ETV Bharat / sports

IND vs NZ WTC Final: 3 ವಿಕೆಟ್​ನಷ್ಟಕ್ಕೆ ಭಾರತ 146ರನ್​​; ಬ್ಯಾಡ್​ ಲೈಟ್​ನಿಂದ ಆಟಕ್ಕೆ ಬ್ರೇಕ್​

ಚಹಾ ವಿರಾಮದ ವೇಳೆಗೆ ಟೀಂ ಇಂಡಿಯಾ 3ವಿಕೆಟ್​ನಷ್ಟಕ್ಕೆ 146 ರನ್​ಗಳಿಕೆ ಮಾಡಿದ್ದು, ಸದ್ಯ ನಾಯಕ ಕೊಹ್ಲಿ ಹಾಗೂ ಉಪನಾಯಕ ರಹಾನೆ ಮೈದಾನದಲ್ಲಿದ್ದಾರೆ. ಆದರೆ ಮಂದ ಬೆಳಕಿನ ಕಾರಣ ಆಟಕ್ಕೆ ಬ್ರೇಕ್​ ಬಿದ್ದಿದೆ.

WTC final
WTC final
author img

By

Published : Jun 19, 2021, 8:24 PM IST

Updated : Jun 19, 2021, 10:50 PM IST

ಸೌತಾಂಪ್ಟನ್​: ಭಾರತ-ನ್ಯೂಜಿಲ್ಯಾಂಡ್​ ತಂಡಗಳ ನಡುವೆ ಇಂಗ್ಲೆಂಡ್​ನ ಸೌತಾಂಪ್ಟನ್​ನಲ್ಲಿ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ ಆರಂಭಗೊಂಡಿದೆ. ಟಾಸ್​ ಸೋತಿರುವ ಟೀಂ ಇಂಡಿಯಾ ಬ್ಯಾಟಿಂಗ್​ ನಡೆಸುತ್ತಿದ್ದು, ಚಹಾ ವಿರಾಮದ ವೇಳೆಗೆ ಕೊಹ್ಲಿ ಪಡೆ 3ವಿಕೆಟ್​ನಷ್ಟಕ್ಕೆ 146ರನ್​ಗಳಿಕೆ ಮಾಡಿದೆ. ಹೀಗಾಗಿ ಕೊಹ್ಲಿ ಪಡೆ ಎದುರಾಳಿ ಬೌಲಿಂಗ್​ ದಾಳಿಗೆ ತತ್ತರಿಸಿ ಆರಂಭಿಕ ಆಘಾತಕ್ಕೊಳಗಾಗಿದೆ.

ಆರಂಭಿಕರಾಗಿ ಕಣಕ್ಕಿಳಿದ ರೋಹಿತ್​ ಶರ್ಮಾ(34ರನ್​) ಹಾಗೂ ಶುಬ್ಮನ್ ಗಿಲ್(28ರನ್​)​ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಈ ಜೋಡಿ ಮೊದಲ ವಿಕೆಟ್​ನಷ್ಟವಿಲ್ಲದೇ 62ರನ್​ಗಳಿಕೆ ಮಾಡಿದರು. ಆದರೆ, ಇದರ ಬೆನ್ನಲ್ಲೇ ಇಬ್ಬರ ವಿಕೆಟ್​ ಪತನಗೊಳ್ಳುತ್ತಿದ್ದಂತೆ ಟೀಂ ಇಂಡಿಯಾ ಸಂಕಷ್ಟಕ್ಕೊಳಗಾಯಿತು. ಈ ವೇಳೆ, ಒಂದಾದ ಚೇತೇಶ್ವರ ಪೂಜಾರಾ ಹಾಗೂ ವಿರಾಟ್​ ಕೊಹ್ಲಿ ತಂಡಕ್ಕೆ ಮತ್ತೊಮ್ಮೆ ಚೇತರಿಕೆ ನೀಡುವ ಕೆಲಸ ಮಾಡಿದ್ರು. 54 ಎಸೆತ ಎದುರಿಸಿ 8ರನ್​ಗಳಿಕೆ ಮಾಡಿದ್ದ ಪೂಜಾರಾ ಕೂಡ ಎಲ್​ಬಿ ಬಲೆಗೆ ಬಿದ್ದರು. ಸದ್ಯ 44ರನ್​ಗಳಿಕೆ ಮಾಡಿರುವ ಕೊಹ್ಲಿ ಹಾಗೂ 29ರನ್​ಗಳಿಸಿರುವ ರಹಾನೆ ಮೈದಾನದಲ್ಲಿದ್ದಾರೆ.

ಇದನ್ನೂ ಓದಿರಿ: 'ಫ್ಲೈಯಿಂಗ್​​ ಸಿಖ್​​' ಮಿಲ್ಖಾ ಸಿಂಗ್​ ನಿಧನ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ನ್ಯೂಜಿಲ್ಯಾಂಡ್​ ಪರ ಬೌಲ್ಟ್, ಜೇಮಿಸನ್​ ಹಾಗೂ ವ್ಯಾಗ್ನರ್ ತಲಾ 1ವಿಕೆಟ್ ಪಡೆದುಕೊಂಡಿದ್ದು, ನ್ಯೂಜಿಲ್ಯಾಂಡ್ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟಿದ್ದಾರೆ. ನಿನ್ನೆ ಸಂಪೂರ್ಣವಾಗಿ ಮಳೆ ಸುರಿದ ಕಾರಣ ಒಂದು ದಿನ ತಡವಾಗಿ ಪಂದ್ಯ ಆರಂಭಗೊಂಡಿದೆ.

ಬ್ಯಾಡ್​ ಲೈಟ್​ನಿಂದ ಆಟ ಸ್ಥಗಿತ

ಮೊದಲ ದಿನ ಮಳೆ ಸುರಿದ ಕಾರಣ ಎರಡನೇ ದಿನವೂ ಹವಾಮಾನ ವೈಪರಿತ್ಯದಿಂದಾಗಿ ಬ್ಯಾಡ್​ ಲೈಟ್​​ನಿಂದಾಗಿ ಮೇಲಿಂದ ಮೇಲೆ ಆಟ ನಿಲ್ಲಿಸಬೇಕಾಯಿತು. ಅಂತಿಮ ಸೆಶನ್​ ಆಟದ ವೇಳೆ ಮೋಡ ಕವಿದ ವಾತಾವರಣವಿದ್ದಕಾರಣ, ಆಟ ಸ್ಥಗಿತಗೊಳಿಸಲಾಗಿದೆ.

Last Updated : Jun 19, 2021, 10:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.