ಸೌತಾಂಪ್ಟನ್: ಇಲ್ಲಿನ ಏಜಿಯಸ್ ಬೌಲ್ ಮುಕ್ತಾಯಗೊಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ನ್ಯೂಜಿಲೆಂಡ್ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ 170 ರನ್‌ಗಳಿಗೆ ಆಲೌಟ್ ಆಗುವ ಮೂಲಕ ವಿರಾಟ್ ಕೊಹ್ಲಿ ಪಡೆ 139ರನ್‌ಗಳ ಗುರಿ ನೀಡಿತು. ಸಾಧಾರಣ ಗುರಿ ಬೆನ್ನಟ್ಟಿದ ಕೇನ್ ಮಿಲಿಯಮ್ಸನ್ ಪಡೆ 2 ವಿಕೆಟ್ ಕಳೆದುಕೊಂಡು ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿ ಚಾಂಪಿಯನ್ ಎನಿಸಿಕೊಂಡು ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದೆ. ಕಳೆದ ಬಾರಿಯ ಏಕದಿನ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಸೋತ ಸೆಡನ್ನು ತೀರಿಸಿಕೊಳ್ಳುವಲ್ಲಿ ಟೀಂ ಇಂಡಿಯಾ ವಿಫಲವಾಯಿತು.
ನ್ಯೂಜಿಲೆಂಡ್ ತಂಡದ ನಾಯಕ ವಿಲಿಯಮ್ಸನ್ (89 ಎಸೆತಗಳಲ್ಲಿ 52 ರನ್) ಮತ್ತು ಟೇಲರ್ (100 ಎಸೆತಗಳಲ್ಲಿ 47ರನ್) ಉತ್ತಮ ಪ್ರದರ್ಶನ ನೀಡಿದರು. ಆರಂಭಿಕರಾಗಿ ಕಣಕ್ಕಿಳಿದಿದ್ದ ಲಾಥಮ್-ಕಾನ್ವೇ 33ರನ್‌ಗಳ ಜೊತೆಯಾಟ ನೀಡಿದರು. ಈ ಜೋಡಿಯನ್ನು ಸ್ಪಿನ್ನರ್ ಆರ್.ಅಶ್ವಿನ್ ಮುರಿದರು. 41 ಎಸೆತಗಳಿಂದ ಲಾಥಮ್ 9 ಹಾಗೂ 47 ಎಸೆತಗಳಿಂದ ಕಾನ್ವೇ 19 ರನ್ ಗಳಿಸಿ ಇಬ್ಬರೂ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್‌ಗೆ ಬಂದ ರಾಸ್ ಟೇಲರ್ ಮತ್ತು ನಾಯಕ ಕೇನ್ ವಿಯಮ್ಸನ್ ಎಚ್ಚರಿಕೆಯ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲುವಿನ ದಡ ಸೇರಿದರು.
64ಕ್ಕೆ2 ಇದ್ದ ಭಾರತ ಕೊನೆಯ ದಿನವಾದ ಇಂದು 73 ಓವರ್ಗಳಲ್ಲಿ ಕೇವಲ 170ಕ್ಕೆ ಸರ್ವಪತನಗೊಂಡಿತು. 5ನೇ ದಿನ 8 ರನ್ಗಳಿಸಿದ್ದ ಕೊಹ್ಲಿ ಇಂದು ಕೇವಲ 13ರನ್ ಮತ್ತು ಪೂಜಾರ 15 ರನ್ಗಳಿಸಿ ಕೈಲ್ ಜೆಮೀಸನ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಉಪನಾಯಕ ಅಜಿಂಕ್ಯ ರಹಾನೆ 15 ರನ್ಗಳಿಸಿ ಟ್ರೆಂಟ್ ಬೌಲ್ಟ್ ಬೌಲಿಂಗ್ನಲ್ಲಿ ವಾಟ್ಲಿಂಗ್ ಕ್ಯಾಚ್ ನೀಡಿದರೆ ಔಟಾದರು. 109ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್‌ಗೆ ಆಗಮಿಸಿದ ಜಡೇಜಾ, ಪಂತ್ ಜೊತೆ ಸೇರಿ 6ನೇ ವಿಕೆಟ್ಗೆ 33 ರನ್‌ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. ಆದರೆ 16 ರನ್ಗಳಿಸಿದ್ದ ಜಡೇಜಾ ನೀಲ್ ವ್ಯಾಗ್ನರ್ ಬೌಲಿಂಗ್ನಲ್ಲಿ ಕೀಪರ್ ವಾಟ್ಲಿಂಗ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಸಂಕ್ಷೀಪ್ತ ಸ್ಕೋರ್: ಭಾರತ ಮೊದಲ ಇನ್ನಿಂಗ್ಸ್ 217-10(92.1)
ನ್ಯೂಜಿಲೆಂಟ್ ಮೊದಲ ಇನ್ನಿಂಗ್ಸ್‌ಗೆ 249-10(99.2)
ಭಾರತ ಎರಡನೇ ಇನ್ನಿಂಗ್ಸ್ 170-10(73)
ನ್ಯೂಜಿಲೆಂಟ್ ಎರಡನೇ ಇನ್ನಿಂಗ್ಸ್‌ಗೆ 140-2(45.5)