ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ. ಮೊದಲ ದಿನದಿಂದಲೂ ಹಿಡಿತ ಸಾಧಿಸುತ್ತಾ ಬಂದಿರುವ ಆಸ್ಟ್ರೇಲಿಯಾ ಭಾರತಕ್ಕೆ ಗೆಲ್ಲಲು ದಾಖಲೆಯ 444 ರನ್ ಗುರಿ ನೀಡಿದೆ. ಸೋಲು- ಗೆಲುವಿಗೆ ಇಂದೇ ಕೊನೆಯ ದಿನವಾಗಿದೆ. ಇತ್ತ, 2ನೇ ಇನಿಂಗ್ಸ್ ಆರಂಭಿಸಿರುವ ಭಾರತ ಕೆಚ್ಚೆದೆಯ ಹೋರಾಟ ನಡೆಸುತ್ತಿದ್ದು, 4ನೇ ದಿನದ ಅಂತ್ಯಕ್ಕೆ 3 ವಿಕೆಟ್ಗೆ 164 ರನ್ ಗಳಿಸಿದೆ. ಗೆಲುವಿಗೆ ಇನ್ನೂ 280 ರನ್ ಬೇಕಿದೆ. ಕೈಯಲ್ಲಿ 7 ವಿಕೆಟ್ಗಳಿವೆ.
4 ದಿನದಾಟದಲ್ಲಿ ಮೇಲುಗೈ ಸಾಧಿಸಿದ ಆಸೀಸ್ ಪಡೆಯನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಪ್ಲಾನ್ನಲ್ಲಿದ್ದ ಭಾರತಕ್ಕೆ ಅಲೆಕ್ಸ್ ಕ್ಯಾರಿ ಮತ್ತು ಮಿಚೆಲ್ ಸ್ಟಾರ್ಕ್ ಬಲವಾದ ಪೆಟ್ಟು ಕೊಟ್ಟರು. ಈ ಇಬ್ಬರು ಸೇರಿ ದೊಡ್ಡ ಇನಿಂಗ್ಸ್ ಕಟ್ಟುವ ಮೂಲಕ ಭಾರತಕ್ಕೆ 444 ರನ್ಗಳ ಸವಾಲಿನ ದಾಖಲೆಯ ಗುರಿ ನೀಡುವಂತೆ ಮಾಡಿದರು.
-
🔑 Kohli the key
— ICC (@ICC) June 11, 2023 " class="align-text-top noRightClick twitterSection" data="
👊 Carey's crucial role
🏏 Catch contention
Plenty of discussion after Day 4 of the #WTC23 Final 🗣https://t.co/t8Hwp1avXs
">🔑 Kohli the key
— ICC (@ICC) June 11, 2023
👊 Carey's crucial role
🏏 Catch contention
Plenty of discussion after Day 4 of the #WTC23 Final 🗣https://t.co/t8Hwp1avXs🔑 Kohli the key
— ICC (@ICC) June 11, 2023
👊 Carey's crucial role
🏏 Catch contention
Plenty of discussion after Day 4 of the #WTC23 Final 🗣https://t.co/t8Hwp1avXs
ಕೊನೆಯ ದಿನ ನಡೆಯುತ್ತಾ ಕಮಾಲ್?: ಟೆಸ್ಟ್ ವಿಶ್ವಕಪ್ ಆಗಿರುವ ಡಬ್ಲ್ಯೂಟಿಸಿಯ ಐದನೇ ಮತ್ತು ಅಂತಿಮ ದಿನವಾದ ಇಂದು ಭಾರತ ಗೆಲ್ಲಬೇಕಾದರೆ, ಬಾಕಿ ಉಳಿದಿರುವ 280 ರನ್ ಗಳಿಸಬೇಕು. ಆಸೀಸ್ ದಾಳಿಕಾರರನ್ನು ಹಿಮ್ಮೆಟ್ಟಿ ಹಾಗೊಂದು ವೇಳೆ ಭಾರತ ಗುರಿ ಮುಟ್ಟಿದ್ದೇ ಆದಲ್ಲಿ ವಿಶ್ವದಾಖಲೆ ಸೃಷ್ಟಿಯಾಗೋದು ಖಚಿತ. ಅಲ್ಲದೇ, ಇದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅತ್ಯಧಿಕ ಗುರಿಯೂ ಆಗಿದೆ. ಟೆಸ್ಟ್ ಇತಿಹಾಸದಲ್ಲಿ 414 ರನ್ ಚೇಸ್ ಮಾಡಿದ್ದೇ ಈವರೆಗಿನ ದಾಖಲೆ. 2003 ರಲ್ಲಿ ಆಂಟಿಗುವಾದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ವೆಸ್ಟ್ ಇಂಡೀಸ್ 7 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತ್ತು.
ಕೊಹ್ಲಿ, ರಹಾನೆಯೇ ಆಧಾರ: 4ನೇ ದಿನದಾಂತ್ಯಕ್ಕೆ ಕ್ರೀಸ್ ಕಾಯ್ದುಕೊಂಡಿರುವ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಮತ್ತು ಮೊದಲ ಇನಿಂಗ್ಸ್ನ ಆಪದ್ಬಾಂಧವ ಅಜಿಂಕ್ಯ ರಹಾನೆಯೇ ಭಾರತದ ಗೆಲುವಿಗಿರುವ ಆಶಾಕಿರಣ. ಇಬ್ಬರೂ ತಲಾ 44 ಮತ್ತು 20 ರನ್ ಗಳಿಸಿದ್ದಾರೆ. ಇಂದು ಬ್ಯಾಟಿಂಗ್ ಮುಂದುವರಿಸಿ ದೊಡ್ಡ ಇನಿಂಗ್ಸ್ ಕಟ್ಟಿದಲ್ಲಿ ಮಾತ್ರ ಗೆಲ್ಲುವ ಸಾಧ್ಯತೆ ಇದೆ. ಇದಲ್ಲದೇ, ಶ್ರೀಕರ್ ಭರತ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್ ಕೂಡ ಮಿಂಚಬೇಕು.
-
Stumps called with Kohli, Rahane keeping India in the hunt! 👊
— ICC (@ICC) June 10, 2023 " class="align-text-top noRightClick twitterSection" data="
Follow the #WTC23 Final 👉 https://t.co/wJHUyVnX0r pic.twitter.com/Z9yMlvCLYA
">Stumps called with Kohli, Rahane keeping India in the hunt! 👊
— ICC (@ICC) June 10, 2023
Follow the #WTC23 Final 👉 https://t.co/wJHUyVnX0r pic.twitter.com/Z9yMlvCLYAStumps called with Kohli, Rahane keeping India in the hunt! 👊
— ICC (@ICC) June 10, 2023
Follow the #WTC23 Final 👉 https://t.co/wJHUyVnX0r pic.twitter.com/Z9yMlvCLYA
ಚೇತೇಶ್ವರ್ ಪೂಜಾರಾ ವೈಫಲ್ಯ: ರಾಹುಲ್ ದ್ರಾವಿಡ್ ಬಳಿಕ ಸಿಕ್ಕ 'ಮತ್ತೊಂದು ಗೋಡೆ' ಎಂದೇ ಕರೆಸಿಕೊಳ್ಳುವ ಚೇತೇಶ್ವರ್ ಪೂಜಾರಾ ಕಳಪೆ ಆಟ ತಂಡಕ್ಕೆ ದುಬಾರಿಯಾಗಿದೆ. ಐಪಿಎಲ್ ಆಡದೇ ನೇರವಾಗಿ ಡಬ್ಲ್ಯೂಟಿಸಿಯಲ್ಲಿ ಆಡುತ್ತಿರುವ ಏಕೈಕ ಆಟಗಾರನಾಗಿದ್ದ ಪೂಜಾರಾ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಅಲ್ಲದೇ, ಕೌಂಟಿ ಕ್ರಿಕೆಟ್ನಲ್ಲಿ ರಾಶಿ ರಾಶಿ ರನ್ ಕಲೆ ಹಾಕಿ ಇಂಗ್ಲೆಂಡ್ ವಾತಾವರಣಕ್ಕೆ ಒಗ್ಗಿದ್ದರು. ಆದರೆ, ಮೊದಲ ಇನಿಂಗ್ಸ್ನಲ್ಲಿ 14 ರನ್, 2ನೇ ಇನಿಂಗ್ಸ್ನ ಮಹತ್ವದ ಘಟ್ಟದಲ್ಲಿ 27 ರನ್ಗೆ ಔಟಾದರು. ಅಲ್ಲಿ, ಚುಟುಕು ಮಾದರಿಯಲ್ಲಿ ಬಳಸುವ ಹೊಡೆತವಾದ 'ಅಪ್ಪರ್ ಕಟ್' ಮಾಡಲು ಹೋಗಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ್ದೂ ಟೀಕೆಗೆ ಗುರಿಯಾಗಿದೆ.
ವಿವಾದಿತ ಕ್ಯಾಚ್ಗೆ ಗಿಲ್ ಬಲಿ: ಬೆಟ್ಟದಂತ ಗುರಿ ಮುಂದೆ ಇದ್ದಾಗ ಗೆಲ್ಲಬೇಕೆಂಬ ಹಠದಿಂದಲೇ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ 'ಅಂಪೈರಿಂಗ್' ಆಘಾತ ನೀಡಿದೆ. ಭರ್ಜರಿ ಲಯದಲ್ಲಿರುವ ಶುಭಮನ್ ಗಿಲ್ 18 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದಾಗ ಬೋಲೆಂಡ್ ಎಸೆತದಲ್ಲಿ ಬ್ಯಾಟ್ಗೆ ಸವರಿಕೊಂಡು ಹೋದ ಚೆಂಡು ಸ್ಲಿಪ್ನಲ್ಲಿದ್ದ ಕ್ಯಾಮರೂನ್ ಗ್ರೀನ್ ಕೈ ಸೇರಿತು. ಆದರೆ, ಚೆಂಡು ನೆಲಕ್ಕೆ ತಾಗಿದ ಅನುಮಾನವಿತ್ತು. ಮೂರನೇ ಅಂಪೈರ್ ಹಲವು ರಿಪ್ಲೈಗಳ ಮೂಲಕ ಪರಿಶೀಲಿಸಿ ಔಟ್ ನೀಡಿದರು. ದೃಶ್ಯಗಳಲ್ಲಿ ಚೆಂಡು ನೆಲಕ್ಕೆ ತಾಕುತ್ತಿರುವುದು ಕಂಡುಬಂದಿತ್ತು. ಆದರೆ, ಅಂಪೈರ್ ಐಸಿಸಿ ನಿಯಮಗಳಡಿ ಔಟ್ ನೀಡಿದರು. ಇದು ಭಾರತಕ್ಕೆ ದೊಡ್ಡ ಹೊಡೆತ ನೀಡಿತು.
-
🔎🔎🤦🏻♂️ pic.twitter.com/pOnHYfgb6L
— Shubman Gill (@ShubmanGill) June 10, 2023 " class="align-text-top noRightClick twitterSection" data="
">🔎🔎🤦🏻♂️ pic.twitter.com/pOnHYfgb6L
— Shubman Gill (@ShubmanGill) June 10, 2023🔎🔎🤦🏻♂️ pic.twitter.com/pOnHYfgb6L
— Shubman Gill (@ShubmanGill) June 10, 2023
ಈ ಬಗ್ಗೆ ಹಲವು ಹಿರಿಯ ಆಟಗಾರರೂ ಸೇರಿದಂತೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ವತಃ ಗಿಲ್ ಕ್ಯಾಚ್ ಹಿಡಿದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಬೇಸರಿಸಿದ್ದಾರೆ.
ಪಂದ್ಯ ಡ್ರಾ ಆದರೆ..: ಭಾರತದ ತನ್ನಲ್ಲಿರುವ 7 ವಿಕೆಟ್ಗಳಿಂದ ಗೆಲುವು ಸಾಧಿಸಿದರೆ ಚರಿತ್ರೆ ಸೃಷ್ಟಿಸಲಿದೆ. ಹಾಗೊಂದು ವೇಳೆ ಸಾಧ್ಯವಾಗದೇ ಇದ್ದಲ್ಲಿ ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಬಹುದು. ಅತ್ತ ಆಸ್ಟ್ರೇಲಿಯಾ ಗೆಲ್ಲಬೇಕಾದರೆ, ಭಾರತವನ್ನು ಆಲೌಟ್ ಮಾಡಬೇಕು. ಇದ್ಯಾವುದೂ ಘಟಿಸದೇ ಪಂದ್ಯ ಡ್ರಾ ಆದಲ್ಲಿ ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಆಗಿ ಘೋಷಿಸಲಾಗುತ್ತದೆ. ಉಭಯ ತಂಡಗಳಲ್ಲಿ ಯಾರೇ ಗೆದ್ದರೂ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಲಿದ್ದಾರೆ. ಕಳೆದ ಬಾರಿ ನ್ಯೂಜಿಲ್ಯಾಂಡ್ ಚಾಂಪಿಯನ್ ಆಗಿತ್ತು.
ಇದನ್ನೂ ಓದಿ: WTC Final 2023: ಆಸಿಸ್ಗೆ ಕೊನೆಯಲ್ಲಿ ಕ್ಯಾರಿ - ಸ್ಟಾರ್ಕ್ ಬಲ.. ಭಾರತಕ್ಕೆ 444 ರನ್ ಗುರಿ ನೀಡಿದ ಆಸ್ಟ್ರೇಲಿಯಾ