ETV Bharat / sports

ಭಾರತಕ್ಕಿಂತ ಕಿವೀಸ್​ WTC ಫೈನಲ್​ ಗೆಲ್ಲುವ ನೆಚ್ಚಿನ ತಂಡ: ಆದರೆ ಕೊಹ್ಲಿ ಟಾಪ್ ಸ್ಕೋರರ್ : ಅಗರ್ಕರ್ ವಿಶ್ವಾಸ​ - ಅಜಿತ್​ ಅಗರ್ಕರ್​ ಟೆಸ್ಟ್​ಚಾಂಪಿಯನ್​ಶಿಪ್ ಫೈನಲ್

ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗಾಗಿ ಕಾದು ಕುಳಿತಿವೆ. ಈ ಪಂದ್ಯವನ್ನು ನ್ಯೂಜಿಲ್ಯಾಂಡ್​ ಗೆಲ್ಲಲಿದೆ ಎಂದು ಸ್ಕಾಟ್​ ಸ್ಟೈರಿಸ್​ ಭಾವಿಸಿದರೆ, ಅಗರ್ಕರ್​ ಯಾವುದೇ ಒಂದು ತಂಡವನ್ನು ಆಯ್ಕೆ ಮಾಡುವುದು ಕಷ್ಟ. ಆದರೆ, ನ್ಯೂಜಿಲ್ಯಾಂಡ್​ ಆರಂಭಿಕವಾಗಿ ಮುನ್ನಡೆ ಸಾಧಿಸಬಹುದು ಎಂದು ತಿಳಿಸಿದ್ದಾರೆ.

ಅಜಿತ್ ಅಗರ್ಕರ್​
ಅಜಿತ್ ಅಗರ್ಕರ್​
author img

By

Published : Jun 8, 2021, 5:01 PM IST

ಸೌತಾಂಪ್ಟನ್: ಇಂಗ್ಲೆಂಡ್​ನ ಸೌತಾಂಪ್ಟನ್​ನಲ್ಲಿ ನಡೆಯಲಿರುವ ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯದಲ್ಲಿ ಭಾರತಕ್ಕಿಂತ ನ್ಯೂಜಿಲ್ಯಾಂಡ್ ತಂಡ ಗೆಲ್ಲುವ ನೆಚ್ಚಿನ ತಂಡ ಎಂದು ಭಾರತ ತಂಡದ ಮಾಜಿ ವೇಗಿ ಅಜಿತ್ ಅಗರ್ಕರ್​ ಮತ್ತು ಕಿವೀಸ್ ತಂಡದ ಸ್ಕಾಟ್​ ಸ್ಟೈರಿಸ್​ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗಾಗಿ ಕಾದು ಕುಳಿತಿವೆ. ಈ ಪಂದ್ಯವನ್ನು ನ್ಯೂಜಿಲ್ಯಾಂಡ್​ ಗೆಲ್ಲಲಿದೆ ಎಂದು ಸ್ಕಾಟ್​ ಸ್ಟೈರಿಸ್​ ಭಾವಿಸಿದರೆ, ಅಗರ್ಕರ್​ ಯಾವುದೇ ಒಂದು ತಂಡವನ್ನು ಆಯ್ಕೆ ಮಾಡುವುದು ಕಷ್ಟ, ಆದರೆ, ನ್ಯೂಜಿಲ್ಯಾಂಡ್​ ಆರಂಭಿಕವಾಗಿ ಮುನ್ನಡೆ ಸಾಧಿಸಬಹುದು ಎಂದು ತಿಳಿಸಿದ್ದಾರೆ.

ನ್ಯೂಜಿಲ್ಯಾಂಡ್ ಗೆಲ್ಲಲಿದೆ ಎಂದು ನಾನು ಭಾವಿಸುತ್ತೇನೆ. ಅವರು 6 ವಿಕೆಟ್​ಗಳಿಂದ ಗೆಲ್ಲಬಹುದು. ಡಿವೋನ್ ಕಾನ್ವೆ ಪಂದ್ಯದಲ್ಲಿ ಗರಿಷ್ಠ ಸ್ಕೋರರ್​ ಮತ್ತು ಟ್ರೆಂಟ್​ ಬೌಲ್ಟ್​ ಅತಿ ಹೆಚ್ಚು ವಿಕೆಟ್​ ಪಡೆಯುವ ಬೌಲರ್ ಆಗಲಿದ್ದಾರೆ ಎಂದು ಸ್ಟೈರಿಸ್​ ಭವಿಷ್ಯ ನುಡಿದಿದ್ದಾರೆ.

ಯಾರು ಗೆಲ್ಲುತ್ತಾರೆ ಎಂದು ಒಂದು ತಂಡವನ್ನು ಆಯ್ಕೆ ಮಾಡುವುದು ತುಂಬಾ ಕಷ್ಟವಾಗಲಿದೆ.​ ನನ್ನ ಪ್ರಕಾರ ನ್ಯೂಜಿಲ್ಯಾಂಡ್​ ಗೆಲ್ಲುವ ಅವಕಾಶ ಹೆಚ್ಚಿದೆ ಎಂದಷ್ಟೇ ಹೇಳಹುದು ಎಂದು ಭಾರತದ ಮಾಜಿ ವೇಗಿ ಅಗರ್​ಕರ್​ ಹೇಳಿದ್ದಾರೆ.

ಇನ್ನು ಗರಿಷ್ಠ ರನ್​ ಸ್ಕೋರರ್​ ಆಗಿ ನಾನು ಕೊಹ್ಲಿಯನ್ನು ಮತ್ತು ಗರಿಷ್ಠ ವಿಕೆಟ್​ ಮೊಹಮ್ಮದ್ ಶಮಿ ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ. ಕೊಹ್ಲಿ 2ನೇ ಬಾರಿ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಅವರ ಸಾಮರ್ಥ್ಯವೇನು ಎಂದು ತೋರಿಸಿದ್ದಾರೆ. ಕಠಿಣ ಸಂದರ್ಭದಲ್ಲೂ ಅವರು ಭಾರತದ ಪರ ಎದ್ದು ನಿಲ್ಲುವ ಆಟಗಾರ ಎಂದು ಅಗರ್ಕರ್​ ಹೇಳಿದ್ದಾರೆ.

ಮೊಹಮ್ಮದ್ ಶಮಿ ಗರಿಷ್ಠ ವಿಕೆಟ್ ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ. ಬುಮ್ರಾ ಕೂಡ ವೇಗವಾಗಿ ಬೆಳೆಯುತ್ತಿದ್ದಾರೆ. ಆದರೆ, ನನ್ನ ಪ್ರಕಾರ ಶಮಿ ಭಾರತದ ನಂಬರ್ 1 ಬೌಲರ್, ಅದರಲ್ಲೂ ಟೆಸ್ಟ್​ ಕ್ರಿಕೆಟ್ ಮತ್ತು ಅವರಿಗೆ ಪರಿಸ್ಥಿತಿ ಯಾವುದೇ ವಿಷಯವಾಗುವುದಿಲ್ಲ ಎಂದು ಅಗರ್ಕರ್​ ಹೇಳಿದ್ದಾರೆ.

ಇದನ್ನು ಓದಿ: ವಿಶ್ವ ಟೆಸ್ಟ್​ ಸರಣಿ ಮುಗಿಯುತ್ತಿದ್ದಂತೆ ಭಾರತೀಯ ಆಟಗಾರರಿಗೆ ಬಯೋಬಬಲ್​ನಿಂದ ಮುಕ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.