ಸೌತಾಂಪ್ಟನ್: ಭಾರತ-ನ್ಯೂಜಿಲ್ಯಾಂಡ್ ತಂಡಗಳ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಮೊದಲ ದಿನ ಮಳೆಯಾಟಕ್ಕೆ ಸಂಪೂರ್ಣವಾಗಿ ಬಲಿಯಾಗಿದೆ. ಹೀಗಾಗಿ ಮೊದಲ ದಿನದಾಟದಂದು ಒಂದೇ ಒಂದು ಎಸೆತ ಕೂಡ ಮಾಡಲು ಸಾಧ್ಯವಾಗಿಲ್ಲ. ಇದೀಗ ಪಂದ್ಯಕ್ಕಾಗಿ ನಾಲ್ಕು ದಿನಗಳು ಬಾಕಿ ಉಳಿದಿದ್ದು, ನಾಳೆ ಪಂದ್ಯ ಆರಂಭಗೊಳ್ಳುವ ಸಾಧ್ಯತೆ ಇದೆ.
-
With rain all day in Southampton, the most important decision of the day was shoes or no shoes on the way back from lunch? #WTC21 pic.twitter.com/2rtrrIJi43
— BLACKCAPS (@BLACKCAPS) June 18, 2021 " class="align-text-top noRightClick twitterSection" data="
">With rain all day in Southampton, the most important decision of the day was shoes or no shoes on the way back from lunch? #WTC21 pic.twitter.com/2rtrrIJi43
— BLACKCAPS (@BLACKCAPS) June 18, 2021With rain all day in Southampton, the most important decision of the day was shoes or no shoes on the way back from lunch? #WTC21 pic.twitter.com/2rtrrIJi43
— BLACKCAPS (@BLACKCAPS) June 18, 2021
ವಿಶ್ವ ಟೆಸ್ಟ್ ಚಾಂಪಿಯನ್ಶಿಫ್ ಫೈನಲ್ ಪಂದ್ಯದಲ್ಲಿ ಭಾಗಿಯಾಗಿರುವ ಭಾರತ-ನ್ಯೂಜಿಲ್ಯಾಂಡ್ಗೆ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕುವ ಕಾರಣದಿಂದಾಗಿ ಈ ಪಂದ್ಯ ಮಹತ್ವ ಪಡೆದುಕೊಂಡಿದ್ದು, ಒಂದು ವೇಳೆ ಅಗತ್ಯವೆನಿಸಿದ್ರೆ ಮೀಸಲು ದಿನದಂದು ಕ್ರಿಕೆಟ್ ಪಂದ್ಯ ನಡೆಸುವ ಸಾಧ್ಯತೆ ಸಹ ದಟ್ಟವಾಗಿದೆ. ಆದರೆ ಈ ದಿನದಂದು ಕೇವಲ ಎರಡೂವರೆ ಗಂಟೆ ಮಾತ್ರ ಆಟ ನಡೆಸಲು ಸಾಧ್ಯವಿರುತ್ತದೆ. ಮೊದಲ ದಿನ ಮಳೆಗಾಹುತಿಯಾಗುತ್ತಿದ್ದಂತೆ ಮೀಸಲು ದಿನದಂದು ಕ್ರಿಕೆಟ್ ಆಟ ನಡೆಯಲಿದೆ ಎಂದು ಅನೇಕ ಕ್ರಿಕೆಟ್ ಪ್ರೇಮಿಗಳು ಈಗಾಗಲೇ ಚರ್ಚೆ ಮಾಡಲು ಶುರು ಮಾಡಿದ್ದಾರೆ. ಆದರೆ ಅಗತ್ಯವೆನಿಸಿದರೆ ಮಾತ್ರ ಈ ದಿನ ಪಂದ್ಯ ನಡೆಸಲಾಗುತ್ತದೆ.
ಇದನ್ನೂ ಓದಿರಿ: Shafali Varma: ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಮತ್ತೊಂದು ದಾಖಲೆ ಬರೆದ 17ರ ಪೋರಿ!
ಪ್ರಮುಖವಾಗಿ ಅಗತ್ಯ ಇಲ್ಲದೇ ಹೋದಾಗ ಐಸಿಸಿ ಡ್ರಾ ಅಥವಾ ಟೈ ಎಂದು ಘೋಷಣೆ ಮಾಡುವ ಮೂಲಕ ಎರಡು ತಂಡಗಳನ್ನ ಜಂಟಿಯಾಗಿ ವಿಜೇತ ಎಂದು ಘೋಷಣೆ ಮಾಡಬಹುದು. ಜೂನ್ 18ರಿಂದ 22ರವರೆಗೆ ಐಸಿಸಿ ಟೆಸ್ಟ್ ಚಾಂಪಿಯನ್ಶಿಫ್ ಫೈನಲ್ ಪಂದ್ಯ ನಡೆಯಬೇಕಾಗಿತ್ತು. ಆದರೆ ಈಗಾಗಲೇ ಒಂದು ದಿನ ಮಳೆಗಾಹುತಿಯಾಗಿರುವ ಕಾರಣ ಜೂನ್ 23 ಮೀಸಲು ದಿನವಾಗಿದೆ. ಸೌತಾಂಪ್ಟನ್ನಲ್ಲಿ ಇಂದು ಬೆಳಗ್ಗೆಯಿಂದ ಮಳೆ ಸುರಿಯುತ್ತಿರುವ ಕಾರಣ, ಮುಂದಿನ ನಾಲ್ಕು ದಿನಗಳಲ್ಲೂ ಮಳೆ ಆಗಬಹುದು ಎನ್ನಲಾಗುತ್ತಿದೆ.