ETV Bharat / sports

WTC Final: ಟೀಂ ಇಂಡಿಯಾ ಸದಸ್ಯರೊಂದಿಗೆ ಪೋಸ್​ ನೀಡಿದ ಕ್ಯಾಪ್ಟನ್​ ಕೊಹ್ಲಿ!

author img

By

Published : Jun 17, 2021, 6:22 PM IST

ಭಾರತ-ನ್ಯೂಜಿಲ್ಯಾಂಡ್ ತಂಡ ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಮುಖಾಮುಖಿಯಾಗುತ್ತಿದ್ದು, ನಾಳೆಯಿಂದ ಪಂದ್ಯ ಆರಂಭಗೊಳ್ಳಲಿದೆ.

WTC Final
WTC Final

ಸೌಂತಪ್ಟನ್: ನಾಳೆಯಿಂದ ಭಾರತ-ನ್ಯೂಜಿಲ್ಯಾಂಡ್​ ತಂಡಗಳ ಮಧ್ಯೆ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಫೈನಲ್​ ಪಂದ್ಯ ಆರಂಭಗೊಳ್ಳಲಿದ್ದು, ಅದಕ್ಕಾಗಿ ಉಭಯ ತಂಡಗಳು ಹೊಸ ರಣತಂತ್ರದೊಂದಿಗೆ ಕಣಕ್ಕಿಳಿಯಲು ಸಜ್ಜುಗೊಂಡಿವೆ. ಇದರ ಮಧ್ಯೆ ಟೀಂ ಇಂಡಿಯಾ ಪ್ಲೇಯರ್ಸ್​​ ತಮ್ಮ ನಾಯಕ ಹಾಗೂ ಕೋಚ್​​ನೊಂದಿಗೆ ಫೋಟೋಗೆ ಪೋಸ್​ ನೀಡಿದ್ದಾರೆ.

ಭಾರತೀಯ ಕ್ರಿಕೆಟ್​ ಮಂಡಳಿ(ಬಿಸಿಸಿಐ) ಈ ಫೋಟೋ ತಮ್ಮ ಟ್ವಟಿರ್​ನಲ್ಲಿ ಶೇರ್ ಮಾಡಿಕೊಂಡಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗಾಗಿ ಪ್ರಕಟಗೊಂಡಿರುವ 15 ಸದಸ್ಯರ ಬಳಗ ಈ ಪೋಟೋದಲ್ಲಿದ್ದು, ಅದರಲ್ಲಿ ತಂಡದ ಕೋಚ್​ ರವಿಶಾಸ್ತ್ರಿ ಕೂಡ ಇದ್ದಾರೆ. ಈ ಫೋಟೋವನ್ನ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಕೂಡ ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಗೆಲುವು ಸಾಧಿಸಿರುವ ನ್ಯೂಜಿಲ್ಯಾಂಡ್ ತಂಡ ಆತ್ಮವಿಶ್ವಾಸದಲ್ಲಿದೆ. ಆದರೆ, ಅನುಭವಿ ಬಳಗ ಹೊಂದಿರುವ ಟೀಂ ಇಂಡಿಯಾ ಕೂಡ ಈಗಾಗಲೇ ಕಠಿಣ ಅಭ್ಯಾಸ ನಡೆಸಿದ್ದು, ಎದುರಾಳಿ ತಂಡಕ್ಕೆ ತಿರುಗೇಟು ನೀಡುವ ಎಲ್ಲ ಯೋಜನೆ ರೂಪಿಸಿಕೊಂಡಿದೆ. ನಾಳೆಯಿಂದ ಆರಂಭಗೊಳ್ಳಲಿರುವ ಹಣಾಹಣಿಯಲ್ಲಿ ಕನ್ನಡಿಗರಾದ ಕೆ.ಎಲ್​ ರಾಹುಲ್​ ಹಾಗೂ ಮಯಾಂಕ್​ ಅಗರವಾಲ್​ ಇಲ್ಲದಿರುವುದು ಕನ್ನಡಿಗರಿಗೆ ಸ್ವಲ್ಪ ಮಟ್ಟದ ಬೇಸರ ಮೂಡಿಸಿದೆ.

ಇದನ್ನೂ ಓದಿರಿ: Rapid fire: ಇಂಗ್ಲೆಂಡ್‌ನಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಏನಿಷ್ಟ? ಅವರ ಉತ್ತರ ಹೀಗಿತ್ತು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.