ರಲ್ಲಿ ವಿರಾಟ್ ಅವರು, ಒಡಿಐಗಳಲ್ಲಿ ಸಾಧಿಸಿದ ಅಗಾಧ ಯಶಸ್ಸಿನ ಹೊರತಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿನ ಮೊದಲ ಪ್ರವಾಸವು ನಿರಾಶದಾಯಕವಾಗಿತ್ತು. ಅವರು ಮೂರು ಪಂದ್ಯಗಳಲ್ಲಿ ಕೇವಲ 76 ರನ್ ಗಳಿಸಿದರು. 15.20 ಸರಾಸರಿಯಲ್ಲಿ ಐದು ಇನ್ನಿಂಗ್ಸ್‌ಗಳಲ್ಲಿ, 30ರ ಅತ್ಯುತ್ತಮ ಸ್ಕೋರ್‌ ಆಗಿತ್ತು. ಮತ್ತೊಂದೆಡೆ, ದ್ರಾವಿಡ್ ಅವರು, ಆರು ಇನ್ನಿಂಗ್ಸ್‌ಗಳಲ್ಲಿ 50.20ರ ಸರಾಸರಿಯಲ್ಲಿ 251 ರನ್‌ಗಳೊಂದಿಗೆ ಸರಣಿಯಲ್ಲಿ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಒಂದು ಶತಕ ಹಾಗೂ ಅರ್ಧ ಶತಕ ಗಳಿಸಿದ್ದರು.

ನಂತರ, ವಿರಾಟ್ ಆಧುನಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. 109 ಟೆಸ್ಟ್‌ಗಳಲ್ಲಿ ಅವರು 48.72 ಸರಾಸರಿಯಲ್ಲಿ 8,479 ರನ್ ಗಳಿಸಿದ್ದಾರೆ. ಅವರು ಸ್ವರೂಪದಲ್ಲಿ ತಲಾ 28 ಶತಕಗಳು ಮತ್ತು ಅರ್ಧಶತಕಗಳನ್ನು ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 254. ವೆಸ್ಟ್ ಇಂಡೀಸ್‌ನ 9 ಟೆಸ್ಟ್‌ಗಳಲ್ಲಿ ಆಡಿದ ವಿರಾಟ್ ಅವರು, 13 ಇನ್ನಿಂಗ್ಸ್‌ಗಳಲ್ಲಿ 35.61 ಸರಾಸರಿಯಲ್ಲಿ ಒಂದು ಶತಕ ಮತ್ತು ಎರಡು ಅರ್ಧ ಶತಕಗಳೊಂದಿಗೆ 435 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 200. ಒಟ್ಟಾರೆ ವಿಂಡೀಸ್ ವಿರುದ್ಧ ವಿರಾಟ್ 14 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 43.26 ಸರಾಸರಿಯಲ್ಲಿ 822 ರನ್ ಗಳಿಸಿದ್ದಾರೆ. ಅವರು ಎರಡು ಶತಕಗಳು ಮತ್ತು ಐದು ಅರ್ಧ ಶತಕಗಳನ್ನು ಗಳಿಸಿದ್ದಾರೆ, 200 ಅತ್ಯುತ್ತಮ ಸ್ಕೋರ್​ ಆಗಿದೆ.

ವೆಸ್ಟ್ ಇಂಡೀಸ್‌ನಲ್ಲಿ 30 ಪಂದ್ಯಗಳನ್ನು ಆಡಿದ ವಿರಾಟ್: ಒಟ್ಟಾರೆ ವೆಸ್ಟ್ ಇಂಡೀಸ್‌ನಲ್ಲಿ ವಿರಾಟ್ 30 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 46.66 ಸರಾಸರಿಯಲ್ಲಿ 1,400 ರನ್ ಗಳಿಸಿದ್ದಾರೆ. ಅವರು 33 ಇನ್ನಿಂಗ್ಸ್‌ಗಳಲ್ಲಿ ಐದು ಶತಕಗಳು ಮತ್ತು ಆರು ಅರ್ಧ ಶತಕಗಳನ್ನು ಗಳಿಸಿದ್ದಾರೆ. 200ರ ಅತ್ಯುತ್ತಮ ಸ್ಕೋರ್ ಗಳಿಸಿದ್ದಾರೆ. ಅವರು ವೆಸ್ಟ್ ಇಂಡೀಸ್ ವಿರುದ್ಧ ಒಟ್ಟು 70 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 57.98 ರ ಸರಾಸರಿಯಲ್ಲಿ 3,653 ರನ್ ಗಳಿಸಿದ್ದಾರೆ. ಅವರು ತಂಡದ ವಿರುದ್ಧ 11 ಶತಕಗಳು ಮತ್ತು 22 ಅರ್ಧ ಶತಕಗಳನ್ನು ಗಳಿಸಿದ್ದಾರೆ. 200 ಅತ್ಯುತ್ತಮ ಸ್ಕೋರ್​ ಆಗಿದೆ.

ಇದನ್ನೂ ಓದಿ: IND vs WI: ಆರಂಭಿಕರಾಗಿ ಜೈಸ್ವಾಲ್ ಕಣಕ್ಕೆ​​: ಎಡ-ಬಲದ ಕಾಂಬಿನೇಷನ್‌ನಲ್ಲಿ ಟೀಂ​ ಇಂಡಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.