ಮುಂಬೈ: ಇಲ್ಲಿನ ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ (ಡಬ್ಲ್ಯುಪಿಎಲ್-2023) ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವು ಗುಜರಾತ್ ಜೈಂಟ್ಸ್ ಅನ್ನು 3 ವಿಕೆಟ್‌ಗಳಿಂದ ಸೋಲಿಸಿ ಗೆಲುವಿನ ನಗೆ ಬೀರಿತು. ತಂಡದ ಪರ ಗ್ರೇಸ್ ಹ್ಯಾರಿಸ್ 26 ಎಸೆತಗಳಲ್ಲಿ 59 ರನ್ ಗಳಿಸಿ ಅದ್ಭುತ ಆಟ ಪ್ರದರ್ಶಿಸಿದರು. ಜೊತೆಗೆ, ಕಿರಣ್ ನವಗಿರೆ ಕೂಡ 43 ಎಸೆತಗಳಲ್ಲಿ 53 ರನ್ ಗಳಿಸುವುದರೊಂದಿಗೆ ತಂಡದ ಗೆಲುವಿಗೆ ಕಾರಣರಾದರು.
170 ರನ್ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ಪವರ್‌ಪ್ಲೇನಲ್ಲಿ 35 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡರೂ ದಿಟ್ಟವಾಗಿ ಹೋರಾಡಿತ್ತು. ಗುಜರಾತ್ ಪರ ಆರಂಭಿಕ ಆಟಗಾರ್ತಿ ಎಸ್.ಮೇಘನಾ 24 ರನ್ ಗಳಿಸಿದರೆ, ಹರ್ಲೀನ್ ಡಿಯೋಲ್ 46 ರನ್ ಪಡೆದು ಉತ್ತಮ ಇನ್ನಿಂಗ್ಸ್ ಆಡಿದರು. ಪ್ರಸಕ್ತ ಸಾಲಿನ ಟಿ20 ಲೀಗ್‌ನಲ್ಲಿ ಗುಜರಾತ್ ಸತತ ಎರಡನೇ ಬಾರಿಗೆ ಸೋಲು ಅನುಭವಿಸಿತು. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 143 ರನ್‌ಗಳ ಭಾರಿ ಅಂತರದಿಂದ ಸೋಲುಂಡಿತ್ತು.
-
UP Warriorz right now💪🏻
— Women's Premier League (WPL) (@wplt20) March 5, 2023 " class="align-text-top noRightClick twitterSection" data="
All of us are still recovering from that moment Harris ‘Graced’ everyone with her enthralling knock 😉#TATAWPL | #UPWvGG | @UPWarriorz pic.twitter.com/Ch3jWrTLDg
">UP Warriorz right now💪🏻
— Women's Premier League (WPL) (@wplt20) March 5, 2023
All of us are still recovering from that moment Harris ‘Graced’ everyone with her enthralling knock 😉#TATAWPL | #UPWvGG | @UPWarriorz pic.twitter.com/Ch3jWrTLDgUP Warriorz right now💪🏻
— Women's Premier League (WPL) (@wplt20) March 5, 2023
All of us are still recovering from that moment Harris ‘Graced’ everyone with her enthralling knock 😉#TATAWPL | #UPWvGG | @UPWarriorz pic.twitter.com/Ch3jWrTLDg
ಇದನ್ನೂ ಓದಿ: WPL 2023: ಮೊದಲ ಪಂದ್ಯದಲ್ಲಿ ಎಡವಿದ ಆರ್ಸಿಬಿ, ಡೆಲ್ಲಿ ಬೃಹತ್ ಮೊತ್ತದ ದಾಖಲೆ
ಕಿರಣ್ ನವಗಿರೆ ಬಹಳ ಎಚ್ಚರಿಕೆ ಆಟ ಮುಂದುವರೆಸುವ ಮೂಲಕ ಇನ್ನಿಂಗ್ಸ್‌ಗೆ ಸ್ವಲ್ಪ ಉತ್ತೇಜನ ನೀಡಿದರು. ದೀಪ್ತಿ ಶರ್ಮಾ ಅವರೊಂದಿಗೆ ಸ್ಥಿರತೆ ಕಾಯ್ದುಕೊಂಡು 40 ಎಸೆತಗಳಲ್ಲಿ 50 ರನ್ ಕಲೆ ಹಾಕಿದರು. ಮುಂಬೈ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಗುಜರಾತ್ ನಾಯಕಿ ಬೆತ್ ಮೂನಿ ಗಾಯಗೊಂಡಿದ್ದರು. ಹೀಗಾಗಿ, ಮೂನಿ ಅನುಪಸ್ಥಿತಿಯಲ್ಲಿ ಸ್ನೇಹ ರಾಣಾ ಗುಜರಾತ್ ಜೈಂಟ್ಸ್ ನಾಯಕತ್ವ ವಹಿಸಿಕೊಂಡಿದ್ದರು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 169 ರನ್ ಗಳಿಸಿತು. ಬಳಿಕ ಬ್ಯಾಟಿಂಗ್ ಮಾಡಿದ ಯುಪಿ ತಂಡ, ಒಂದು ಎಸೆತ ಬಾಕಿ ಇರುವಂತೆಯೇ 7 ವಿಕೆಟ್‌ಗಳಿಂದ ಜಯ ಸಾಧಿಸಿತು. ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ರೇಸ್ ಹ್ಯಾರಿಸ್ ಗೆಲುವಿನ ಸಿಕ್ಸರ್ ಹಾಗು 59 ರನ್ ಗಳಿಸಿ ರೋಚಕ ಪಂದ್ಯಕ್ಕೆ ಅಂತ್ಯ ಹಾಡಿದರು.
-
Grace Harris scored a match-winning 59*(26) for @UPWarriorz when the going got tough and bagged the Player of the Match award 👏👏#UPW registered a 3-wicket victory over #GG
— Women's Premier League (WPL) (@wplt20) March 5, 2023 " class="align-text-top noRightClick twitterSection" data="
Scorecard ▶️ https://t.co/vc6i9xFK3L#TATAWPL | #UPWvGG pic.twitter.com/5etguchnw3
">Grace Harris scored a match-winning 59*(26) for @UPWarriorz when the going got tough and bagged the Player of the Match award 👏👏#UPW registered a 3-wicket victory over #GG
— Women's Premier League (WPL) (@wplt20) March 5, 2023
Scorecard ▶️ https://t.co/vc6i9xFK3L#TATAWPL | #UPWvGG pic.twitter.com/5etguchnw3Grace Harris scored a match-winning 59*(26) for @UPWarriorz when the going got tough and bagged the Player of the Match award 👏👏#UPW registered a 3-wicket victory over #GG
— Women's Premier League (WPL) (@wplt20) March 5, 2023
Scorecard ▶️ https://t.co/vc6i9xFK3L#TATAWPL | #UPWvGG pic.twitter.com/5etguchnw3
ಯುಪಿ ವಾರಿಯರ್ಸ್ ತಂಡ ಹೀಗಿದೆ..: ಅಲಿಸ್ಸಾ ಹೀಲಿ (ವಿಕೆಟ್ ಕೀಪರ್ / ನಾಯಕಿ), ಶ್ವೇತಾ ಸೆಹ್ರಾವತ್, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಸಿಮ್ರಾನ್ ಶೇಖ್, ಕಿರಣ್ ನವಗಿರೆ, ದೇವಿಕಾ ವೈದ್ಯ, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್‌ವಾಡ್.
ಗುಜರಾತ್ ಜೈಂಟ್ಸ್: ಸಬ್ಬಿನೇನಿ ಮೇಘನಾ, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡನರ್, ಸೋಫಿಯಾ ಡಂಕ್ಲೆ, ಅನ್ನಾಬೆಲ್ ಸದರ್ಲ್ಯಾಂಡ್, ಕಿಮ್ ಗಾರ್ತ್, ಸುಷ್ಮಾ ವರ್ಮಾ(ವಿಕೆಟ್ ಕೀಪರ್), ದಯಾಲನ್ ಹೇಮಲತಾ, ಸ್ನೇಹ ರಾಣಾ (ನಾಯಕಿ), ತನುಜಾ ಕನ್ವರ್, ಮಾನ್ಸಿ ಜೋಶಿ.
ಇದನ್ನೂ ಓದಿ: ಶೇಷ ಭಾರತಕ್ಕೆ ಇರಾನಿ ಕಪ್: ಪದಾರ್ಪಣೆ ಪಂದ್ಯದಲ್ಲೇ "ಜಯ"ಸ್ವಾಲ್ ಸಾಧನೆ